ಆರೋಗ್ಯ

ಹೆಂಗಸರಿಗೆ ಗರ್ಭಾವಸ್ಥೆಯಲ್ಲಿ ಉಪ್ಪಿನಕಾಯಿ ತಿನ್ನುವ ಬಯಕೆ ಯಾಕೆ…?

Pinterest LinkedIn Tumblr

ಬಸುರಿ ಬಯಕೆಗಳು ನಿಜಕ್ಕೂ ಆಶ್ಚರ್ಯಕರವಾದಷ್ಟು ವಿಚಿತ್ರವಾದವು. ನೀವು ಗರ್ಭಿಣಿ ಎಂದು ನಿಮಗೆ ತಿಳಿದೊಡನೆ ಈ ಬಯಕೆಗಳು ಎಲ್ಲಿರುತ್ತವೋ, ಎಲ್ಲವೂ ಮನದಾಳದಿಂದ ಹೊರಬರುತ್ತವೆ. ಮಧ್ಯರಾತ್ರಿಯಲ್ಲಿ ಚಾಕಲೇಟ್ ತಿನ್ನಬೇಕು ಎನಿಸುವುದು, ಬೆಳಗ್ಗೆ ಎದ್ದೊಡನೆ ಟೊಮೇಟೊ ಸೂಪ್ ಕುಡಿಯುವ ಬಯಕೆ, ಹೀಗೆ ಇನ್ನೂ ಹಲವು ಬಯಕೆ. ಆದರೆ ಜಾಗತಿಕವಾಗಿ ಎಲ್ಲಾ ಬಸುರಿ ಹೆಂಗಸರಿಗೂ ಉಂಟಾಗು ವ ಒಂದು ಬಯಕೆ ಎಂದರೆ ಅದು ಉಪ್ಪಿನಕಾಯಿ ತಿನ್ನುವ ಬಯಕೆ. ಅದು ನಿಂಬೆ ಹಣ್ಣಿನದ್ದೋ, ಮಾವಿನ ಕಾಯಿಯದ್ದೋ, ಹಸಿ ಉಪ್ಪಿನ ಕಾಯಿಯೋ ಅಥವಾ ಒಣಗಿಸಿದ ಉಪ್ಪಿನಕಾಯಿಯೋ, ಒಟ್ಟಿನಲ್ಲಿ ಉಪ್ಪಿನಕಾಯಿ ತಿನ್ನಬೇಕು ಎಂಬ ಬಯಕೆ ಅಷ್ಟೇ. ಆದರೆ, ಪ್ರೆಗ್ನನ್ಸಿ ಸಮಯದಲ್ಲಿ ಉಪ್ಪಿನಕಾಯಿ ಸೇವಿಸಬಹುದೇ?

ಉಪ್ಪಿನಕಾಯಿ ಸ್ವತಃ ತಾನೇ ಒಂದು ಆರೋಗ್ಯಕರವಾದ ಆಹಾರ ಅಲ್ಲ. ಕೆಲವು ತಜ್ಞರು ಬಹುತೇಕ ಹೆಂಗಸರಿಗೆ ಈ ಬಯಕೆ ಪ್ರೆಗ್ನನ್ಸಿ ಯಲ್ಲಿ ಉಂಟಾಗೇ ಆಗುತ್ತೆ ಎಂದು ತಲೆಯಲ್ಲಿ ಇರುವುದರಿಂದ, ಅವರಿಗೂ ಈ ಭಾವನೆ ಉಂಟಾಗುತ್ತದೆ ಎನ್ನುತ್ತಾರೆ. ಹೀಗಾಗಿ ನಮ್ಮ ಮೆದುಳು ನಮ್ಮ ನಾಲಿಗೆಗೆ ಏನು ಬಯಸಬೇಕು ಎಂಬುದನ್ನ ಹೇಳುತ್ತದೆ. ಅದರ ಅರ್ಥ ನೀವು ಜೀವನಪೂರ್ತಿ ಹೆಂಗಸು ಗರ್ಭಿಣಿ ಆದೊಡನೆ ಉಪ್ಪಿನಕಾಯಿ, ಹುಳಿ ಹಣ್ಣುಗಳನ್ನ ಬಯಸಬೇಕೆಂದು ಕೇಳುತ್ತಲೇ ಬಂದಿರುವ ಕಾರಣ, ನಿಮಗೆ ನಿಜವಾಗಿಯೂ ಉಪ್ಪಿನ ಕಾಯಿ ತಿನ್ನಲೇ ಬೇಕು ಅನಿಸದಿದ್ದರೂ, ನಿಮ್ಮ ಮೆದುಳು ನಿಮಗೆ ಉಪ್ಪಿನಕಾಯಿ ತಿನ್ನುವ ಅವಶ್ಯಕತೆ ಇದೆ ಎಂದು ನಿಮ್ಮ ನಾಲಿಗೆಗೆ ಹೇಳಿಕೊಡುತ್ತದೆ.

ಆದರೆ, ಬಹುತೇಕ ಹೆಂಗಸರಿಗೆ ಗೊತ್ತಿಲ್ಲದ ಒಂದು ವಿಷಯ ಎಂದರೆ, ನಿಮ್ಮ ಪ್ರೆಗ್ನನ್ಸಿಗೆ ಅಗತ್ಯವಾಗಿರುವ ಪೋಷಕಾಂಶಗಳು ಈ ಉಪ್ಪಿನ ಪದಾರ್ಥಗಳಲ್ಲಿ ಇರುತ್ತವೆ. ಈ ಪೋಷಕಾಂಶಗಳು ಪ್ರೆಗ್ನನ್ಸಿ ಸಮಯದಲ್ಲಿ ನಿಮ್ಮ ದೇಹದಲ್ಲಿ ಸುಲಭವಾಗಿ ಜೀರ್ಣಗೊಳ್ಳುತ್ತವೆ. ನಮ್ಮ ದೇಸೀ ಉಪ್ಪಿನಕಾಯಿಗಳಲ್ಲಿ ಲೈಕೊಪೀನ್ ಎಂಬ ಪೋಷಕಾಂಶವಿದ್ದು, ಇದು ಗರ್ಭಿಣಿ ಹೆಂಗಸರಿಗೆ ತುಂಬಾ ಉಪಯುಕ್ತವಾದ ಶಕ್ತಿಶಾಲಿ ಪೋಷಕಾಂಶ ಆಗಿರುತ್ತದೆ. ಆದರೆ, ಇಲ್ಲಿ ನೆನಪಿಡಬೇಕಾದ ಇನ್ನೊಂದು ವಿಷಯ ಎಂದರೆ ಎಲ್ಲಾ ಉಪ್ಪಿನಕಾಯಿಗಳ ವಿಷಯದಲ್ಲೂ ಇದು ನಿಜವಲ್ಲ.

ನೀವು ಸೇವಿಸುವ ಉಪ್ಪಿನಕಾಯಿಯಲ್ಲಿ ಎಷ್ಟು ಪ್ರಮಾಣ ಉಪ್ಪು ಇದೆ ಎಂಬುದನ್ನ ನೀವು ಗಮನಿಸಬೇಕು ಮತ್ತು ಅತಿಯಾದ ಉಪ್ಪಿನ ಅಂಶವಿರುವ ಉಪ್ಪಿನಕಾಯಿಗಳಿಂದ ದೂರ ಇರಬೇಕು. ಇಲ್ಲವಾದರೆ, ಉಪ್ಪಿನಕಾಯಿಯಿಂದ ಲಭಿಸಬೇಕಿದ್ದ ಉಪಯೋಗಗಳಿಗೆ ವಿರುದ್ಧ ವಾದ ಪರಿಣಾಮಗಳು ನಿಮ್ಮ ದೇಹಕ್ಕೆ ಉಂಟಾಗಬಹುದು. ಅಷ್ಟೇ ಅಲ್ಲದೆ, ಉಪ್ಪಿನಕಾಯಿಯಲ್ಲಿ ಸೋಡಿಯಂ ಅಂಶ ಹೆಚ್ಚಾಗಿರುವ ಕಾರಣ, ಗರ್ಭಿಣಿ ಹೆಂಗಸರು ಉಪ್ಪಿನಕಾಯಿಯನ್ನು ನೀರಿನೊಂದಿಗೆ ಸೇವಿಸಬೇಕು. ಗರ್ಭಿಣಿ ಹೆಂಗಸು ಈ ಹಿಂದೆ ಏನಾದರೂ ತಾನು ಅಧಿಕ ರಕ್ತದೊತ್ತಡ (ಹೈ-ಬಿಪಿ) ತೊಂದರೆ ಅನುಭವಿಸಿದ್ದರೆ, ಆಕೆಯು ಉಪ್ಪಿನಕಾಯಿ ಅಥವಾ ಯಾವುದೇ ಉಪ್ಪಿನ ಪದಾರ್ಥವನ್ನ ಸೇವಿಸುವುದರಿಂದ ದೂರ ಉಳಿಯುವುದು ಒಳಿತು.

Comments are closed.