ಭಾರತದಲ್ಲೇ ಸಾಕಷ್ಟು ಸಮಸ್ಯೆಗಳು ತಾಂಡವವಾಡುತ್ತಿದ್ದು ಈ ಬಗೆಗೆ ತಲೆ ಕೆಡಿಸಿಕೊಳ್ಳದ ಪ್ರಧಾನಿ ಮೋದಿ ಮಂಗೋಲಿಯಾಕ್ಕೆ 1 ಬಿಲಿಯನ್ ಡಾಲರ್ ನೆರವು ಘೋಷಿಸಿದ್ದು ಹಾಸ್ಯಾಸ್ಪದ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಕಿಡಿಕಾರಿದೆ.
ಮೋದಿ ವಿದೇಶ ಪ್ರವಾಸದ ಬಗೆಗೆ ಕಿಡಿಕಾರಿರುವ ಶಿವಸೇನೆ ಮಹಾರಾಷ್ಟ್ರಕ್ಕಿಂತ ಮಂಗೋಲಿಯಾ ಅದೃಷ್ಟಶಾಲಿ ದೇಶ ಎಂದು ವ್ಯಂಗ್ಯವಾಡಿದ್ದು ಅಕಾಲಿಕ ಮಳೆಯಿಂದ ಮಹಾರಾಷ್ಟ್ರದ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮೋದಿ ಮಂಗೋಲಿಯಾಕ್ಕೆ ದೊಡ್ಡ ಮೊತ್ತ ಪ್ರಧಾನಿ ಮೋದಿ ನೀಡಿದ್ದಾರೆ. ಇದರ ಬದಲಾಗಿ ಮೋದಿ ದೇಶದ ಸಮಸ್ಯೆ ಬಗೆಗೆ ಮೊದಲು ತಲೆಕೆಡಿಸಿಕೊಳ್ಳಬಹುದಿತ್ತು ಎಂದು ತನ್ನ ಆಕ್ರೋಶ ವ್ಯಕ್ತಪಡಿಸಿದೆ.
ಮಂಗೊಲಿಯಾಕ್ಕೆ ನೀಡಿದ ಹಣವನ್ನು ಮಹಾರಾಷ್ಟ್ರದ ರೈತರಿಗೆ ನೀಡಿದರೆ ತುಂಬಾ ಅನುಕೂಲವಾಗುತ್ತಿತ್ತು ಎಂದಿರುವ ಶಿವಸೇನೆ ಪ್ರಧಾನಿ ಮೋದಿ ಮಹಾರಾಷ್ಟ್ರ ರೈತರ ಹಾಗೂ ಜೈತಾಪುರ್ ನ್ಯೂಕ್ಲಿಯರ್ ಪವರ್ ಪ್ರೊಜೆಕ್ಟ್ ನಿಂದ ತೊಂದರೆ ಅನುಭವಿಸುತ್ತಿರುವ ಕೊಂಕಣ್ ನಿವಾಸಿಗಳತ್ತ ಚಿತ್ತ ಹರಿಸಲಿ ಎಂದು ತಿಳಿಸಿದೆ.
One Comment
Sanjay
Modi dude first desha uddhara maadu amele bere deshakke trip hodi