ಆರೋಗ್ಯ

ಕ್ರಿಮಿಕೀಟಗಳು ಕಚ್ಚಿದ ಭಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡಿದರೆ ತುರಿಕೆ,ನೋವು ತಕ್ಷಣ ನಿವಾರಣೆ

Pinterest LinkedIn Tumblr

ಬಾಳೆಹಣ್ಣು ತಿಂದು ಅದರ ಸಿಪ್ಪೆಯನ್ನು ಎಸೆಯುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಬಾಳೆಹಣ್ಣಿನಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ಬಾಳೆಹಣ್ಣಿನ ಸಿಪ್ಪೆಯಲ್ಲೂ ಇದೆ ಎಂದು ಕೆಲವೊಂದು ಅಧ್ಯಯನಗಳು ಹೇಳುತ್ತವೆ. ಬಾಳೆಹಣ್ಣಿನ ಸಿಪ್ಪೆ ಕೂಡ ಆರೋಗ್ಯಕ್ಕೆ ತುಂಬಾ ಲಾಭಕರ.

ಸಾವಯವವಾಗಿ ಬೆಳೆದಿರುವ ಬಾಳೆಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಬಿ6 ಮತ್ತು ವಿಟಮಿನ್ ಬಿ12 ಅತ್ಯಧಿಕ ಮಟ್ಟದಲ್ಲಿ ಇದೆ. ಇಷ್ಟು ಮಾತ್ರವಲ್ಲದೆ ಮೆಗ್ನಿಶಿಯಂ, ಪೊಟಾಶಿಯಂ, ನಾರಿನಾಂಶ ಮತ್ತು ಪ್ರೋಟೀನ್ ಬಾಳೆಹಣ್ಣಿನ ಸಿಪ್ಪೆಯಲ್ಲಿದೆ.

ಮೊಡವೆಗಳಿಗೆ :
ಮೊಡವೆಗಳು ಉಂಟಾದಾಗ ಅದರ ಮೇಲೆ ಬಾಳೆಹಣ್ಣಿನ ಸಿಪ್ಪೆಯನ್ನು ಹಚ್ಚಿ. ಅದನ್ನು ಹಾಗೆಯೇ 30 ನಿಮಿಷ ಬಿಡಿ. ಇದರಿಂದ ನೋವು ಕಡಿಮೆಯಾಗುತ್ತದೆ. ಬಾಳೆಹಣ್ಣಿನ ಸಿಪ್ಪೆಯ ಜೊತೆಗೆ ಸಸ್ಯಜನ್ಯ ಎಣ್ಣೆಯನ್ನು ಬೆರೆಸಿ ಹಚ್ಚಿದರೆ ನೋವು ಮತ್ತಷ್ಟು ಕಡಿಮೆಯಾಗುತ್ತದೆ.

ಸೋರಿಯಾಸಿಸ್:
ಸೋರಿಯಾಸಿಸ್ ಉಂಟಾದ ಜಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯನ್ನು ಹಚ್ಚಿ. ಬಾಳೆಹಣ್ಣಿನ ಸಿಪ್ಪೆಯಲ್ಲಿ ಮೊಯಿಶ್ಚರೈಸರ್ ಗುಣಗಳು ತುರಿಕೆಯನ್ನು ನಿವಾರಿಸುತ್ತವೆ. ಇದು ಸೋರಿಯಾಸಿಸ್‍ನಿಂದ ತಕ್ಷಣ ಉಪಶಮನವನ್ನು ಒದಗಿಸುತ್ತದೆ.

ಹೊಳೆಯುವ ಹಲ್ಲುಗಳಿಗಾಗಿ:
ಪ್ರತಿದಿನ ಒಂದು ನಿಮಿಷಗಳ ಕಾಲ ಬಾಳೆಹಣ್ಣಿನ ಸಿಪ್ಪೆಯನ್ನು ನಿಮ್ಮ ಹಲ್ಲುಗಳ ಮೇಲೆ ಹಾಕಿ ಚೆನ್ನಾಗಿ ಉಜ್ಜಿ. ಇದರಿಂದ ನಿಮ್ಮ ಹಲ್ಲುಗಳಿಗೆ ಫಳ ಫಳ ಎನ್ನುವ ಹೊಳಪು ದೊರೆಯುತ್ತದೆ.

ಸಿಪ್ಪೆಯನ್ನು ತಿನ್ನಿ!
ಬಾಳೆಹಣ್ಣಿನ ಸಿಪ್ಪೆಯನ್ನು ಸಹ ತಿನ್ನಬಹುದು. ಭಾರತೀಯ ಆಹಾರ ಪದ್ಧತಿಯಲ್ಲಿ ಇದನ್ನು ಹಾಕಿ ಹಲವಾರು ರೀತಿಯ ಆಹಾರಗಳನ್ನು ಮಾಡುತ್ತಾರೆ. ಇದರ ಜೊತೆಗೆ ಕೋಳಿ ಮಾಂಸದ ತಾಜಾತನವನ್ನು ಉಳಿಸಿಕೊಳ್ಳಲು ಬಾಳೆಹಣ್ಣಿನ ಸಿಪ್ಪೆಯನ್ನು ಅದರ ಮೇಲೆ ಇಡುತ್ತಾರೆ.

ಸುಕ್ಕು ನಿವಾರಕ:
ಬಾಳೆಹಣ್ಣಿನ ಸಿಪ್ಪೆಯು ಚರ್ಮಕ್ಕೆ ತೇವಾಂಶವನ್ನು ಒದಗಿಸುತ್ತವೆ. ಬಾಳೆಹಣ್ಣಿನ ಸಿಪ್ಪೆಗೆ ಸ್ವಲ್ಪ ಮೊಟ್ಟೆಯ ಲೋಳೆಯನ್ನು ಬೆರೆಸಿ, ಇದನ್ನು ಮುಖಕ್ಕೆ ಹಚ್ಚಿ ಐದು ನಿಮಿಷ ಬಿಡಿ. ನಂತರ ಮುಖ ತೊಳೆಯಿರಿ. ಇದರಿಂದ ಸುಕ್ಕುನಿವಾರಣೆಯಾಗುತ್ತದೆ.

ನರವಲಿ ( ವಾರ್ಟ್ಸ್):
ನಿಮ್ಮ ತ್ವಚೆಯ ಮೇಲೆ ಉಂಟಾಗುವ ನರವಲಿಗಳನ್ನು ( ಚರ್ಮದ ಮೇಲಿನ ಗ್ರಂಥಿಗಳನ್ನು) ನಿವಾರಿಸಲು ಬಾಳೆಹಣ್ಣಿನ ಸಿಪ್ಪೆ ರಾಮಬಾಣ. ಸಿಪ್ಪೆಯನ್ನು ನರವಲಿಗಳು ಇರುವ ಭಾಗದಲ್ಲಿ ರಾತ್ರಿಯೇ ಉಜ್ಜಿ ಮಲಗಿ, ಇಲ್ಲವಾದಲ್ಲಿ ನರವಲಿಗಳು ಇರುವ ಜಾಗದಲ್ಲಿ ಸಿಪ್ಪೆಯನ್ನು ಬಟ್ಟೆಯ ಸಹಾಯದಿಂದ ಕಟ್ಟಿ ರಾತ್ರಿಯೆಲ್ಲಾ ಹಾಗೆಯೇ ಬಿಡಿ.

ನೋವು ನಿವಾರಕ:
ಬಾಳೆಹಣ್ಣಿನ ಸಿಪ್ಪೆಯನ್ನು ನೇರವಾಗಿ ನೋವಾಗುತ್ತಿರುವ ಜಾಗಕ್ಕೆ ಲೇಪಿಸಿ. ಇದನ್ನು ಹಾಗೆಯೇ 30 ನಿಮಿಷ ಬಿಡಿ. ನೋವು ನಿವಾರಣೆಯಾಗುತ್ತದೆ. ಇದರ ಉತ್ತಮ ಫಲಿತಾಂಶಕ್ಕಾಗಿ ಸಸ್ಯಜನ್ಯ ಎಣ್ಣೆಯನ್ನು ಬಳಸಿ.

ಕ್ರಿಮಿಕೀಟಗಳ ಕಡಿತಕ್ಕೆ:
ಕ್ರಿಮಿಕೀಟಗಳು ಕಚ್ಚಿದ ಭಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡಿ. ಇದರಿಂದ ತುರಿಕೆ ಮತ್ತು ನೋವುಗಳು ತಕ್ಷಣ ನಿವಾರಣೆಯಾಗುತ್ತದೆ.

ಪಾಲಿಶ್ ಮಾಡಲು:
ಶೂ, ಚರ್ಮದ ಉತ್ಪನ್ನ ಮತ್ತು ಬೆಳ್ಳಿಯ ವಸ್ತುಗಳಿಗೆ ತಕ್ಷಣ ಹೊಳಪು ನೀಡಲು ಬಾಳೆಹಣ್ಣಿನ ಸಿಪ್ಪೆಯನ್ನು ಬಳಸಬಹುದು. ಇದಕ್ಕಾಗಿ ಸಿಪ್ಪೆಯನ್ನು ಅವುಗಳ ಮೇಲೆ ಉಜ್ಜಿ.

ಯು.ವಿ ಕಿರಣಗಳಿಂದ ರಕ್ಷಣೆಗೆ
ಬಾಳೆಹಣ್ಣಿನ ಸಿಪ್ಪೆಯನ್ನು ಕಣ್ಣಿನ ಸುತ್ತ ಲೇಪಿಸುವುದರಿಂದ ಯು.ವಿ.ಕಿರಣಗಳಿಂದ ರಕ್ಷಣೆ ಪಡೆಯಬಹುದು. ಹೀಗೆ ಮಾಡುವ ಮೊದಲು ಬಾಳೆಹಣ್ಣಿನ ಸಿಪ್ಪೆಯನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಬಿಡಿ, ನಂತರ ಹಚ್ಚಿ. ಹೀಗೆ ಮಾಡುವುದರಿಂದ ಕಣ್ಣಿನ ಪೊರೆ ಬರದಂತೆ ಸಹ ತಡೆಯಬಹುದು.

Comments are closed.