ಆರೋಗ್ಯ

ಆರೋಗ್ಯದ ಬಗ್ಗೆ ಸ್ವತಃ ಕಾಳಜಿ ಅಗತ್ಯ: ‘ಕ್ಷೇಮ ಹೆಲ್ತ್ ಕಾರ್ಡ್’ ವಿತರಿಸಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ

Pinterest LinkedIn Tumblr

ಉಡುಪಿ: ಹಣ, ಆಸ್ತಿಗಿಂತ ಆರೋಗ್ಯ ನಿಜವಾದ ಸಂಪತ್ತಾಗಿದ್ದು ಆರೋಗ್ಯ ರಕ್ಷಣೆಯಲ್ಲಿ ಮುಂಜಾಗೃತೆ ವಹಿಸುವುದು ಅತೀ ಅವಶ್ಯ. ಆಪತ್ಕಾಲದಲ್ಲಿ ಆರೋಗ್ಯ ಕಾರ್ಡ್ ಬಹಳಷ್ಟು ಅವಶ್ಯ. ಇದು ಓರ್ವ ವ್ಯಕ್ತಿಗೆ ಮಾತ್ರವಲ್ಲ ಪೂರ್ಣ ಕುಟುಂಬಕ್ಕೆ ಆಧಾರ ಎಂದು ನಿಟ್ಟೆ ಯುನಿವರ್ಸಿಟಿಯ ಪ್ರೊ-ಚಾನ್ಸಿಲರ್ ವಿಶಾಲ್ ಹೆಗ್ಡೆ ಹೇಳಿದರು.

ಅವರು ಭಾನುವಾರದಂದು ಬ್ರಹ್ಮಾವರ ಬಂಟರ ಭವನದಲ್ಲಿ ಬ್ರಹ್ಮಾವರ ಬಂಟರ ಯಾನೆ ನಾಡವರ ಸಂಘದ ಆಶ್ರಯದಲ್ಲಿ ನಿಟ್ಟೆ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ಎ.ಬಿ. ಶೆಟ್ಟಿ ಮೆಮೋರಿಯಲ್ ಇನ್ಸಿ ಟ್ಯೂಟ್ ಆಫ್ ಡೆಂಟಲ್ ಸೈನ್ಸ್, ಬೆಂಗಳೂರಿನ ನಾರಾಯಣ ಹೃದಯಾಲಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಸಹಕಾರದಲ್ಲಿ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣೆ ಹಾಗೂ ದಂತ ವೈದ್ಯಕೀಯ ಶಿಬಿರ ಮತ್ತು ಬಾರಕೂರು ರುಕ್ಮಿಣಿ ಸುಬ್ಬಣ್ಣ ಶೆಟ್ಟಿ ಸ್ಮರಣಾರ್ಥ ಕ್ಷೇಮ ಹೆಲ್ತ್ ಕಾರ್ಡ್ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಮುಖ್ಯ: ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ
ಹೆಲ್ತ್ ಕಾರ್ಡ್ ವಿತರಿಸಿ ಮಾತನಾಡಿದ ದುಬೈ ಫಾರ್ಚುನ್ ಗ್ರೂಪ್ ಆಫ್ ಹೊಟೇಲ್ಸ್‌ನ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರು, ಪ್ರಪಂಚದಲ್ಲಿ ಯಾವ ವಸ್ತುವನ್ನು ಬೇಕಾದರೂ ಇತರರಿಂದ ಪಡೆಯಬಹುದು. ಆದರೆ ಆರೋಗ್ಯ ಯಾರಿಂದಲೂ ಪಡೆಯಲು ಸಾಧ್ಯವಿಲ್ಲ. ಆರೋಗ್ಯ ಭಾಗ್ಯದ ಬಗ್ಗೆ ಪ್ರತಿಯೊಬ್ಬರೂ ಸ್ವತಃ ಕಾಳಜಿ ವಹಿಸಬೇಕು ಎಂದರು.

ಬ್ರಹ್ಮಾವರ ಬಂಟರ ಸಂಘದ ಅಧ್ಯಕ್ಷ ಬಿ. ರಾಜಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ವಿಶ್ವ ಬಂಟರ ಸಂಘಗಳ ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನದಾಸ ಶೆಟ್ಟಿ, ಕುಂದಾಪುರ ವಿನಯ ಆಸ್ಪತ್ರೆಯ ಡಾ| ಎನ್. ವಿಶ್ವನಾಥ ಶೆಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಅಶೋಕ್ ಎಚ್., ಬಂಟರ ಭವನದ ಸಂಚಾಲಕ ಎಚ್. ಸುದರ್ಶನ ಹೆಗ್ಡೆ, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಉಡುಪಿ ಬಂಟರ ಸಂಘದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಸ.ಆ. ಕೇಂದ್ರದ ವೈದ್ಯಾಧಿಕಾರಿ ಡಾ| ಅಜಿತ್ ಶೆಟ್ಟಿ, ದುಬೈ ಉದ್ಯಮಿ ಸುಂದರ್ ಶೆಟ್ಟಿ, ಪ್ರಮುಖರಾದ ಶೇಡಿಕೊಡ್ಲು ವಿಠಲ್ ಶೆಟ್ಟಿ, ಮೈರ್ಮಾಡಿ ಸುಧಾಕರ ಶೆಟ್ಟಿ, ಕಿಶೋರಿ ಶೆಟ್ಟಿ, ರಾಜೀವ ಆಳ್ವ, ಬಾಲಕೃಷ್ಣ ಹೆಗ್ಡೆ, ಜಯರಾಮ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಶಕೀಲಾ ಹೆಗ್ಡೆ, ಶೇಖರ ಶೆಟ್ಟಿ, ಸುದರ್ಶನ ಶೆಟ್ಟಿ, ಡಾ| ವಿಕ್ರಮ್ ಮೊದಲಾದವರು ಉಪಸ್ಥಿತರಿದ್ದರು.

ಬ್ರಹ್ಮಾವರ ಬಂಟರ ಸಂಘದ ಗೌರವಾಧ್ಯಕ್ಷ ಬಿ. ಭುಜಂಗ ಶೆಟ್ಟಿ ಸ್ವಾಗತಿಸಿ, ಡಾ| ಮಹೇಶ್ ಶೆಟ್ಟಿ ಪ್ರಸ್ತಾವನೆಗೈದರು. ಆರೂರು ತಿಮ್ಮಪ್ಪ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ ಕಾರ್‍ಯಕ್ರಮ ನಿರೂಪಿಸಿದರು.

Comments are closed.