ಆರೋಗ್ಯ

ಕುಂಬಳಕಾಯಿ ಸೇವನೆಯಿಂದ ನಮ್ಮ ಹೊಟ್ಟೆ ಆರೋಗ್ಯವಾಗಿರಿಸಲು ಸಹಾಯಕ

Pinterest LinkedIn Tumblr

ದೇಹದ ತೂಕವನ್ನು ಇಳಿಸಲು ಕುಂಬಳಕಾಯಿ ಒಂದು ದಿವ್ಯಔಷಧಿ. ಮಾವಿನಕಾಯಿ ತಿಂದು ಮಾವಿನ ಮರದ ಕೆಳಗೆ ಮಲಗೋದಕ್ಕಿಂತ ಕುಂಬಳಕಾಯಿ ತಿಂದು ಕಷ್ಟ ಪಟ್ಟು ಕೆಲಸ ಮಾಡಿದ್ರೆ ತುಂಬ ಒಳ್ಳೇದು ಅಂತ ನಮ್ಮ ಹಿರಿಯರು ಆಗಿನ ಕಾಲದಿಂದಲೂ ಹೇಳುತ್ತಾ ಬಂದಿ ದ್ದಾರೆ. ಈ ಒಂದು ಕುಂಬಳಕಾಯಿಯಿಂದ ತುಂಬಾನೇ ಲಾಭಗಳು ನಮಗೆ ಸಿಗುತ್ತವೆ ಕುಂಬಳಕಾಯಿಯಲ್ಲಿ ಇರುವ ಪೋಸ್ಟಿಕಾಂಶ ಹೊಟ್ಟೆಗೆ ಸಂಬಂದಿಸಿದ ರೋಗವನ್ನ ದೂರ ಮಾಡೋದಲ್ಲದೆ ಹೃದಯ ಸಂಬಂಧಿ ಕಾಯಿಲೆಯನ್ನ ದೂರಮಾಡುತ್ತೆ ಹಾಗಾದರೆ ಕುಂಬಳ ಕಾಯಿ ಸೇವನೆಯಿಂದ ನಮ್ಮ ದೇಹಕ್ಕೆ ಸಿಗೋ ಆರೋಗ್ಯಕರ ಅಂಶಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಆದ್ದರಿಂದ ಈ ಲೇಖನವನ್ನು ಪೂರ್ತಿಯಾಗಿ ಓದಿರಿ.

ಕುಂಬಳಕಾಯಿ ನಮ್ಮ ಹೊಟ್ಟೆಗೆ ತುಂಬ ಲಾಭದಾಯಕವಾಗಿದೆ. ಅದರ ಸೇವನೆಯಿಂದ ನಮ್ಮ ಹೊಟ್ಟೆಯನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ. ಕುಂಬಳಕಾಯಿಯಲ್ಲಿ ಡಯ್ಯಾಟ್ರಿ ಫೈಬರ್ ಇರುವ ಕಾರಣ ಹೊಟ್ಟೆಗೆ ಸಂಬಂದಿಸಿದ ಕಾಯಿಲೆಗಳನ್ನ ಇದು ದೂರ ಮಾಡುತ್ತದೆ. ಅಷ್ಟೇ ಅಲ್ಲದೆ ಇದು ನಮಗೆ ಯ್ಯಾಸಿಡಿಟಿ ಮತ್ತು ಹೊಟ್ಟೆ ಉರಿಯನ್ನು ಕಡಿಮೆ ಮಾಡುತ್ತದೆ. ಕುಂಬಳಕಾಯಿಯಲ್ಲಿ ವಿಟಮಿನ್ ಸಿ ಎಂಬ ಅಂಶ ಇರುವ ಕಾರಣ ಇದು ಇನ್ಸುಲೆನಗೆ ಸಮಾನವಾಗಿರುತ್ತದೆ. ಅಲ್ಲದೆ ಜಾಸ್ತಿ ಆಗಿರುವ ಸಕ್ಕರೆ ಖಾಯಿಲೆಯನ್ನು ಕಡಿಮೆ ಮಾಡುತ್ತದೆ. ಸಕ್ಕರೆ ಖಾಯಿಲೆ ಇರುವ ರೋಗಿಗಳು ವಾರಕ್ಕೆ ಎರಡು ಬಾರಿ ಕುಂಬಳಕಾಯಿ ಸೇವನೆ ಮಾಡುವುದರಿಂದ ತುಂಬಾನೆ ಒಳ್ಳೆಯದು. ಕುಂಬಳಕಾಯಿಯಲ್ಲಿ ಆಂಟಿ ಆಕ್ಕ್ಸಿಜನ್ ಅಂಶಗಳು ತುಂಬಾನೆ ಹೇರಳವಾಗಿರುತ್ತವೆ. ಇದು ನಮ್ಮ ದೇಹದಲ್ಲಿ ಇರುವ ಕ್ಯಾನ್ಸರ್ ಕಣಗಳ ವಿರುದ್ದ ಹೊರಡುತ್ತದೆ ಅದನ್ನ ತಡೆಯುತ್ತದೆ.

ಹಾಗಾಗಿ ನಮ್ಮ ಡಯೆಟ್ ನಲ್ಲಿ ಕುಂಬಳಕಾಯಿ ಪಲ್ಯ ಕುಂಬಳಕಾಯಿ ರಸವನ್ನು ಸೇವಿಸಿದರೆ ತುಂಬಾನೇ ಒಳ್ಳೆಯದು ಇದರ ಸೇವನೆಯಿಂದ ಕ್ಯಾನ್ಸರ್ ನಂತಹ ಗಂಭೀರ ರೋಗಗಳನ್ನು ನಮ್ಮ ದೇಹಕ್ಕೆ ತಟ್ಟದಂತೆ ನಾವು ತಡೆಯಬಹುದು ಕುಂಬಳಕಾಯಿ ಸೇಚನೆಯಿಂದ ನಮ್ಮ ದೇಹದ ಒತ್ತಡ ನಿದ್ರಾಹೀನತೆ ಕೋಪ ಖಿನ್ನತೆ ಸಮಸ್ಯೆಗಳನ್ನು ನಾವು ದೂರಮಾಡಿಕೊಳ್ಳಬಹುದು ಇದರ ಹೊರತು ಕುಂಬಳಕಾಯಿ ಸೇವನೆಯಿಂದ ನಮ್ಮ ದೇಹಕ್ಕೆ ತುಂಬಾನೇ ಶಕ್ತಿಯನ್ನು ನೀಡುತ್ತದೆ ಕುಂಬಳಕಾಯಿ ನಮ್ಮ ದೇಹದಲ್ಲಿರುವ ಕೊಬ್ಬಿನ ಅಂಶವನ್ನು ನಿಯಂತ್ರದಲ್ಲಿ ಇರಿಸುತ್ತದೆ ಹಾಗೇನೇ ಹೃದಯವನ್ನು ಕಾಪಾಡುತ್ತದೆ. ನಮಗೆ ಹೃದಯ ಸಂಬಂಧಿತ ಸಮಸ್ಯೆ ಇದ್ದರೆ ಇದರ ಸೇವನೆ ಮಾಡುವುದು ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿರುತ್ತದೆ ಆದ್ದರಿಂದ ಕುಂಬಳಕಾಯಿ ಸೇವಿಸುವುದು ಒಳ್ಳೆಯದು.

ಈ ಕುಂಬಳಕಾಯಿಯಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ ಫೈಬರ್ ಜಾಸ್ತಿ ಇರುತ್ತದೆ ಹಾಗಾಗಿ ಇದನ್ನು ಸೇವಿಸುವುದರಿಂದ ಪದೇ ಪದೇ ಹೊಟ್ಟೆ ಹಸಿಯುವುದಿಲ್ಲ ಇದು ನಮ್ಮ ಹೊಟ್ಟೆಯನ್ನು ತುಂಬುವಂತೆ ಮಾಡುತ್ತದೆ ಹಾಗಾಗಿ ನಾವು ಹೆಚ್ಚಾಗಿ ಆಹಾರವನ್ನು ಸೇವಿಸಲು ಆಗುವುದಿಲ್ಲ ಆದ್ದರಿಂದ ನಮ್ಮ ದೇಹದ ತೂಕವನ್ನು ನಾವು ಕಡಿಮೆ ಮಾಡಿಕೊಳ್ಳಬಹುದು. ಕುಂಬಳಕಾಯಿಯಲ್ಲಿ ವಿಟಮಿನ್ ಎ ಎಂಬ ಅಂಶ ವಿರುವುದರಿಂದ ಇದು ನಮ್ಮ ಕಣ್ಣಿಗೆ ತುಂಬ ಒಳ್ಳೆಯದು ದಿನ ಒಂದು ಬಟ್ಟಲು ಕುಂಬಳಕಾಯಿ ತಿನ್ನುವುದರಿಂದ ಕೆಲವು ದಿನಗಳಲ್ಲಿ ನಮ್ಮ ಕಣ್ಣಿನ ದೃಷ್ಟಿ ಚುರುಕಾಗುತ್ತದೆ

Comments are closed.