ಆರೋಗ್ಯ

ಈ ಬೀಜದ ಎಣ್ಣೆಯಲ್ಲಿ ವಯಸ್ಸಾಗದವರಂತೆ ಕಾಣಿಸುವ ಗುಣವಿದೆ

Pinterest LinkedIn Tumblr

ನೀವು ಯುವವಯಸ್ಸಿನವರಂತೆ ಕಾಣಬೇಕು, ಉತ್ತಮ ತ್ವಚೆಯನ್ನು ಪಡೆಯಬೇಕು, ಹೊಳಪಿನ ಆರೋಗ್ಯಕರ ಕೂದಲು, ಬಿಳಿ ಹಲ್ಲನ್ನು ಹೊಂದಿರಬೇಕು, ಇದನ್ನು ಪಡೆಯಲು ರಾಸಾಯನಿಕ ಪದಾರ್ಥಗಳನ್ನು ಬಳಸುವುದರಿಂದ ತ್ವಚೆಯು ಹಾಳಾಗುತ್ತದೆ, ನೈಸರ್ಗಿಕ ವಿಧಾನ ಗಳನ್ನು ನೀವು ಹುಡುಕುತ್ತಿದ್ದರೆ ಈ ಲೇಖನ ನಿಮಗೆ ಸೂಕ್ತವಾಗಿದೆ.

ಇವುಗಳು ತುಂಬಾ ಕಡಿಮೆ ಬೆಲೆಗೆ ಸಿಗುವ ವಸ್ತುಗಳಾಗಿದ್ದು ಇದರಿಂದ ಆಗುವ ಲಾಭಗಳು ಹೆಚ್ಚು. ಮತ್ತು ಇವುಗಳಿಂದ ಯಾವುದೇ ಅಡ್ಡಪರಿಣಾಮಗಳು ಇಲ್ಲ.

೧.ಇದ್ದಿಲಿನಿಂದ ನಿಮ್ಮ ಹಲ್ಲಿನ ಬಿಳುಪನ್ನು ಹೆಚ್ಚಿಸಿಕೊಳ್ಳಿ
ನೀವು ಆಶ್ಚರ್ಯ ಪಡಬಹುದು, ಅಥವಾ ನಂಬದೆ ಇರಬಹುದು, ಈ ಕಪ್ಪು ವಸ್ತು ಕಲೆಗಳನ್ನು ಮಾಡಬಹುದು, ಹಲ್ಲನ್ನು ಬಿಳಿಯಾಗಿಸಲು ಸಾಧ್ಯವೇ? ಎಂದು, ಆದರೆ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ನಮ್ಮ ಪೂರ್ವಜರು ಇದ್ದಿಲಿನಿಂದಲೇ ಹಲ್ಲು ಉಜ್ಜುತ್ತಿದ್ದರು ಅವರು ಹಲವು ವರ್ಷಗಳ ವರೆಗು ಅವರ ಹಲ್ಲನ್ನು ಆರೋಗ್ಯವಾಗಿ ಗಟ್ಟಿಮುಟ್ಟಾಗಿ ಇರಿಸಿಕೊಂಡಿದ್ದರು, ಆದರೆ ಈಗ ಹಲ್ಲು ಸೂಕ್ಹ್ಮ, ಬಿಸಿ ಮತ್ತು ತಂಪು ಅನುಭವ ತಡೆಯಲು ಕಷ್ಟ ಪಡೆಯುವಿರಿ.

ನೀವು ಸೌದೆಯಿಂದ ಆದ ಇದ್ದಿಲನ್ನು ತೆಗದುಕೊಂಡು ಅದನ್ನು ಪುಡಿ ಮಾಡಿ, ಬೇಕಿದ್ದರೆ ಸ್ವಲ್ಪ ಕಲ್ಲುಪ್ಪು ಸೇರಿಸಿ, ಅದರಿಂದ ಬ್ರಷ್ ಮಾಡುವುದು ನಿಮ್ಮ ಹಲ್ಲನ್ನು ಬಿಳಿಯಾಗಿಸುವುದರ ಜೊತೆಗೆ ಹಲ್ಲನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.

೨.ಮೊಡವೆ ಮತ್ತು ಇತರ ತ್ವಚೆ ಸಮಸ್ಯೆಗಳಿಗೆ ಬಾಳೆಹಣ್ಣಿನ ಸಿಪ್ಪೆ:
ಬಾಳೆಹಣ್ಣು ನಿಮ್ಮ ದೇಹಕ್ಕೆ ಒಳ್ಳೆಯದು, ಅದರ ಸಿಪ್ಪೆ ನಿಮ್ಮ ಮೊಡವೆಯನ್ನು ನಿವಾರಿಸಿಕೊಳ್ಳಲು ಒಂದು ಉತ್ತಮ ಉಪಾಯ. ಇದರ ಜೊತೆಗೆ ತ್ವಚೆಯಲ್ಲಿ ಕಿರಿಕಿರಿ, ಕೀಟ ಕಡಿತದ ಉರಿ, ಅಥವಾ ಕೀಟ ಕಡಿದಾಗ ಇದನ್ನು ಔಷಧಿಯಂತೆ ಬಳಸಬಹುದು, ಮುಖದಲ್ಲಿ ಸುಕ್ಕುಗಳು, ಕಣ್ಣಿನ ಕೆಳಗೆ ಕಪ್ಪು ಸುತ್ತುಕೊಳ್ಳುವುದು, ತ್ವಚೆಯಲ್ಲಿ ಬಿರುಕು ಇವುಗಳಿಗೆ ಕಡಿಮೆ ಬೆಳೆಯ ಪರಿಣಾಮಕಾರಿ ಉಪಾಯ ಎಂದರೆ ಬಾಳೆಹಣ್ಣಿನ ಸಿಪ್ಪೆ.

ಬಾಳೆಹಣ್ಣಿನ ಸಿಪ್ಪೆಯ ಒಳಭಾಗದಿಂದ ತ್ವಚೆಯ ಮೇಲೆ ಅಥವಾ ಕಲೆಗಳು ಅಥವಾ ಕಿರಿಕಿರಿ ಇರುವ ಅಥವಾ ಮೊಡವೆ ಇರುವ ಜಾಗದ ಮೇಲೆ ಉಜ್ಜುವುದರಿಂದ ಮೇಲಿನ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಬಾಳೆಹಣ್ಣು ಸಿಪ್ಪೆಯಲ್ಲಿ ಹೆಚ್ಚು ವಿಟಮಿನ್ ಗಳು, ಉತ್ಕರ್ಷಣ ನಿರೋಧಕಗಳು ಮತ್ತು ಪೋಷಣೆಯ ಅಂಶಗಳಿದ್ದು ತ್ವಚೆಯು ಅದನ್ನು ಹೀರಿಕೊಂಡು ಚರ್ಮ ಆರೋಗ್ಯವಾಗಿ ಇರುವಂತೆ ಕಾಪಾಡುತ್ತದೆ.

೩.ಸ್ಟ್ರೆಚ್ ಮಾರ್ಕ್ಸ್, ಸುಕ್ಕುಗಳು, ಚರ್ಮ ಬಿರುಕುಗಳು, ತ್ವಚೆ ಕಲೆಗಳನ್ನು ಜೆಲಟಿನ್ ಇಂದ ಕಡಿಮೆ ಮಾಡಿಕೊಳ್ಳಿ:
ಜೆಲಟಿನ್ ಸೇವಿಸುವುದರಿಂದ ಕೊಲಾಜೆನ್ ಅನ್ನು ಹೆಚ್ಚು ಉತ್ಪತ್ತಿ ಮಾಡಲು ಸಹಾಯ ಆಗುತ್ತದೆ ಇವುಗಳು ಚರ್ಮದ ಆರೋಗ್ಯವನ್ನು ಹೆಚ್ಚುಸುವಲ್ಲಿ ತುಂಬಾ ಸಹಾಯವಾಗಿವೆ.
ಜೆಲಟಿನ್ ಸೇವಿಸುವುದರಿಂದ ಇವುಗಳನ್ನು ಕಡಿಮೆ ಮಾಡಿಕೊಳ್ಳಬಹುದು
ಚರ್ಮ ಸುಕ್ಕುಗಳನ್ನು ಕಡಿಮೆ ಮಾಡಿಕೊಳ್ಳಬಹುದು(wrinkles)
ಸೆಲ್ಯೂಲೈಟ್ ಅನ್ನು ಕಡಿಮೆ ಮಾಡಿಕೊಳ್ಳಬಹುದು (cellulite)
ಸ್ಟ್ರೆಚ್ ಮಾರ್ಕ್ಸ್ ಅನ್ನು ಕಡಿಮೆ ಮಾಡುತ್ತದೆ
ಕೂದಲು ಮತ್ತು ಉಗುರು ಉತ್ತಮವಾಗಿ ಬೆಳೆಯಲು ಸಹಾಯವಾಗುತ್ತದೆ
ಹಾರ್ಮೋನುಗಳನ್ನು ಸಮತೋಲನದಲ್ಲಿರಿಸುತ್ತದೆ

೪.ಗುಲಾಬಿ ಹಣ್ಣಿನ ಬೀಜದ ಎಣ್ಣೆ:
ಗುಲಾಬಿ ಬೀಜದ ಎಣ್ಣೆ ಕಡಿಮೆ ವಯಸ್ಸಿನವರಂತೆ ಕಾಣಿಸುವಂತೆ ಮಾಡುವ ಒಂದು ಪವಾಡ ಎಣ್ಣೆ. 1983 ರಲ್ಲಿ ಸ್ಯಾಂಟಿಯಾಗೋ ವಿಶ್ವವಿದ್ಯಾಲಯದ ಅಧ್ಯಯನವು ಗುಲಾಬಿ ಬೀಜದ ಎಣ್ಣೆಯು ವಯಸ್ಸಾಗದವರಂತೆ ಕಾಣಿಸುವ ಗುಣಲಕ್ಷಣಗಳನ್ನು ಹೊಂದಿದೆ ಎಂಬ ನಂಬಲಾಗದ ಸತ್ಯವನ್ನು ಬಹಿರಂಗಪಡಿಸಿದ ಮೊದಲ ಪ್ರಮುಖ ಸಂಶೋಧನೆಯಾಗಿದೆ. ಇದರಿಂದ ಚರ್ಮ ಸುಕ್ಕುಗಳು, ಸ್ಕಾರ್ ಗಳು, ಮೊಡವೆಗಳು, ಹದಿ ಹರೆಯದವರಂತೆ ಕಾಣಲು, ಮತ್ತು ಬೇರೆ ತ್ವಚೆಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಇದು ನಿಮ್ಮ ತ್ವಚೆಯನ್ನು ಮರುಹುಟ್ಟು ಪಡೆಯಲು ಸಹಾಯ ಮಾಡಿ, ನಿಮ್ಮ ಮೊದಲಿನ ಚರ್ಮವನ್ನು ಪಡೆಯುವಂತೆ ಮಾಡುತ್ತದೆ.

Comments are closed.