ಆರೋಗ್ಯ

ರೋಗನಿರೋಧಕ ಶಕ್ತಿ ಹೇರಳವಾಗಿರುವ ಈ ಹಣ್ಣು. ಸಕ್ಕರೆ ಕಾಯಿಲೆ,ಹೃದ್ರೋಗಿಗಳಿಗೆ ವರದಾನ

Pinterest LinkedIn Tumblr

ಮೊರಿಂಡಾ ಸಿಟ್ರಿ ಫೋಲಿಯಾ ಜಾತಿಗೆ ಸೇರಿದ ಹಣ್ಣು.ಪೆಸೆಫಿಕ್ ಪ್ರದೇಶದಲ್ಲಿ ವ್ಯಾಪಕವಾಗಿ ಬೆಳೆಯುವ ಈ ಸಸ್ಯವು ನಿತ್ಯ ಹಸುರಾಗಿರುತ್ತದೆ.ಈ ಹಿ೦ದೆ ಇ೦ಡೋನೇಷಿಯಾದಿ೦ದ ಆಸ್ಟ್ರೇಲಿಯಾದವರೆಗೆ ಇದನ್ನು ಬೆಳೆಯುತ್ತಿದ್ದು ಈಗ ವಿಸ್ತಾರವಾದ ಭೂ ಪ್ರದೇಶದಲ್ಲಿ ಬೆಳೆಯುತ್ತದೆ.ಇದಕ್ಕೆ ಕಾರಣವೆ೦ದರೆ ಎಲ್ಲ ತರಹದ ಭೌಗೋಳಿಕ ವೈವಿಧ್ಯತೆಗೆ ಈ ಸಸ್ಯ ಒಗ್ಗಿಕೊ೦ಡಿರುವುದು.ಬ೦ಜರು ಭೂಮಿಯಲ್ಲಿ,ಆಮ್ಲೀಯ ಮಣ್ಣಿನಲ್ಲಿ,ಕ್ಷಾರೀಯ ಮಣ್ಣಿನಲ್ಲಿ ಇದು ಬೆಳೆಯುತ್ತದೆ.ಗಾಳಿ, ಬೆ೦ಕಿ,ಪ್ರವಾಹ,ಉಪ್ಪುನೀರು ಇದಾವುದಕ್ಕೂ ತಲೆಬಾಗದ ಸಸ್ಯವಿದು.

ವಾಸ್ತವವಾಗಿ ಎಷ್ಟೋ ಕಡೆಗಳಲ್ಲಿ ನೋಣಿಯನ್ನು ಒ೦ದು ಕಳೆ ಗಿಡವೆ೦ದೇ ಭಾವಿಸಿದ್ದಾರೆ.ಆದರೆ ಇತರ ಕಳೆ ಗಿಡಗಳ೦ತೆ ಇದು ಎಲ್ಲಿಯೂ ಸ್ಥಳೀಯ ಸಸ್ಯ ಪ್ರಭೇದಗಳನ್ನು ನಾಶಪಡಿಸುವ ದುರ್ಗುಣವನ್ನು ತೋರಿಸಿಲ್ಲ.ಆದರೂ ಇದನ್ನು ಕಳೆಗಿಡವೆ೦ದು ಭಾವಿಸಲು ಕಾರಣವೆ೦ದರೆ ಒಮ್ಮೆ ಬೆಳೆದು ನಿ೦ತರೆ ನೋಣಿಯನ್ನು ನಾಶಪಡಿಸುವುದು ಸುಲಭದ ಮಾತಲ್ಲ.ಈ ಗಿಡದ ಒಳ್ಳೆಯ ಅ೦ಶವೆ೦ದರೆ ಜ್ವಾಲಾಮುಖಿಯಿ೦ದ ಹೊರಚೆಲ್ಲಿದ ಲಾವಾರಸ ಹರಡಿಕೊ೦ಡ ಜಾಗಗಳಲ್ಲಿ ಕಾಲಾ೦ತರದಲ್ಲಿ ಬೇರಾವ ಗಿಡ ಕಾಲಿಡಲು ಹಿ೦ಜರಿದರೂ ,ನೋಣಿ ಮಾತ್ರ ಅ೦ತಹ ಕಡೆಗಳಲ್ಲಿ ಬೆಳೆದು ನಿಲ್ಲುತ್ತದೆ.ಬೇರೆ ಬೇರೆ ಪ್ರದೇಶಗಳಲ್ಲಿರುವ ವಿಭಿನ್ನ ಭೌಗೋಳಿಕ ಅ೦ಶಗಳ ಕಾರಣದಿ೦ದಾಗಿ ನೋಣಿಯ ಎತ್ತರ ,ಎಲೆಯ ರಚನೆ,ಹಣ್ಣಿನ ಗಾತ್ರ,ಬೀಜಗಳ ಸ೦ಖ್ಯೆ,ರುಚಿ -ಇದರಲ್ಲೆಲ್ಲಾ ವ್ಯತ್ಯಾಸ ಕ೦ಡುಬರಬಹುದು.

ಅಮೆರಿಕದಲ್ಲಿ ನೋಣಿ ಪಾನೀಯವನ್ನು ಆಹಾರ ಸೇವನೆಯ ನಂತರ ಆರೋಗ್ಯಕರ ಪೇಯವಾಗಿ ಉಪಯೋಗಿಸಿಲಾಗುತ್ತದೆ.ಡಾ.ನೈಲ್ ಸೋಲೊಮನ್ ಎಂಬಾತ ಇಪ್ಪತ್ತನೇ ಶತಮಾನದ ಕೊನೆಯಲ್ಲಿ ಇದರಲ್ಲಿ ಔಷಧೀಯ ಗುಣ, ಪೌಷ್ಟಿಕಾಂಷ ಮತ್ತು ರೋಗನಿರೋಧಕ ಶಕ್ತಿ ಇರುವುದನ್ನು ಪತ್ತೆ ಹಚ್ಚಿದ ಬಗ್ಗೆ ದಾಖಲೆಗಳಿವೆ. ನೋಣಿಯನ್ನು “ಭಾರತದ ಮಲ್ಬರಿ” ಎಂದು ಕರೆಯುತ್ತಾರೆ.ಪೊದೆಯ ರೂಪದ ಈ ಗಿಡ, ಸಾಮಾನ್ಯವಾಗಿ ಹತ್ತು ಅಡಿ ಎತ್ತರಕ್ಕೆ ಬೆಳೆಯುತ್ತದೆ. ಬಿಳಿ ಹೂ ಬಿಟ್ಟ ನಂತರ ಕಾಯಿಯಾಗುತ್ತದೆ. ನೋನಿ ಹಣ್ಣು ಮೂರರಿಂದ ನಾಲ್ಕು ಡಯಾಮೀಟರಿನಷ್ಟು ದೊಡ್ದದಾಗಿರುತ್ತದೆ. ಬಹೂಪಯೋಗಿ ಹಾಗೂ ನೋವು ನಿವಾರಕ ನೋಣಿ ಹಣ್ಣುಗಳನ್ನೇ ಪ್ರಧಾನ ಕ್ರಷಿ ಕಸುಬಾಗಿ ಸ್ವೀಕರಿಸಿ ಯಶಸ್ವಿಯಾಗಿರುವ ರೈತ ಕುಟುಂಬಗಳಿವೆ.

ಡಾ ಎ ಪಿ ಜೆ ಅಬ್ದುಲ್ ಕಲಾಂ ರವರು 2008 ಅಕ್ಟೋಬರ್ 18 ರಂದು ನವ ದೆಹಲಿಯ ಸಿರಿಪೋಟ್ ಆಡಿಟೋರಿಯಂ ನಲ್ಲಿ ನಡೆದ ಪ್ರದರ್ಶನದಲ್ಲಿ ಪಾಲ್ಗೊಂಡು ಮೊದಲನೇಯದಾಗಿ ನೊಣಿಯ ಬಳಕೆದಾರರು ಹೇಗಿರುತ್ತಾರೆ ಎಂದು ನೋಡಲು ಬಂದಿರುತ್ತೇನೆ. ನೀವೆಲ್ಲರೂ ಹಸನ್ಮುಖಿಯಾಗಿದ್ದೀರೆಂದರೆ ನೀವೆಲ್ಲರೂ ಖಂ‌ಡಿತವಾಗಿಯೂ ನೋಣಿ ಬಳಕೆದಾರರು ಎಂದು ಭಾವಿಸಿದ್ದೇನೆ. ಈ ನೋಣಿ ಉಪಯೋಗಿಸುವ ಗ್ರಾಹಕರ ಸಂಖ್ಯೆ ಹೆಚ್ಚಾಗಿರುವುದನ್ನು ನೋಡಿದರೆ ಈ ಹಣ್ಣಿನ ಬಗ್ಗೆ ಆಳವಾದ ಅಧ್ಯಯನ ಮಾಡಬೇಕೆಂದೆನಿಸುತ್ತದೆ. ಈ ಹಣ್ಣಿನಲ್ಲಿರುವ ವಿಟಮಿನ್ ಗಳನ್ನು ಸಹಸ್ರಾರು ವರ್ಷಗಳ ಹಿಂದೆಯೇ ಋಷಿ ಮುನಿಗಳು ಉಪಯೋಗಿಸುತ್ತಿದ್ದರು ಎಂದು ತಿಳಿದುಬಂದಿದೆ.

ಈ ಹಣ್ಣಿನ ರಸದಲ್ಲಿ ವಿಟಮಿನ್ ಎ, ಬಿ, ಬಿ2, ಬಿ6, ಬಿ12, ಸಿ, ಇ, ಕ್ಯಾಲ್ಸಿಯಂ, ಐರನ್, ಮ್ಯಾಗ್ನಿಸಿಯಂ, ಪೋಲಿಕ್ ಆಸಿಡ್, ಪ್ಯಾಟೋಲೆನಿಕ್ ಆಸಿಡ್, ಫಸ್ ಫಿರೋಸ್, ಜಿಂಕ್ ಕಾಪಾರ್ 160*ವಿಟಮಿನ್ಸ್ ಪೈಟ್ರೊ ನ್ಯೂಟ್ರಿಶೀಯನ್ ಹೊಂದಿರುತ್ತದೆ. ಈ ಎಲ್ಲಾ ಅಂಶಗಳನ್ನು ಹೊಂದಿರುವ ನೋಣಿ ಹಣ್ಣು ದೇಹದಲ್ಲಿರುವ ಹೆಚ್ಚು ಪ್ರಮಾಣದ ಸಕ್ಕರೆ ಅಂಶವನ್ನು ಹತೋಟಿಗೆ ತರುತ್ತದೆ. ಹಾಗೂ ಹೃದ್ರೋಗಿಗಳಿಗೆ ವರದಾನವಾಗಿದೆ.

ದುರಂತವೆಂದರೆ ನೋಣಿ ಯಾವುದೇ ಡ್ರಗ್ ಹೌಸ್, ಜನರಲ್ ಸ್ಟೋರ್, ಆಯುರ್ವೇದ ಔಷಧಿ ಅಂಗಡಿಗಳಲ್ಲಿ ದೊರೆಯುತ್ತಿಲ್ಲ.

ಲಕ್ಷಣಗಳು:
ನೋಣಿ ಎಲೆ:ನೋಣಿ ಸಸ್ಯದ ಎಲೆಯು ಎಣ್ಣೆ ಹಚ್ಚಿದ೦ತೆ ಪಳಪಳನೆ ಹೊಳೆಯುತ್ತದೆ.ಎಲೆಗಳ ಉದ್ದ ೨೦-೪೫ ಸೆ.ಮೀ ಅಗಲ ೮-೨೫ ಸೆ.ಮೀ ಇರುತ್ತದೆ.
ನೋಣಿ ಹಣ್ಣು:ಹಣ್ಣುಗಳು ನಸು ಹಳದಿ ಬಣ್ಣದ್ದಾಗಿದ್ದು,ಕಾಯಿಗಳು ತಿಳಿ ಹಸಿರು ಬಣ್ಣವನ್ನು ಹೊ೦ದಿರುತ್ತವೆ.ಈ ಕಾಯಿಗಳು ೩-೧೦ಸೆ.ಮೀ ವ್ಯಾಸವನ್ನು ಹೊ೦ದಿರುತ್ತವೆ.
ನೋಣಿ ಬೀಜ:ಬೀಜಗಳು ಸೇಬಿನ ಬೀಜವನ್ನು ಹೋಲುತ್ತವೆ.ನೋಣಿ ಬೀಜದ ಬಾಲದಲ್ಲಿ ಗಾಳಿಕೋಶವಿರುವುದರಿ೦ದ ನೀರಿಗೆ ಹಾಕಿದರೂ ಬೀಜ ದಿನಗಟ್ಟಲೆ ತೇಲುತ್ತಲೇ ಇರುತ್ತದೆ.

ಹವಾಮಾನ:
ಎತ್ತರ:ಕಡಲ ಮಟ್ಟದಿ೦ದ ಆರ೦ಭಿಸಿ, ಸಮುದ್ರ ಮಟ್ಟದಿ೦ದ ೧೫೦೦ ಅಡಿ ಎತ್ತರದವರೆಗಿನ ಪ್ರದೇಶಗಳಲ್ಲಿ ನೋಣಿ ಬೆಳೆಯುತ್ತದೆ.
ಮಳೆ:ನೋಣಿಯು ಎಲ್ಲಾ ತರಹದ ಮಳೆ ಪ್ರದೇಶಗಳಲ್ಲಿಯೂ ಬೆಳೆಯುತ್ತದೆ.
ಉಷ್ಣತೆ:ಸುಮಾರು ೨೦-೩೫ ಡಿಗ್ರಿ ಸಿಲ್ಸಿಯಸ್ ಉಷ್ಣತೆಯ ಪ್ರದೇಶದಲ್ಲಿ ಈ ಸಸ್ಯ ಬೆಳೆಯುತ್ತದೆ.
ಮಣ್ಣು:ಆಗಾಗ ಅಥವಾ ಸದಾಕಾಲ ನೀರು ನಿಲ್ಲುವ ಜಾಗದಲ್ಲಿ,ಉಪ್ಪು ಮಿಶ್ರಿತ ಮಣ್ಣಿನಲ್ಲಿ,ಬ೦ಜರು ಮಣ್ಣಿನಲ್ಲಿ ಈ ಸಸ್ಯ ಬೆಳೆಯುತ್ತದೆ.ಆದರೆ ನೀರು ಹರಿದುಹೋಗಬಲ್ಲ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.

ಔಷಧೀಯ ಗುಣಗಳು:
ನೋಣಿ ರಸವನ್ನು ಗಂಟು ನೋವು, ಕೈ ಮಡಚುವ ತೊಂದರೆ, ಕಾಲು ನೋವು ಮತ್ತು ಮಂಡಿ ನೋವಿಗೆ ಪರಿಹಾರವಾಗಿ ಉಪಯೋಗಿಸುತ್ತಿದ್ದಾರೆ.ಉಸಿರಾಟದ ಸಮಸ್ಯೆ ನಿವಾರಣೆಗೂ ಇದು ಉಪಯುಕ್ತ. ಮುರಿದ ಎಲುಬುಗಳನ್ನು ಮರುಜೋಡಿಸಲು ಹಾಗೂ ಡಯಾಬಿಟಿಸ್, ಏರು ರಕ್ತದೊತ್ತಡ ನಿಯಂತ್ರಣಕ್ಕೂ ಬಳಕೆಯಾಗುತ್ತಿದೆ. ಮಲಬದ್ಧತೆಯ ಸಮಸ್ಯೆ ಇರುವವರೂ ನೋಣಿ ರಸ ಸೇವಿಸಬಹುದು.ಅನೇಕ ವಿಶ್ವವಿದ್ಯಾನಿಲಯಗಳು ಸಂಶೋಧನೆ ಸಮೀಕ್ಷೆಗಳ ಪ್ರಕಾರ, ನೋಣಿಯ ರಸ ಆರೋಗ್ಯವರ್ಧಕ ಎಂಬುದು ದೃಢಪಟ್ಟಿದೆ. ಕೀಲು ನೋವು, ಹ್ರದಯ ಸಂಬಂಧ ಕಾಯಿಲೆ, ಖಿನ್ನತೆ ಹಾಗೂ ನಿದ್ರಾಹೀನತೆಯಿಂದ ತೊಂದರೆ ಅನುಭವಿಸುತ್ತಿರುವವರು ಇದರ ಮೊರೆಹೋಗಬಹುದು.

ಸೇವಿಸುವ ಕ್ರಮ:
ನೋಣಿಯನ್ನು ಔಷಧಿಯಾಗಿ ಸೇವಿಸಬಯಸುವವರು ಮೊದಲ ಮೂರು ದಿನ ಬೆಳಗಿನ ಉಪಹಾರಕ್ಕೆ ಮುಂಚಿತವಾಗಿ ಒಂದು ಟೀ ಸ್ಪೂನ್ ಸೇವಿಸಬೇಕು. ಒಂದು ತಿಂಗಳ ಸೇವನೆಯ ನಂತರ ಉಪಹಾರಕ್ಕೆ ಮುಂಚೆ ಎರಡೂ ಸ್ಪೂನ್, ಮಧ್ಯಾಹ್ನ ಊಟಕ್ಕಿಂತ ಮುಂಚೆ ಎರಡು ಸ್ಪೂನ್ ರಸ ಸೇವಿಸಬೇಕು. ನೋಣಿಯ ಎಲೆಯೂ ಉಪಯುಕ್ತ. ಇದರ ಎಲೆಯಿಂದ ತಗೆದ ರಸ ಅನೇಕ ರೀತಿಯ ಚರ್ಮ ರೋಗಗಳನ್ನು ನಿವಾರಿಸಿದೆ. ಎಲೆಯ ಕಷಾಯ ಜ್ವರ ನಿವಾರಕ.

Comments are closed.