ಕುಂದಾಪುರ: ಕೋವಿಡ್- 19 ಸೇವೆಗೆ ಆಹ್ವಾನಿಸಿದಾಗ ಮೊದಲು ಭಯವಿತ್ತು. ಮೊದಮೊದಲು ರೋಗನಿರೋಧಕ ಮಾತ್ರೆಗಳನ್ನು ಸೇವಿಸಿಯೇ ಸೇವೆಗೆ ತೆರಳುತ್ತಿದ್ದೆವು.ಆದರೆ ಕರ್ತವ್ಯ ನಿರ್ವಹಿಸುತ್ತಾ ಭಯ ಹೋಗಿದೆ. ಇದೀಗಾ ಸೇವೆ ಮಾಡಿದ ಹೆಮ್ಮೆ ಹಾಗೂ ಸಾರ್ಥಕತೆ ಇದೆ- ಇದಿಷ್ಟು ಕುಂದಾಪುರ ಕೋವಿಡ್ ಆಸ್ಪತ್ರೆಯಲ್ಲಿ ಕೊರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ದಾದಿ ಸುರೇಖಾ ಅವರ ಮಾತುಗಳು.
ಭಾನುವಾರ ಕುಂದಾಪುರದ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಂಡ 14 ಮಂದಿಗೆ ಬೀಳ್ಕೊಡುಗೆ ನೀಡಿದ ಕೊರೋನಾ ವಾರಿಯರ್ಸ್ ಮಾಧ್ಯಮದ ಜೊತೆ ತಮ್ಮ ಅನುಭವ ಹಂಚಿಕೊಂಡರು.
ಸಿದ್ದಾಪುರದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ತಾಳ್ಮೆ ಕಡಿಮೆಯಿತ್ತು. ವೈದ್ಯರಿಂದ, ಶುಶ್ರೂಷಕಿಯರಿಂದ ತಾಳ್ಮೆಯನ್ನು ಕಲಿತೆ. ಕೋವಿಡ್- 19 ಪೀಡಿತರ ಸೇವೆ ಮಾಡುವ ಮೂಲಕ ನನಗೆ ದೇವರ ಸೇವೆ ಮಾಡಲು ಅವಕಾಶ ದೊರೆತಂತಾಯಿತು. ಇದು ನನ್ನ ಜೀವನದ ಭಾಗ್ಯವಾಗಿದೆ ಎನ್ನುತ್ತಾ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡವರು ಕೋವಿಡ್-19 ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕೊರೊನಾ ವಾರಿಯರ್ ಮಂಜುಳಾ.
(ವರದಿ- ಯೋಗೀಶ್ ಕುಂಭಾಸಿ)
Comments are closed.