Mumbai

ಕೊಂಕಣಿ ವೆಲ್ಫೇರ್ ಅಸೋಸಿಯೇಷನ್ ಸಯನ್ : ಕನ್ಯಾ ಮರಿಯಮ್ಮನವರ ಜನ್ಮದಿನೋತ್ಸವ ಮೋಂತಿ  ಪೆಸ್ತ್

Pinterest LinkedIn Tumblr

ಮುಂಬೈ: ಕೊಂಕಣಿ ವೆಲ್ಪರ್ ಅಸೋಸಿಯೇಷನ್ ಸಯನ್, ಇದರ ವತಿಯಿಂದ ಯೇಸುಕ್ರಿಸ್ತರ ಮಾತೆ ಕನ್ಯಾ ಮರಿಯಮ್ಮನ ಜನ್ಮೋತ್ಸವದ ಆಚರಣೆಯು ಸೆ. 13ರಂದು ಸಯನ್ ಸ್ಟೇಷನ್ ಪಕ್ಕದ ಅವರ್ ಲೇಡಿ ಆಫ್ ಗುಡ್ ಕೌನ್ಸೆಲ್ ಇಗರ್ಜಿಯಲ್ಲಿ ಜರಗಿತು.

ಅತಿಥಿ ಚಾನ್ಸಲರ್ ಫಾ| ಶಾವಿಟೊ ಕುರೆಯಾ, ಇಗರ್ಜಿಯ ಧರ್ಮಗುರು ಫಾ| ಟೋನಿ  ಡಿ’ಸೋಜ, ಫಾ|ಜೂಲಿಯಸ್, ಫಾ| ಸಾಳ್ವಡೋರ್ ಡಿ’ಸೋಜ, ಫಾ| ಅರವಿಂದ್ ಅವರು ಪ್ರಕೃತಿ ಮಾತೆಯನ್ನು ಸ್ಮರಿಸುತ್ತ, ಅಭಿನಂದನಾ ಪೂಜೆ ನೆರವೇರಿಸಿ, ಮಾತೆಯ ಆರಾಧನೆಗೈದು, ಹೊಸ ಭತ್ತದ ತೆನೆಯನ್ನು ಭಕ್ತರಿಗೆ ವಿತರಿಸಿ ಶುಭ ಹಾರೈಸಿದರು.

ಅಧ್ಯಕ್ಷರಾದ ಹ್ಯಾರಿ ಸಿಕ್ತ್ವೆರಾ ಅವರ ಮುಂದಾಳತ್ವದಲ್ಲಿ  ಸಭಾ ಕಾರ್ಯಕ್ರಮ ಜರಗಿತು.

ಇಗರ್ಜಿಯ ಕ್ರೈಸ್ತ ಸನ್ಯಾಸಿನಿಯರಾದ ಸಿಸ್ಟರ್ ಶಾಂತಿ, ಸಿಸ್ಟರ್ ಗೀತಾ, ಸಿಸ್ಟರ್ ಲೀಸಿ, ಕಾರ್ಯದರ್ಶಿ ಡೆನಿಸ್ ಡಿ’ಸೋಜ, ಕೋಶಧಿಕಾರಿ ಮೊಲಿ  ಸಿಕ್ತ್ವೆರಾ, ಡುಲ್ಸಿನ್ ಫುರ್ತಾದೋ, ಕಾರ್ಯಧ್ಯಕ್ಷ ಪ್ಲಾವಿಯ ಡಿ:ಸೋಜಾ, ರೀಟಾ ಅರಹ್ನ,, ವನಿತಾ ಡಿಸೋಜ, ರಾಯನ್ ಡಿ’ಸೋಜ, ಸಂತಾನ, ಸಿಲ್ವಸ್ಟರ್, ಹೆಲೆನ್ ಡಿಸೋಜ, ಪೀಟರ್ ಡಿಸೋಜ, ನೊಲಿನ್, ರೋಷಲ್, ಉಪಸ್ಥಿತರಿದ್ದು ಸಹಕರಿಸಿದರು.

ಹಬ್ಬದ ಸಂದೇಶವನ್ನು ಲೀನಾ ಪಿಂಟೋ ನೀಡಿದರು. ವಿಶೇಷ ಆಮಂತ್ರಿಕರಾಗಿ ಹೆನ್ರಿ ಡಿಸೋಜ, ಪಾಲ್ ಡಿಸೋಜ, ಜಾರ್ಜ್ ಪಿಂಟೊ ಭಾಗವಹಿಸಿದರು.

ಈ ಸಂದರ್ಭದಲ್ಲಿ ಎಸೋಸಿಯೇಷನ್ ನ ಸದಸ್ಯರಿಂದ ಸಂಗೀತ, ಕಿರು ಪ್ರಹಸನ,  ನೃತ್ಯ ನಡೆಯಿತು.

ಮಾಜಿ ಅಧ್ಯಕ್ಷ ಡುಲ್ಸಿನ್ ಫುರ್ತಾದೋ ಧನ್ಯವಾದ ಸಮರ್ಪಸಿದರು.

ಲಕ್ಷ್ಮೀ ಕ್ಯಾಟರರರ್ಸ್ ನ ಮಾಲಕರದ ಸತೀಶ್ ಶೆಟ್ಟಿ, ಭಾರತದ ನೇವಿಯ ನಿವ್ರತ್ತ ಅಧಿಕಾರಿ ಸಂಪತ್ ಶೆಟ್ಟಿ, ಕನ್ನಡ ಸಂಘ ಸಯನ್ ನ  ಅಧ್ಯಕ್ಷ ಪ್ರವೀಣ್ ಭಟ್,  ಜತೆ ಕೋಶಾಧಿಕಾರಿ ದಯಾನಂದ ಮೂಲ್ಯ, ಜತೆ ಕಾರ್ಯದರ್ಶಿಗಳಾದ ಜಯಶೀಲ ಮೂಲ್ಯ, ಉಮೇಶ್ ಶೆಟ್ಟಿ ಕುಕ್ಕುಂದೂರು, ಉದ್ಯಮಿ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.

ಕೊನೆಗೆ ಎಸೋಸಿಯೇಷನ್ ಸದಸ್ಯರು ತಯಾರಿಸಿದ ಹೊಸ ಅಕ್ಕಿಯ ಊಟದ ವ್ಯವಸ್ಥೆ ಮಾಡಲಾಗಿತ್ತು.

Comments are closed.