ಆರೋಗ್ಯ

ಬೆಂಗಳೂರಿನಲ್ಲಿ 2 ಒಮಿಕ್ರಾನ್ ಪತ್ತೆ; ರಾಜ್ಯದಲ್ಲಿಂದು 363 ಮಂದಿಗೆ ಕೊರೋನಾ ದೃಢ; 3 ಸಾವು

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕು ನಿತ್ಯ ಏರಿಳಿತ ಕಾಣುತ್ತಿದೆ. ಕಳೆದ 24 ಗಂಟೆಗಳಲ್ಲಿ 363 ಕೊರೋನಾ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 29,96,833ಕ್ಕೆ ಏರಿಕೆಯಾಗಿದೆ. 191 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಸದ್ಯ 6,743 ಸಕ್ರಿಯ ಪ್ರಕರಣಗಳಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕೊರೋನಾದಿಂದ ಮೂವರು ಇಂದು ಮೃತಪಟ್ಟಿದ್ದು, ಮೃತರ ಒಟ್ಟು ಸಂಖ್ಯೆ 38,216ಕ್ಕೆ ಏರಿಕೆಯಾಗಿದೆ. ಸೋಂಕಿನ ಪ್ರಮಾಣ ಶೇ. 34 ರಷ್ಟಿದ್ದು, ಮರಣ ಪ್ರಮಾಣ ಶೇ. 0.82 ರಷ್ಚಿದೆ. ಬೆಂಗಳೂರು ನಗರದಲ್ಲಿ 206 ಹೊಸ ಪ್ರಕರಣ ಪತ್ತೆಯಾಗಿದ್ದು, 105 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಬೀದರ್, ಚಿಕ್ಕಬಳ್ಳಾಪುರ, ಗದಗ್, ರಾಯಚೂರು, ರಾಮನಗರ, ವಿಜಯಪುರ ಮತ್ತು ಯಾದಗಿರಿಯಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ.

ಒಮಿಕ್ರಾನ್ ಎರಡೂ ಪ್ರಕರಣ ಕರ್ನಾಟಕ ದಲ್ಲಿ ಪತ್ತೆ ಮಾಡಿದ್ದು, ನಮ್ಮ ಅಗ್ರೆಸ್ಸೀವ್ ಟೆಸ್ಟಿಂಗ್ ಬೇಗ ಪತ್ತೆ ಮಾಡಿದ ರಾಜ್ಯ ನಮ್ಮದು . ಟೆಸ್ಟ್ ಮಾಡಿದಾಗ ಯಾರಿಗೂ ಪಾಸಿಟಿವ್ ಬಂದಿರಲಿಲ್ಲ,ನೆಗೆಟೀವ್ ಬಂದಿದೆ ಎಂದರು.

ಎರಡನೇ ಸ್ಯಾಂಪಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ 45 ವರ್ಷದ ವೈದ್ಯರಲ್ಲಿ ಕಾಣಿಸಿಕೊಂಡಿದ್ದು, ಅವರು ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿದ್ದು ಅವರೇ ಐಸೋಲೇಟ್ ಆಗಿದ್ದಾರೆ ಎಂದರು.ಇಲ್ಲಿ ವೈದ್ಯರಲ್ಲಿ ಟ್ರಾವೆಲ್ ಹಿಸ್ಟರಿ ಇರಲಿಲ್ಲ. ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಟೆಸ್ಟ್ ಮಾಡಿದ್ದು, ಐದು ಜನರಿಗೆ ಪಾಸಿಟಿವ್ ಬಂದಿದೆ. ವೈದ್ಯ ಸೇರಿ ಆರೂ ಮಂದಿಯನ್ನು ಐಸೋಲೇಟ್ ಮಾಡಿದ್ದೇವೆ. ಸತತವಾಗಿ ಸಂಪರ್ಕ ದಲ್ಲಿದ್ದು, ಯಾರಿಗೂ ರೋಗದ ಗಂಭೀರತೆ ಇಲ್ಲ. ಸಣ್ಣ ಪ್ರಮಾಣದ ಲಕ್ಷಣಗಳು ಇರುವುದರಿಂದ ಆತಂಕ ಇಲ್ಲ ಎಂದರು.

Comments are closed.