ಆರೋಗ್ಯ

ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆ: ಕುಂದಾಪುರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯ ಮೇಲೆ ಕೇಸು

Pinterest LinkedIn Tumblr

ಕುಂದಾಪುರ: ಜಿಲ್ಲಾಡಳಿತ ಕೊರೋನಾ ಹರಡುವಿಕೆಯ ಬಗ್ಗೆ ಪ್ರತಿನಿತ್ಯ ಎಚ್ಚರಿಕೆ ನೀಡಿದ್ದರೂ ಕೂಡ ಕೆಲವೊಂದು ವ್ಯಕ್ತಿಗಳು ನಿರ್ಲಕ್ಷ್ಯತನ ತೋರುತ್ತಿರುವುದು ಮುಂದುವರೆದಿದ್ದು, ಕುಂದಾಪುರ ನಗರ ಠಾಣೆಯ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವರು ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗಡೆ ತಿರುಗಾಡುತ್ತಿರುವುದರ ಕುರಿತು ಪ್ರಕರಣ ದಾಖಲಾಗಿದೆ.

ಹೋಮ್ ಕ್ವಾರಂಟೈನ್ ನಿಯಮ ಉಲ್ಘಂಘಿಸಿದ ವ್ಯಕ್ತಿಯನ್ನು ಮುಂಬೈನಿಂದ ಕುಂದಾಪುರಕ್ಕೆ ಆಗಮಿಸಿದ ಸಹಬ್ ಸಿಂಗ್ ಎಂದು ಗುರುತಿಸಲಾಗಿದೆ.

ಸಹಬ್ ಸಿಂಗ್ ಎಂಬವರು ಮುಂಬೈ ನಿಂದ ಜೂನ್ 29ರಂದು ಬಂದು ಕುಂದಾಪುರ ತಾಲೂಕಿನ ಕೋಟೇಶ್ವರದ ಬೈಪಾಸ್ ಹತ್ತಿರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರದ್ದು ಅವರಿಗೆ ಜುಲೈ 13 ರ ವರೆಗೆ ಹೋಂ ಕ್ವಾರಂಟೈನ್ ಅವಧಿ ಇತ್ತು. ಈ ಕ್ವಾರಂಟೈನ್ ಅವಧಿಯಲ್ಲಿ ನಿಯಮ ಉಲ್ಲಂಘನೆ ಮಾಡಿ ಉಡುಪಿಯ ಹೋಟೆಲುಗಳಿಗೆ ತಿರುಗಾಡುತ್ತಿರುವುದು ಪರಿಶೀಲನೆಯ ವೇಳೆ ಸಾಬೀತಾಗಿದೆ.

ಈ ಬಗ್ಗೆ ಫ್ಲೈಯಿಂಗ್ ಸ್ವ್ಕಾಡ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎನ್.ಜಿ. ಭಟ್ ಅವರು ಕುಂದಾಪುರ ಠಾಣೆಗೆ ದೂರು ನೀಡಿದ್ದು ಅವರ ದೂರಿನಂತೆ ಸಹಬ್ ಸಿಂಗ್ ವಿರುದ್ದ ಪ್ರಕರಣ ದಾಖಲಾಗಿದೆ

Comments are closed.