ಆರೋಗ್ಯ

ಈ 2 ಮಾತ್ರೆಗಳನ್ನು ಒಟ್ಟಿಗೆ ತೆಗೆದುಕೊಳ್ಳುವಾಗ ಆದಷ್ಟು ಎಚ್ಚರಿಕೆ ವಹಿಸಿರಿ.

Pinterest LinkedIn Tumblr

ಈ ಎರಡು ಮಾತ್ರೆಗಳನ್ನು ಒಟ್ಟಿಗೆ ಸೇವಿಸುವುದರಿಂದ ಹೃದಯಾಘಾತವಾಗುವ ಸಾಧ್ಯತೆ ಇರುತ್ತದೆ. ಇಂದಿನ ದಿನಗಳಲ್ಲಿ ನಮ್ಮ ಆಹಾರ ಕ್ರಮ ಸರಿಯಿಲ್ಲದ ಕಾರಣ ದೇಹಕ್ಕೆ ಶಕ್ತಿಯನ್ನು ಪಡೆಯಲು ವಿವಿಧ ರೀತಿಯ ಮಾತ್ರೆಗಳನ್ನು ಇಂದು ಜನರು ಸೇವಿಸುತ್ತಾರೆ ಆದರೆ ಅದರಿಂದ ನಮ್ಮ ದೇಹಕ್ಕೆ ಶಕ್ತಿ ಬರುವುದಕ್ಕಿಂತ ಹೆಚ್ಚಾಗಿ ಸಾಕಷ್ಟು ಅಡ್ಡ ಪರಿಣಾಮ ಆಗುತ್ತದೆ ಹಾಗಾದರೆ ಆ ಮಾತ್ರೆಗಳು ಯಾವುವು ಈ ಲೇಖನದಿಂದ ತಿಳಿಯೋಣ ಬನ್ನಿ.

ನಮಸ್ಕಾರ ಸ್ನೇಹಿತರೆ ಒಟ್ಟಿಗೆ ಈ 2 ಮಾತ್ರೆಗಳನ್ನು ಸೇವಿಸಿದರೆ ಹೃದಯಾಘಾತ ಆಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ದೇಹಕ್ಕೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಎರಡು ಬಹಳ ಮುಖ್ಯ ಹೀಗಾಗಿ ಉತ್ತಮ ಆರೋಗ್ಯ ಮತ್ತು ಬಲವಾದ ಮೂಳೆಗಳಿಗೆ ಕ್ಯಾಲ್ಸಿಯಂ ಮಾತ್ರೆಗಳನ್ನು ತಗೆದು ಕೊಳ್ಳಲಾಗುತ್ತದೆ. ಅದೇ ರೀತಿ ವಿಟಮಿನ್ ಡಿ ನಮ್ಮ ಕರುಳು ಮೂಳೆಗಳು ನರ ಥೈರಾಯ್ಡ್ ಗ್ರಂಥಿ ಚರ್ಮ ಮತ್ತು ಕೂದಲು ಕೋಶಗಳು ರಾಸ್ಟ್ರೇಟ್ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಕೋಶಗಳ ಮೇಲೆ ಪರಿಣಾಮ ಬೀರುತ್ತದೆ

ಆದರೆ ಇತ್ತೀಚಿನ ಸಂಶೋಧನೆಯ ಪ್ರಕಾರ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮಾತ್ರೆಗಳನ್ನು ಒಟ್ಟಿಗೆ ಸೇವಿಸುವುದರಿಂದ ಹೃದಯಾ ಘಾತ ದ ಸಾಧ್ಯತೆ ಹೆಚ್ಚು ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ, ಇದನ್ನು ಏನೆಲ್ಸ್ ಆಫ್ ಇಂಟರ ನ್ಯಾಷನಲ್ ಔಷಧಿಯಲ್ಲಿ ಪ್ರಕಟವಾದ ಈ ಸಂಶೋಧನಾ ವರದಿ ಪ್ರಕಾರ 2 ಮಾತ್ರೆಗಳು ನಮ್ಮ ದೇಹದ ಮೇಲೆ ಅಡ್ಡ ಪರಿಣಾಮ ಬಿರುವುದನ್ನು ಪತ್ತೆ ಹಚ್ಚಲಾಗಿದೆ ಈ ವಿಟಮಿನ್ ಹಾಗೂ ಕ್ಯಾಲ್ಸಿಯಂ ಮಾತ್ರೆಗಳನ್ನು ಜೊತೆಯಾಗಿ ಸೇವಿಸುವುದರಿಂದ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಇವುಗಳನ್ನು ಒಟ್ಟಿಗೆ ಒಂದೇ ಸಮಯದಲ್ಲಿ ತಿಂದರೆ ಹೃದಯಾಘಾತದ ಅಪಾಯವನ್ನು 17% ರಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧನಾ ಪಲಿತಾಂಶಗಳು ಸೂಚಿಸಿವೆ.

2012 ರಲ್ಲಿ ಜರ್ಮನಿಯ ಕೆಲವು ಸಂಶೋಧಕರು ಕ್ಯಾಲ್ಸಿಯಂಗಾಗಿ ಔಷಧಿಗಳನ್ನು ತೆಗೆದುಕೊಳ್ಳುವ ಜನರಿಗೆ ಹೃದಯಾಘಾತದ ಅಪಾಯವಿದೆಯೆಂದು ವರದಿ ಮಾಡಿದ್ದರು. ಕ್ಯಾಲ್ಸಿಯಂ ಮಾತ್ರೆಗಳನ್ನು ತಿನ್ನುವುದಕ್ಕಿಂತ ಕ್ಯಾಲ್ಸಿಯಂ ಹೊಂದಿರುವ ಸಮತೋಲಿತ ಆಹಾರವನ್ನು ಸೇವಿಸುವುದು ಉತ್ತಮ ಎಂದು ಅಧ್ಯಯನ ತಂಡ ಶಿಫಾರಸ್ಸು ಮಾಡಿತು. ಇದೀಗ ಮತ್ತೊಮ್ಮೆ ಈ ವಿಟಮಿನ್ ಕ್ಯಾಲ್ಸಿಯಂ ಮಾತ್ರೆಗಳಿಂದ ಹೃದಯಾಘಾತದ ಅಪಾಯವಿದೆಯೆಂದು ವರದಿಯಾಗಿದೆ. ಇನ್ನು ವಿಟಮಿನ್ ಡಿ ಮಾತ್ರೆಗಳ ಅತಿಯಾದ ಬಳಕೆಯು ದೇಹದಲ್ಲಿ ಕ್ಯಾಲ್ಸಿಯಂ ಮಟ್ಟವನ್ನು ಹೆಚ್ಚಿಸುತ್ತದೆ ಈ ಸ್ಥಿತಿಯನ್ನು ಹೈಫರ್ ಕೆಲೆಮೊಶಿಯ ಎಂದು ಕರೆಯಲಾಗುತ್ತದೆ. ಈ ಸಮಸ್ಯೆ ಕಾಣಿಸಿಕೊಂಡರೆ ನಿಮ್ಮ ಮೂತ್ರಪಿಂಡದ ವೈಫಲ್ಯವಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ ಆದ್ದರಿಂದ ಈ 2 ಮಾತ್ರೆಗಳನ್ನು ಒಟ್ಟಿಗೆ ತೆಗೆದುಕೊಳ್ಳುವಾಗ ಆದಷ್ಟು ಎಚ್ಚರಿಕೆ ವಹಿಸಿರಿ

Comments are closed.