ಆರೋಗ್ಯ

ಆಹಾದಲ್ಲಿರುವ ಪ್ರೋಟಿನ್‌ಗಳ ಗುಣಮಟ್ಟ ಹಾಗೂ ಅದರ ಪ್ರಾಮುಖ್ಯತೆ ಬಗ್ಗೆ ತಿಳಿಯಬೇಕಾದ ಅತಿ ಮುಖ್ಯ ವಿಷಯ

Pinterest LinkedIn Tumblr

ಸಿಹಿ ತಿನಿಸುಗಳು ಮತ್ತು ಸ್ನ್ಯಾಕ್ಸ್‌ಗಳ ಮೇಲಿನ ಆಸೆಯನ್ನು ಬಿಟ್ಟುಬಿಡಲು ನಿಮಗೆ ಕಷ್ಟವಾಗುತ್ತಿದೆಯೇ? ಸಂವೇದನೆಯಲ್ಲಿ ಯಾವುದೋ ಸವಾಲಿದೆ ಎಂಬ ಭಾವನೆ ಬರುತ್ತಿದೆಯೇ? ನಿಮ್ಮ ನಿರೋಧ ಶಕ್ತಿಯು ನಿಮ್ಮನ್ನು ಆಗಾಗ್ಗೆ ಚಿಂತನೆಗೆ ಹಚ್ಚುತ್ತದೆಯೇ? ಈ ಎಲ್ಲ ಪ್ರಶ್ನೆಗಳಲ್ಲಿ ಒಂದಕ್ಕಾದರೂ ನಿಮ್ಮ ಉತ್ತರ `ಹೌದು’ ಎಂದಾಗಿದ್ದರೆ, ನೀವು ಪ್ರೋಟಿನ್ ಕೊರತೆಯಿಂದ ಬಳಲುತ್ತಿದ್ದೀರಿ ಹಾಗೂ ಈ ಬಗ್ಗೆ ಲಕ್ಷ್ಯಕೊಡಬೇಕು ಇದೇ ಸೂಕ್ತ ಸಮಯ ಎಂದರ್ಥ.

ಪ್ರೋಟಿನ್‌ಗಳೆಂದರೆ, ನಮ್ಮ ಶರೀರದ ಇಟ್ಟಿಗೆ ಮತ್ತು ಗಾರೆಯಿದ್ದಂತೆ. ಇವುಗಳ ನೋವು ಶಮನ, ನಿರೋಧ ಶಕ್ತಿ, ಜೀರ್ಣಕ್ರಿಯೆ, ಬೆಳವಣಿಗೆ ಮತ್ತು ಶರೀರದೊಳಗೇ ಎಲ್ಲವುಗಳನ್ನೂ ಸಾಗಿಸುವ ಅಂಶ ಸೇರಿದಂತೆ ಹಲವು ಕಾರ್ಯಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ಹೊಂದಿರುತ್ತವೆ. ಈ ಎಲ್ಲ ವ್ಯವಸ್ಥೆಗಳೂ ಸರಿಯಾಗಿ ಕಾರ್ಯನಿರ್ವಹಿಸಬೇಕೆಂದರೆ, ನಾವು ಸಾಕಷ್ಟು ಪ್ರಮಾಣದ ಪ್ರೋಟಿನ್‌ಗಳನ್ನು ಸೇವಿಸಬೇಕಾದ್ದು ಮುಖ್ಯ.

ಅಂದರೆ, ದುರದೃಷ್ಟವಶಾತ್, 10 ಮಂದಿ ಭಾರತೀಯರ ಪೈಕಿ 9 ಮಂದಿ ಸಾಕಷ್ಟು ಪ್ರೋಟಿನ್‌ಗಳನ್ನು ಸೇವಿಸುತ್ತಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯವಾದ ಗುಣಮಟ್ಟದ ಪ್ರೋಟಿನ್‌ಗಳು ಹಾಗೂ ಅವುಗಳ ಪ್ರಮಾಣದ ಪ್ರಾಮುಖ್ಯತೆಯನ್ನು ಅರಿಯಬೇಕಾದದ್ದು ಅತಿ ಮುಖ್ಯ.

`ಇಂದಿನ ಧಾವಂತದ ಜೀವನಶೈಲಿ ಮತ್ತು ಅತ್ಯಧಿಕ ಕಾರ್ಬೋಹೈಡ್ರೇಟ್‌ಗಳು, ಸಿಂಪಲ್ ಶುಗರ್, ಪ್ರೋಟಿನ್‌ಗಳು ಕಡಿಮೆಯಿರು ವಂತಹ ಫಾಸ್ಟ್‌ಫುಡ್‌ಗಳ ಜನಪ್ರಿಯತೆ ಹೆಚ್ಚುತ್ತಿರುವುದು ನಮ್ಮ ದೇಶದಲ್ಲಿ ಕಂಡುಬರುತ್ತಿದೆ. ಇಷ್ಟೇ ಅಲ್ಲ, ಪ್ರೋಟಿನ್‌ಗಳ ಪ್ರಾಮುಖ್ಯತೆಯ ಬಗ್ಗೆ ಸರಿಯಾದ ಜ್ಞಾನ ಇಲ್ಲದೇ ಇರುವುದು ಕೂಡ ಭಾರತೀಯರಲ್ಲಿ ಪ್ರೋಟಿನ್ ಕೊರತೆ ಕಂಡುಬರಲು ಕಾರಣ. ನಟ್‌ಗಳು, ಕಾಳುಗಳು, ಸೋಯಾ ಮತ್ತಿತರ ಕಡಿಮೆ ಕೊಬ್ಬಿರುವ ಡೈರಿ ಪ್ರೋಟಿನ್‌ಗಳಂತಹ ಪ್ರೋಟಿನ್‌‌ಭರಿತ ಆಹಾರಗಳನ್ನು ಸೇವಿಸುವಂತೆ ಸಲಹೆ ನೀಡಿದರೂ, ದೈನಂದಿನ ಡಯೆಟ್‌ನಲ್ಲಿ ಇವುಗಳನ್ನು ಸೇವಿಸಲು ನಿಮ್ಮ ಜೀವನಶೈಲಿ ಅನುವು ಮಾಡಿಕೊಡುತ್ತಿಲ್ಲ ಎಂದಾದರೆ, ಅದಕ್ಕಾಗಿ ಕೆಲವು ಪೂರಕಗಳನ್ನು ಪರಿಗಣಿಸಿ ತಿಳಿಸಿಕೊಡಲಾಗುತ್ತದೆ’ ಎನ್ನುತ್ತಾರೆ ಪುಣೆಯಲ್ಲಿ ಪೌಷ್ಠಿತಾಂಶ ತಜ್ಞೆ .

ಪ್ರೋಟಿನ್ ಕೊರತೆಯನ್ನನು ಮನಗಂಡು ಸೂಕ್ತ ಸಮಯಕ್ಕೆ ಅದದಕ್ಕೆ ಪ್ರತಿಕ್ರಿಯಿಸದಿದ್ದರೆ, ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ.

ಸಿಹಿ ತಿನಿಸುಗಳು ಮತ್ತು ಜಂಕ್ ಫುಡ್‌‌ನಂತರ ಸ್ನ್ಯಾಕ್ಸ್‌ಗಳ ಮೇಲೆ ಅತಿಯಾದ ಆಸೆ, ಹಂಬಲ ಮೂಡುತ್ತಿವೆ ಎಂದರೆ ಅದು ಪ್ರೋಟಿನ್ ಕೊರತೆಯ ಸಂಕೇತ. ನಿರಂತರ ಆಹಾರದ ಹಂಬಲವು ದೇಹದಲ್ಲಿನ ರಕ್ತದ ಗ್ಲೂಕೋಸ್ ಮಟ್ಟ ಅಸ್ತಿರವಾಗಿರುವುದರ ಸಂಕೇತ. ಇದರ ಜತೆಗೆ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಗಳ ಬಳಿಕ ನಿಮ್ಮ ಸ್ನಾಯುಗಳ ಬಳಲಿಕೆ ಕಂಡುಬಂದರೆ ಅದೂ ಸಹ ಪ್ರೋಟಿನ್ ಕೊರತೆಯ ಲಕ್ಷಣ.

ಪ್ರೋಟಿನ್ ಕೊರತೆ ನಮ್ಮ ಸಂವೇದನೆಯ ಕುಗ್ಗುವಿಕೆಯೊಂದಿಗೂ ಸಂಬಂಧ ಹೊಂದಿರುತ್ತದೆ. ಹೆಚ್ಚಿನ ಪ್ರೋಟಿನ್ ವ್ಯಕ್ತಿಯ ಸಂವೇದನಾ ಶಕ್ತಿಯನ್ನು ಸುಧಾರಿಸುತ್ತದೆ. ಸರಿಯಾದ ಪ್ರಮಾಣದಲ್ಲಿ ಪ್ರೋಟಿನ್‌ಗಳನ್ನು ಸೇವಿಸದೇ ಇದ್ದರೆ ತಲೆ ಕೂಡಲು ಉದುರುವ ಸಮಸ್ಯೆ ತಲೆದೋರಬಹುದು.

ಸ್ನಾಯುಗಳ ಕೃಶವಾಗುವಿಕೆ ಕೂಡ ಪ್ರೋಟಿನ್ ಕೊರತೆಯೊಂದಿಗೆ ಸಂಬಂಧ ಹೊಂದಿರುತ್ತದೆ. ರೋಗ ನಿರೋಧಕ ಶಕ್ತಿ ಕುಂಟಿತವಾಗಲು ಪ್ರೋಟಿನ್ ಕೊರತೆಯೇ ಕಾರಣ. ಕೆಲವೊಮ್ಮೆ ದೇಹದಲ್ಲಿಯಾದ ಗಾಯಗಳು ಒಣಗುವುದು ನಿಧಾನವಾದರೆ ಅದೂ ಸಹ ಪ್ರೋಟಿನ್ ಕೊರತೆ ಇದೆ ಎಂಬುದರ ಲಕ್ಷಣ. ಹಾಗಾಗಿ ಇಂತಹ ಲಕ್ಷಣಗಳು ಕಂಡ ತಕ್ಷಣವೇ ತಜ್ಞರನ್ನು ಭೇಟಿಯಾಗಬೇಕು. ಜತೆಗೆ ಸೋಯಾ, ಬಟಾಣಿಯಂತಹ ದ್ವಿದಳ ಧಾನ್ಯಗಳು, ಹಾಲು, ಮೊಸರು, ಮಜ್ಜಿಗೆಯಂತಹ ಅತ್ಯಧಿಕ ಪ್ರೋಟಿನ್‌ಗಳಿರುವ ಆಹಾರ ತೆಗೆದುಕೊಳ್ಳುವ ಜತೆಗೆ ಉತ್ತಮ ಪ್ರೋಟಿನ್ ಪೂರಕಗಳನ್ನು ಸೇವಿಸಬೇಕು.

Comments are closed.