ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಧೃತಿ ಮತ್ತು ವಂದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸದ್ಯ ಹಿರಿಯ ಮಗಳು ಧೃತಿ, ಅಪ್ಪನ ಆಸೆ ಈಡೇರಿಸಿದ್ದಾರೆ.
ಧೃತಿ ನ್ಯೂಯಾರ್ಕ್‌ನ ಕಲೆ ಮತ್ತು ವಿನ್ಯಾಸ ಸಂಸ್ಥೆಯಲ್ಲಿ ಒಂದಾದ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ -ದಿ ನ್ಯೂ ಸ್ಕೂಲ್ 2021ರಲ್ಲಿ ಕ್ಯೂ.ಎಸ್ (QS) ವರ್ಲ್ಡ್ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಅಪ್ಪನ ಆಸೆಯನ್ನ ಪೂರ್ಣಗೊಳಿಸಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಸೋಫಿಯಾ ಹೈ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದಿದ್ದ ಧೃತಿ ಬಳಿಕ ವಿದ್ಯಾಶಿಲ್ಪ್‌ನಲ್ಲಿ ಕೂಡ ವಿದ್ಯಾಭ್ಯಾಸ ಮಾಡಿದ್ದರು. ಇಲ್ಲಿ ಶಿಕ್ಷಣ ಪಡೆದ ನಂತರ ಹಲವು ವರ್ಷಗಳಿಂದ ವಿದೇಶದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದಾರೆ. ವಿಶೇಷ ಎಂದರೆ 128 ವರ್ಷಗಳ ಇತಿಹಾಸ ಹೊಂದಿರುವ ನ್ಯೂಯಾರ್ಕ್‌ನ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್- ದಿ ನ್ಯೂ ಸ್ಕೂಲ್‌ನಲ್ಲಿ Illustrator ಮತ್ತು ಡಿಸೈನರ್ ಕೋರ್ಸ್ ಮಾಡುತ್ತಿದ್ದರು. ಇದೀಗ ಆ ಕೋರ್ಸ್ ಧೃತಿ ಮುಗಿಸಿದ ಖುಷಿಯಲ್ಲಿದ್ದಾರೆ.
ಈ ವಿಷಯದಲ್ಲಿ ಧೃತಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ಧಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.
Comments are closed.