Mumbai

ಜಿ.ಎಸ್.ಬಿ.ಎಸ್. ಮೆಡಿಕಲ್ ಟ್ರಸ್ಟ್ ಸುವರ್ಣ ಮಹೋತ್ಸವ ಯೋಜನೆ, ಮಾಹಿಮ್ ಘಟಕ, ಭೌತಚಿಕಿತ್ಸೆ ಕೇಂದ್ರದ ವಿಸ್ತರಣೆಯ ಉದ್ಘಾಟನೆ

Pinterest LinkedIn Tumblr

ಮುಂಬಯಿ: ಜಿ.ಎಸ್.ಬಿ. ಸಭಾದ ಮೆಡಿಕಲ್ ಟ್ರಸ್ಟ್ ಸುವರ್ಣ ಮಹೋತ್ಸವ ಯೋಜನೆಯ ಅಂಗವಾಗಿ ಮಾಹಿಮ್ ಘಟಕದ ಮತ್ತು ಭೌತಚಿಕಿತ್ಸೆ ಕೇಂದ್ರದ ವಿಸ್ತರಣೆಯ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಮಾಹಿಮ್ ಪಶ್ಚಿಮ ದ ಜೆ.ಎನ್. ವಾಡಿಯಾ ವೈದ್ಯಕೀಯ ಕೇಂದ್ರದಲ್ಲಿ ನೆರವೇರಿತು.

ಜಿಯೋ ಫೈನಾನ್ಷಿಯಲ್ ಸರ್ವಿಸಸ್‌ನ ಕಾರ್ಯಾಧ್ಯಕ್ಷರಾದ ಕೆ.ವಿ.ಕಾಮತ್ ಅವರು ಮುಖ್ಯ ಅತಿಥಿಯಾಗಿ ಉದ್ಘಾಟನಾ ಕಾರ್ಯವನ್ನು ನೆರವೇರಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ ಜಿ.ಎಸ್.ಬಿ.ಎಸ್. ಮೆಡಿಕಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಸುಹಾಸ್ ಪ್ರಭು ಮಾತನಾಡುತ್ತಾ ಈ ಪುನರ್ವಸತಿ ಕೇಂದ್ರವು ಮುಖ್ಯವಾಗಿ ಪಾರ್ಶ್ವವಾಯು, ಹೃದಯಾಘಾತ, ಗಾಯಗೊಂಡ ಕ್ರೀಡಾ ಅಭ್ಯರ್ಥಿಗಳು, ಅಪಘಾತ ಸಂತ್ರಸ್ತ ಮಕ್ಕಳು ಇತ್ಯಾದಿ ಜನರಿಗೆ ಸೇವೆ ಸಲ್ಲಿಸಲು ಸಹಕಾರಿಯಾಗಿದೆ ಎಂದರು.

ಭೌತಚಿಕಿತ್ಸಕ ಡಾ. ವಿಮಲ್ ತೆಲಂಗ್, ಅವರು ಮಾತನಾಡುತ್ತಾ ಎಲ್ಲಾ ಕೆ.ವಿ.ಕಾಮತ್ ಅವರು ಎಲ್ಲಾ ವಿವರಣೆಯನ್ನು ಶ್ರದ್ಧೆಯಿಂದ ಆಲಿಸುತ್ತಾ ತಮ್ಮ ದಿವಂಗತ ಪತ್ನಿ ರಾಜಲಕ್ಷ್ಮಿ ಕಾಮತ್ ಅವರ ಸ್ಮರಣಾರ್ಥ ತಮ್ಮ ಸೇವೆಯನ್ನು ನೀಡಲು ಸಂತೋಷಪಟ್ಟರು ಎಂದರು.

ಏಜಸ್ ಫೆಡರಲ್ ಇನ್ಶುರೆನ್ಸ್ ಕಂಪನಿಯ ಅಜಗಾಂವ್ಕರ್, ಪವನ್ ವ್ಯಾಸ್ ಮೊದಲಾದವರು ಟ್ರಸ್ಟ್‌ಗೆ ಅದರ ಎಲ್ಲಾ ಕಷ್ಟದ ಸಮಯದಲ್ಲಿ ಮತ್ತು ಈಗ ಸುವರ್ಣ ಮಹೋತ್ಸವದ ವರ್ಷದಲ್ಲಿಯೂ ಬೆಂಬಲ ನೀಡಿದ್ದಾರೆ. ದಿ. ಡಾ.ಮಾಧವ್ ಆಚಾರ್ಯ ಅವರ ಹೆಸರಿನಲ್ಲಿ, ಮೀರ್ ಆಚಾರ್ಯ ಅವರು ಕೇಂದ್ರಕ್ಕೆ ಅವಳಿ ಕುರ್ಚಿ ದಂತ ಘಟಕವನ್ನು ಕೊಡುಗೆಯಾಗಿ ನೀಡಿದ್ದಾರೆ. ಎಲ್ಲಾ ಉಪಯುಕ್ತ ವಸ್ತುಗಳೊಂದಿಗೆ ಈ ಜೆ. ಎನ್. ವಾಡಿಯಾ ಚಾರಿಟಬಲ್ ಡಿಸ್ಪೆನ್ಸರಿಯು ಈಗ ಉನ್ನತ ಮಟ್ಟದ ಸೇವಾ ಆಧಾರಿತ ಜಿ.ಎಸ್.ಬಿ.ಎಸ್. ವೈದ್ಯಕೀಯ ಕೇಂದ್ರವಾಗಿದೆ.

ಕಾರ್ಯದರ್ಶಿ ಗೀತಾ ಅರ್. ಪೈ, ಕೋಶಾಧಿಕಾರಿ ಅನಂತ್ ಪಿ. ಪೈ ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದು ಜಿ.ಎಸ್.ಬಿ.ಎಸ್. ಮೆಡಿಕಲ್ ಟ್ರಸ್ಟ್ ನ ಎಲ್ಲಾ ಸಿಬ್ಬಂದಿಗಳಿಗೆ ವಿಶೇಷ ಧನ್ಯವಾದ ಅರ್ಪಿಸಲಾಯಿತು.

Comments are closed.