ಆರೋಗ್ಯ

ಉಡುಪಿ ಟಿ.ಎಮ್.ಎ.ಪೈ, ಮಣಿಪಾಲ‌ ಕೆಎಂಸಿ ಹಾಗೂ ಕಾರ್ಕಳದಲ್ಲಿ ಸಾರ್ವಜನಿಕರಿಗೆ ಸರಕಾರದ ನಿಗದಿತ ದರದಲ್ಲಿ ಕೋವಿಡ್ ಲಸಿಕೆ ಲಭ್ಯ

Pinterest LinkedIn Tumblr

ಉಡುಪಿ: ಪ್ರಸ್ತುತ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಡಾ. ಟಿ ಎಮ್ ಎ ಪೈ ಆಸ್ಪತ್ರೆ ಮತ್ತು ಕಾರ್ಕಳದ ಡಾ. ಟಿ ಎಮ್ ಎ ಪೈ ರೋಟರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಯು ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಿದೆ.  ಮೊದಲ ಡೊಸ್ ಮತ್ತು ಮೊದಲ ಡೋಸ್ ಪಡೆದು 84 ದಿನ ಕಳೆದವರಿಗೆ ಎರಡನೇ ಡೋಸ್ ಕೋವಿಶೀಲ್ಡ್  ಲಸಿಕೆ ಲಭ್ಯವಿರುತ್ತದೆ. ಸರಕಾರ ನಿಗದಿಪಡಿಸಿದ ದರದಲ್ಲಿ ಲಸಿಕೆ ನೀಡುತ್ತಿದ್ದು ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕಾಗಿ ಆಸ್ಪತ್ರೆಗಳ ಪ್ರಕಟಣೆ ತಿಳಿಸಿದೆ.

(ಸಾಂದರ್ಭಿಕ ಚಿತ್ರ)

ಅವಶ್ಯವಿದ್ದವರು ಕೋವಿನ್ ಆಪ್ ನಲ್ಲಿ ನೋಂದಣಿ ಮಾಡಿ ಅಥವಾ ನೇರವಾಗಿ  ಆಧಾರ್ ಕಾರ್ಡ್ ನೊಂದಿಗೆ  ಮರೇನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್’ಗೆ ಬರಲು ಕೋರಲಾಗಿದೆ.  ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ  ಕೌಂಟರ್ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗೆ ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು:
ಕಸ್ತೂರ್ಬಾ ಆಸ್ಪತೆ,  ಮಣಿಪಾಲ: 0820  2922761
ಡಾ. ಟಿ ಎಂ ಎ ಪೈ ಆಸ್ಪತೆ, ಉಡುಪಿ :08202942126
ಡಾ. ಟಿ ಎಂ ಎ ರೋಟರಿ ಪೈ ಆಸ್ಪತೆ, ಕಾರ್ಕಳ :08258230583

ಆನ್‌ಸೈಟ್ ವ್ಯಾಕ್ಸಿನೇಷನ್ ಅಂದರೆ ನಿಮ್ಮ ಸ್ಥಳಕ್ಕೆ ಬಂದು ಲಸಿಕಾ ಕಾರ್ಯಕ್ರಮ ಕೂಡ ಮಾಡುತ್ತಿದ್ದು ಇದರ ಕುರಿತು  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ7338625909 ಗೆ ಕರೆ ಮಾಡಬಹುದು.

ಡಾ ಅವಿನಾಶ ಶೆಟ್ಟಿ, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ
ಡಾ. ಶಶಿಕಿರಣ್  ಉಮಾಕಾಂತ್,  ಡಾ ಟಿ ಎಮ್ ಎ ಪೈ  ಆಸ್ಪತ್ರೆ, ಉಡುಪಿ
ಡಾ. ಕೀರ್ತಿನಾಥ ಬಲ್ಲಾಳ, ಡಾ. ಟಿ ಎಂ ಎ ಪೈ ರೋಟರಿ ಆಸ್ಪತೆ, ಕಾರ್ಕಳ

Comments are closed.