ಆರೋಗ್ಯ

ಬ್ರಾಹ್ಮೀ ರಸವನ್ನು ಜೇನು ತುಪ್ಪ ಜೊತೆ ದಿನಕ್ಕೆ ಮೂರು ಬಾರಿ ಸೇವಿಸಿದರೆ ಊರಿ ಮೂತ್ರ ನಿವಾರಣೆ

Pinterest LinkedIn Tumblr

ಬ್ರಾಹ್ಮೀ ಸೊಪ್ಪು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ.ಇದರ ಜೊತೆಗೆ ಹಲವಾರು ಆರೋಗ್ಯ ಲಾಭಗಳು ಇವೆ ಅವು ಏನೆಂದು ತಿಳಿಯೋಣ ಬನ್ನಿ. ಸಂಸ್ಕೃತದಲ್ಲಿ ಬ್ರಾಹ್ಮೀ ಎಂದು ಕರೆದರೆ ಕನ್ನಡದಲ್ಲಿ ಒಂದೆಲಗ ಮತ್ತು ತುಳುವಿನಲ್ಲಿ ತಿಮರೆ ಎಂದು ಕರೆಯುವ ಗಿಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಿಮರೆ ಎಂದೇ ಹೆಸರುವಾಸಿ. ಗರ್ಭಿಣಿಯರು ಇದರ ರಸ ತೆಗೆದು ಪ್ರತಿ ನಿತ್ಯ ಕುಡಿದರೆ ದೇಹಕ್ಕೆ ಒಳ್ಳೆಯದು ಮತ್ತು ಹುಟ್ಟುವ ಮಗುವಿನ ಆರೋಗ್ಯವೂ ಚೆನ್ನಾಗಿರುತ್ತೆ. ಇನ್ನೂ ಹೃದ್ರೋಗ ಯಿಂದ ಬಳಲುವವರು ಈ ರಸವನ್ನು ಪ್ರತಿ ನಿತ್ಯ ಕುಡಿಯುವುದರಿಂದ ಹೃದಯಕ್ಕೆ ಔಷಧಿಯಂತೆ ಕೆಲಸ ಮಾಡುತ್ತೆ ಅಷ್ಟೆ ಅಲ್ಲದೆ ಇದು ಮೂತ್ರ ವಿಸರ್ಜನೆ ಸಮಯದಲ್ಲಿ ಉರಿ ಆಗುತ್ತಿದ್ದರೆ ಬ್ರಾಹ್ಮೀ ರಸವನ್ನು ಜೇನು ತುಪ್ಪ ಜೊತೆ ದಿನಕ್ಕೆ ಮೂರು ಬಾರಿ ಸೇವಿಸಿದರೆ ಅದರಿಂದ ಉಪಶಮನ ಪಡೆಯಬಹುದು.

ಇನ್ನೂ ಮಕ್ಕಳಿಗೆ ಜ್ಞಾಪಕ ಶಕ್ತಿ ಹೆಚ್ಚಿಸಲು ಪ್ರತಿ ದಿನ ಬೆಳಗ್ಗೆ ನಾಲ್ಕರಿಂದ ಐದು ಬ್ರಾಹ್ಮೀ ಎಲೆಗಳನ್ನೂ ಕಲ್ಲು ಸಕ್ಕರೆ ಜೊತೆ ಸೇವಿಸಲು ನೀಡಬೇಕು. ಸಂಧಿವಾತ ಕಡಿಮೆಯಾಗಲು ಎಳ್ಳೆಣ್ಣೆ ಗೆ ಬ್ರಾಹ್ಮೀ ಎಲೆಯ ರಸ ತಯಾರಿಸಿ ಅದನ್ನು ಉಪಯೋಗಿಸಿ ಕೊಳ್ಳಬಹುದು. ಇನ್ನೂ ಧೀರ್ಘ ಕಾಲದ ತಲೆ ಸಿಬ್ಬು ಕಡಿಮೆಯಾಗಲು ಎಳ್ಳೆಣ್ಣೆ ಜೊತೆಗೆ ಬ್ರಾಹ್ಮೀ ತೈಲವನ್ನು ಬೆರೆಸಿ ತಲೆಗೆ ಹಚ್ಚಿಕೊಳ್ಳಬಹುದು. ನರ ದೌರ್ಬಲ್ಯದಿಂದ ಬಳಲುತ್ತಿರುವವರು ಸಹಾ ಬ್ರಾಹ್ಮಿಯ ಎಲೆಗಳನ್ನು ಒಣಗಿಸಿ ಕುಟ್ಟಿ ಪುಡಿ ಮಾಡಿ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸುವುದರಿಂದ ನಿಮ್ಮ ಧೀರ್ಘ ಕಾಲದ ತಲೆನೋವು ಕಡಿಮೆಯಾಗಿ ನೀವು ಅತ್ಯಂತ ಉಲ್ಲಾಸ ಭರಿತ ಆಗಿರುವಿರಿ. ಒಂದೆಲಗದ ಸೇವನೆ ದೇಹಕ್ಕೆ ಮನಸಿಗೆ ತಂಪು ತರುವುದು ಮಾತ್ರವಲ್ಲದೆ ಸ್ಮರಣಶಕ್ತಿ ವೃದ್ಧಿಸುತ್ತದೆ ಎಂಬ ನಂಬಿಕೆಯಿದೆ.

ಮಕ್ಕಳಿಗೆ ಬೆಳಗ್ಗೆ ಎರಡೆರಡು ಇ ಎಲೆಗಳನ್ನು ತಿನ್ನಲು ಕೊಡುವುದರಿಂದ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ದಿನಕ್ಕೆ ನಾಲ್ಕು ಎಲೆ ಸೇವಿಸುವುದರಿಂದ ಮಾತಿನ ಉಗ್ಗುವಿಕೆ ಇಲ್ಲವಾಗುವುದು. ಮಲ ಬದ್ಧತೆಯಿಂದ ಬಳಲುವವರು ಒಂದೆಲಗ ಸೊಪ್ಪಿನಿಂದ ತಯಾರಿಸಿದ ಪಲ್ಯ ಅಥವಾ ಚಟ್ನಿ ಸೇವಿಸಬಹುದು. ಅರ್ಧ ಚಮಚ ಬ್ರಾಹ್ಮೀ ಎಲೆಯ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಒಂದು ತಿಂಗಳ ಕಾಲ ಸೇವಿಸಿದರೆ ರಕ್ತ ಹೀನತೆಗೆ ಕಡಿಮೆಯಾಗುತ್ತದೆ. ಈ ಎಲೆಯ ರಸವನ್ನು ಗಾಯ ಮತ್ತು ಹುಣ್ಣು ಗಳಿಗೆ ಹಚ್ಚಿದರೆ ಅವು ಬೇಗನೆ ವಾಸಿ ಆಗುತ್ತದೆ. ತೀವ್ರವಾದ ತಲೆನೋವು ಕಾಡುತ್ತಿರುವ ಸಮಯದಲ್ಲಿ ಈ ಸೊಪ್ಪನ್ನು ಅರೆದು ರಸವನ್ನು ತೆಗೆದು ಹಣೆಗೆ ಲೇಪಿಸಬೇಕು. ಕೆಮ್ಮು ದಮ್ಮು ನಿವಾರಣೆಗೆ ಈ ಸೊಪ್ಪನ್ನು ಅರೆದು ಜಜ್ಜಿ ಶುಂಠಿ ಮತ್ತು ಕಾಳುಮೆಣಸನ್ನು ಜಜ್ಜಿ ಹಾಕಿ ಅದಕ್ಕೆ ಸ್ವಲ್ಪ ಬೆಲ್ಲ ಸೇರಿಸಿದ ಕಷಾಯ ಕುಡಿಯಬೇಕು. ಈ ಬ್ರಾಹ್ಮೀ ಎಲೆಯನ್ನು ನೀವು ಉಪಯೋಗಿಸಿ ಅದರ ಪ್ರಯೋಜನ ಪಡೆಯಿರಿ.

Comments are closed.