ಆರೋಗ್ಯ

ಮಹಿಳೆಯರಿಬ್ಬರಿಗೆ ಕೊರೋನಾ ಪಾಸಿಟಿವ್-ಹೆಬ್ರಿ ಕ್ವಾರಂಟೈನ್ ಪ್ರದೇಶ ಸೀಲ್ ಡೌನ್

Pinterest LinkedIn Tumblr

ಉಡುಪಿ: ಮುಂಬೈನಿಂದ ಬಂದು ಹೆಬ್ರಿಯಲ್ಲಿ ಕ್ವಾರಂಟೈನ್ ಆಗಿದ್ದ ಇಬ್ಬರು ಮಹಿಳೆಯರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ ರೆಸಿಡೆನ್ಸಿ ಹಾಗೂ ರೆಸಿಡೆನ್ಸಿ ಸಂಪರ್ಕ ರಸ್ತೆಗಳನ್ನು ಬಂದ್ ಮಾಡಿದ್ದು ಸೀಲ್ ಡೌನ್ ಆಗಿದೆ.

ಹೆಬ್ರಿ ಕಚ್ಚೂರು ರಸ್ತೆಯಲ್ಲಿರುವ ಖಾಸಗಿ ರೆಸಿಡೆನ್ಸಿ ಹಾಗೂ ರೆಸಿಡೆನ್ಸಿ ಸಂಪರ್ಕ ರಸ್ತೆಯ ಸುಮಾರು 300ಮೀಟರ್ ರಸ್ತೆಯನ್ನು ಬಂದ್ ಮಾಡಿದ್ದು ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ರೆಸಿಡೆನ್ಸಿ ಸುತ್ತಮುತ್ತ ತಿರುಗಾಡುವುದಕ್ಕೆ ನಿಷೇಧಿಸಲಾಗಿದೆ.

ಜಿಲ್ಲಾಡಳಿತವು ಗುರುವಾರ ಸೋಂಕಿತ ಮಹಿಳೆಯರನ್ನ ಉಡುಪಿಯ ಟಿ.ಎಮ್.ಎ ಪೈ ಕೋವಿಡ್ ಆಸ್ಪತ್ರೆಗೆ ಕಳುಹಿಸುತ್ತಾರೆ.

Comments are closed.