Mumbai

ಡಾ. ದಿನೇಶ್ ಶೆಟ್ಟಿ ರೆಂಜಾಳರ ‘ಮುಂಬಯಿ ಕನ್ನಡ ಪತ್ರಿಕೋದ್ಯಮ’ ಸಂಶೋಧನಾ ಗ್ರಂಥ ಲೋಕಾರ್ಪಣೆ

Pinterest LinkedIn Tumblr

ಮುಂಬಯಿ: ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ವತಿಯಿಂದ ಮುಂಬಯಿ ಮಹಾನಗರದ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕುರ್ಲಾ ಬಂಟರ ಭವನದ  ಅನೆಕ್ಸ್ ಸಭಾಗೃಹದಲ್ಲಿ ನಗರದ ಖ್ಯಾತ ಪತ್ರಕರ್ತ ಉದಯವಾಣಿ ಮುಂಬಯಿಯ  ಡಾ. ದಿನೇಶ್ ಶೆಟ್ಟಿ ರೆಂಜಾಳ ಇವರ  “ಮುಂಬಯಿ ಕನ್ನಡ ಪತ್ರಿಕೋದ್ಯಮ” ಸಂಶೋಧನಾ ಗ್ರಂಥವನ್ನು ನಗರದ ಹಿರಿಯ ಸಾಹಿತಿ ಡಾ. ಸುನೀತಾ ಶೆಟ್ಟಿಯವರು ಬಿಡುಗಡೆಗೊಳಿಸಿದರು.

ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಪ್ರಮುಖರಾದ ಡಾ. ಜಿ. ಎನ್.  ಉಪಾಧ್ಯ ರ ಅಧ್ಯಕ್ಷತೆಯಲ್ಲಿ ಜರಗಿದ ಈ ಸಮಾರಂಭದಲ್ಲಿ ಅತಿಥಿಗಳಾಗಿ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ, ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಅಧ್ಯಕ್ಷ ಹರೀಶ್  ಜಿ. ಅಮೀನ್, ಗೌರವ ಅತಿಥಿಗಳಾಗಿ ವಿಕ್ರೋಲಿ ಕನ್ನಡ ಸಂಘದ ಮಾಜಿ ಅಧ್ಯಕ್ಷ ಶ್ಯಾಮ್ ಸುಂದರ್ ಶೆಟ್ಟಿ,  ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರದ ಅಧ್ಯಕ್ಷ ರೋನ್ಸ್ ಬಂಟ್ವಾಳ್,  ಮಂಗಳೂರಿನ ಹಿರಿಯ  ಪ್ರಕಾಶಕ ಕಲ್ಲೂರು ನಾಗೇಶ್, ಲೇಖಕ ಕವಿ ರಮಣ್ ಶೆಟ್ಟಿ ರೇಂಜಾಳ ಉಪಸ್ಥಿತರಿದ್ದು ಶುಭ ಹಾರೈಸಿದರು.

ಬೆಳಿಗ್ಗೆ ಸಮಾರಂಭದ ಉದ್ಘಾಟನೆ ಬಳಿಕ ಹಿರಿಯ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಅವರ ಉಪಸ್ಥಿತಿಯಲ್ಲಿ, ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ ಅಧ್ಯಕ್ಷತೆಯಲ್ಲಿ ನಡೆದ “ಮುಂಬಯಿ ಪತ್ರಿಕೋದ್ಯಮ ಅಂದು-ಇಂದು-ಮುಂದು” ವಿಚಾರ ಸಂಕಿರಣದಲ್ಲಿ ಪತ್ರಕರ್ತರಾದ ಪ್ರಕಾಶ್ ಕುಂಠಿನಿ,  ಅಶೋಕ ಪಕ್ಕಳ, ಅಶೋಕ್ ಸುವರ್ಣ, ಡಾ. ಈಶ್ವರ ಅಲೆವೂರು, ವಿಶ್ವನಾಥ ಅಮೀನ್ ನಿಡ್ಡೋಡಿ, ಡಾ. ಜ್ಯೋತಿ ಸತೀಶ್, ನ್ಯಾ. ಅಮಿತಾ ಭಾಗವತ್, ಹರೀಶ್ ಮೂಡಬಿದ್ರೆ ಪುಣೆ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ 50 ಕ್ಕೂ ಮಿಕ್ಕಿ ನಗರದ ಹಿರಿ-ಕಿರಿಯ ಪತ್ರಕರ್ತರನ್ನು ಗೌರವಿಸಲಾಯಿತು.

ಪತ್ರಕರ್ತ ದಯಾಸಾಗರ ಚೌಟ ಮತ್ತು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹ ಪ್ರಾಧ್ಯಪಕಿ ಡಾ. ಪೂರ್ಣಿಮಾ ಎಸ್. ಶೆಟ್ಟಿ ಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಕೃತಿಯ ಕಾರ್ಯಕ್ರಮದ ಅಂಗವಾಗಿ  ಐಲೇಶಾ ತಂಡದ ಸುರೇಂದ್ರ ಕುಮಾರ್ ಮಾರ್ನಾಡ್ ನಿರೂಪಣೆಯಲ್ಲಿ ವಿಜಯ ಶೆಟ್ಟಿ ಮೂಡುಬೆಳ್ಳೆ, ಕಾವ್ಯ ಶೆಟ್ಟಿಯವರಿಂದ ಸರಿಗಮ-ಸಮಾಗಮ ನಡೆಯಿತು.

ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್

Comments are closed.