ಆರೋಗ್ಯ

ಇದೆಂತಾ ನಿರ್ಲಕ್ಷ್ಯ; 12 ಮಕ್ಕಳಿಗೆ ಪೋಲಿಯೊ ಹನಿ ಬದಲಿಗೆ ಸ್ಯಾನಿಟೈಸರ್ ಹಾಕಿದ ಸಿಬ್ಬಂದಿ!

Pinterest LinkedIn Tumblr

ಮುಂಬಯಿ: ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಆರೋಗ್ಯ ಸಿಬ್ಬಂದಿಯ ನಿರ್ಲಕ್ಷ್ಯದ ಪರಿಣಾಮ 12 ಮಕ್ಕಳಿಗೆ ಪೋಲಿಯೊ ಲಸಿಕೆ ಹನಿಗಳ ಬದಲಿಗೆ ಹ್ಯಾಂಡ್ ಸ್ಯಾನಿಟೈಸರ್ ಹನಿಗಳನ್ನು ಹಾಕಲಾದ ಬಗ್ಗೆ ವರದಿಯಾಗಿದ್ದು ಇದನ್ನು ಅಧಿಕಾರಿಗಳು ಒಪ್ಪಿದ್ದಾರೆ.

(ಸಾಂದರ್ಭಿಕ ಚಿತ್ರ)

5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪೋಲಿಯೊ ಡ್ರಾಪ್ ಬದಲಿಗೆ ಸ್ಯಾನಿಟೈಸರ್ ಹಾಕಲಾಗಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳ ಸ್ಥಿತಿ ಸ್ಥಿರವಾಗಿದೆ ಎಂದು ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಪ್ಸಿಕೊಪ್ರಿ ಗ್ರಾಮದ ಭನ್ಬೋರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ 1-5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ವ್ಯಾಕ್ಸಿನೇಷನ್ ನಡೆಯುತ್ತಿರುವಾಗ ಈ ಘಟನೆ ಸಂಭವಿಸಿದ್ದು 12 ಮಕ್ಕಳಿಗೆ ಪೋಲಿಯೊ ಹನಿಗಳ ಬದಲಿಗೆ ಎರಡು ಹನಿ ಸ್ಯಾನಿಟೈಸರ್ ನೀಡಲಾಗಿದೆ ಎಂದು ಯವತ್ಮಾಲ್ ಜಿಲ್ಲಾ ಪರಿಷತ್ ಸಿಇಒ ಶ್ರೀಕೃಷ್ಣ ಪಂಚಲ್ ತಿಳಿಸಿದ್ದಾರೆ. 12 ಮಕ್ಕಳಲ್ಲಿ ಒಂದು ಮಗು ವಾಂತಿ ಮಾಡಿದೆ” ಎಂದು ಅವರು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಪೋಲಿಯೊ ಲಸಿಕೆ ಹಾಕುವ ವೇಳೆ ನಿರ್ಲಕ್ಷ್ಯ ವಹಿಸಿದ ಮೂವರು ಆರೋಗ್ಯ ಕಾರ್ಯಕರ್ತರನ್ನು ಅಮಾನತು ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

 

Comments are closed.