ಆರೋಗ್ಯ

ಸ್ನಾನ ಯಾವಾಗ ಮಾಡಿದರೂ ಏನಾಗಲ್ಲ, ಆದರೆ ಊಟವಾದ ಬಳಿಕ ಮಾತ್ರ ಮಾಡಬಾರದು, ಯಾಕೆ ?

Pinterest LinkedIn Tumblr

ದೇಹವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕಾದರೆ ಯಾರೇ ಆಗಲಿ ಸ್ನಾನ ಮಾಡಬೇಕು. ಸ್ನಾನದಿಂದ ದೇಹ ಸ್ವಚ್ಛವಾಗುವುದಷ್ಟೇ ಅಲ್ಲ, ಮನಸ್ಸಿಗೂ ಅದು ಆಹ್ಲಾದವನ್ನು ನೀಡುತ್ತದೆ. ಅದೆಷ್ಟೋ ಪ್ರಶಾಂತತೆಯನ್ನು ಸಿಗುತ್ತದೆ. ಕೆಲವರು ದಿನಕ್ಕೆ ಒಮ್ಮೆ ಸ್ನಾನ ಮಾಡುತ್ತಾರೆ. ಕೆಲವರು ಎರಡು ಸಲ ಸ್ನಾನ ಮಾಡುತ್ತಾರೆ. ಇನ್ನೂ ಕೆಲವರು ದಿನಗಟ್ಟಲೆ ಸ್ನಾನ ಮಾಡಲ್ಲ. ಈ ವಿಚಾರ ಪಕ್ಕಕ್ಕಿಟ್ಟರೆ ಸ್ನಾನ ಯಾವಾಗ ಮಾಡಿದರೂ ಏನಾಗಲ್ಲ, ಆದರೆ ಭೋಜನದ ಬಳಿಕ ಮಾತ್ರ ಮಾಡಬಾರದು. ಹೌದು, ಅದು ಕರೆಕ್ಟ್. ನಮ್ಮ ಹಿರಿಯರಷ್ಟೇ ಅಲ್ಲದೆ, ವಿಜ್ಞಾನಿಗಳು ಈ ವಿಷಯವನ್ನೇ ಹೇಳುತ್ತಿದ್ದಾರೆ. ಆದರೆ ಭೋಜನ ಮಾಡಿದ ಬಳಿಕ ಸ್ನಾನ ಯಾಕೆ ಮಾಡಬಾರದು..? ಮಾಡಿದರೆ ಏನಾಗುತ್ತದೆ..? ಎಂಬ ಸಂಗತಿಯನ್ನು ಈಗ ತಿಳಿದುಕೊಳ್ಳೋಣ.

ಊಟ ಮಾಡಿದ ಬಳಿಕ ನಮ್ಮ ದೇಹದಲ್ಲಿ ರಕ್ತ ಹೆಚ್ಚಾಗಿ ಜೀರ್ಣಕೋಶಕ್ಕೆ ಸರಬರಾಜಾಗುತ್ತಿರುತ್ತದೆ. ಯಾಕೆಂದರೆ ತಿಂದ ಆಹಾರ ಜೀರ್ಣವಾಗಲು ಶಕ್ತಿ ಬೇಕಾಗುತ್ತದೆ. ಆದ್ದರಿಂದ ಆ ಶಕ್ತಿಯನ್ನು ನೀಡಲು ಜೀರ್ಣಕೋಶಕ್ಕೆ ಹೆಚ್ಚಿನ ರಕ್ತ ಸಂಚಾರವಾಗುತ್ತದೆ. ತಿಂದ ಕೂಡಲೆ ಸ್ನಾನ ಮಾಡಿದರೆ ಆಗ ನಮ್ಮ ದೇಹದ ಉಷ್ಣತೆಯಲ್ಲಿ ಬದಲಾವಣೆಯಾಗುತ್ತದೆ. ಇದನ್ನು ಮಿದುಳು ಕೂಡಲೆ ಗ್ರಹಿಸಿ ದೇಹದ ಉಷ್ಣತೆಯನ್ನು ನಿಯಂತ್ರಿಸುವಲ್ಲಿ ತೊಡಗುತ್ತದೆ. ಆಗ ರಕ್ತ ನಮ್ಮ ಜೀರ್ಣಕೋಶಕ್ಕೆ ಅಲ್ಲದೆ ಚರ್ಮದ ಕಡೆಗೆ ಹರಿಯುತ್ತದೆ. ಇದರಿಂದ ಜೀರ್ಣ ಕ್ರಿಯೆಗೆ ತೊಂದರೆಯಾಗುತ್ತದೆ.

ಒಂದು ವೇಳೆ ನಾವು ತಿಂದ ಬಳಿಕ ತಣ್ಣೀರಿನ ಸ್ನಾನ ಮಾಡಿದರೆ ಆಗ ರಕ್ತನಾಳಗಳು ಹಿಗ್ಗುತ್ತವೆ. ಇದರಿಂದ ಹೆಚ್ಚು ರಕ್ತ ಸಂಚಲನ ವಾಗುತ್ತದೆ. ಆ ಮೂಲಕ ದೇಹದ ಉಷ್ಣತೆ ಸಾಮಾನ್ಯ ಸ್ಥಿತಿಗೆ ತಲುಪುತ್ತದೆ. ಅದೇ ರೀತಿ ಬಿಸಿನೀರಿನ ಸ್ನಾನ ಮಾಡಿದರೆ ಆಗ ಚರ್ಮದಲ್ಲಿನ ರಕ್ತನಾಳಗಳು ದೊಡ್ಡದಾಗಿ ಅವು ಹೆಚ್ಚು ಉಷ್ಣತೆಯನ್ನು ಚರ್ಮದ ಮೂಲಕ ಹೊರಗೆ ಕಳುಹಿಸುತ್ತವೆ. ಇದರಿಂದ ದೇಹ ಸಾಮಾನ್ಯ ಉಷ್ಣತೆಗೆ ತಲುಪುತ್ತದೆ. ಈ ಪ್ರಕ್ರಿಯೆ ಮುಗಿಯುವರೆಗೆ ಜೀರ್ಣಕೋಶಕ್ಕೆ ರಕ್ತ ಸೂಕ್ತವಾಗಿ ಲಭಿಸಲ್ಲ. ಇದರಿಂದ ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ, ಗ್ಯಾಸ್, ಅಸಿಡಿಟಿಯಂತಹ ಸಮಸ್ಯೆಗಳು ಬರುತ್ತವೆ. ಆದರೆ ಆ ರೀತಿ ಸಮಸ್ಯೆಗಳು ಬರದಿರಲು ತಿಂದ ಕೂಡಲೇ ಸ್ನಾನ ಮಾಡಬಾರದೆಂದು ಹೇಳುತ್ತಾರೆ.

ಹಾಗಿದ್ದರೆ ತಿಂದ ಎಷ್ಟು ಸಮಯದ ಬಳಿಕ ಸ್ನಾನ ಮಾಡಬೇಕು? 45ರಿಂದ 60 ನಿಮಿಷಗಳ ಕಾಲ ಬಿಟ್ಟು ಸ್ನಾನ ಮಾಡಬೇಕು. ಅಷ್ಟೊತ್ತಿಗೆ ತಿಂದ ಆಹಾರ ಬಹುತೇಕ ಜೀರ್ಣವಾಗಿರುತ್ತದೆ. ಆದಕಾರಣ ತಿಂದ ಗಂಟೆ ಬಳಿಕ ನಿರಾತಂಕವಾಗಿ ಸ್ನಾನ ಮಾಡಬಹುದು. ಯಾವುದೇ ಸಮಸ್ಯೆ ಬರಲ್ಲ..!

Comments are closed.