ಆರೋಗ್ಯ

ತಂಪು ಪಾನೀಯಗಳನ್ನು ಹೊರತುಪಡಿಸಿ ಇವನ್ನೆಲ್ಲ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದೆ

Pinterest LinkedIn Tumblr

ಸಾಮಾನ್ಯವಾಗಿ ಬಿರು ಬಿಸಿಲಿನಲ್ಲಿ ಬೆಂಡಾಗುವ ನಾವೆಲ್ಲರೂ ತಂಪು ಪಾನೀಯ, ಎಳನೀರು, ಕಲ್ಲಂಗಡಿ ಹಣ್ಣು, ಮಜ್ಜಿಗೆಗೆ ಮೊರೆ ಹೋಗುತ್ತೇವೆ. ತಂಪು ಪಾನೀಯಗಳನ್ನು ಹೊರತುಪಡಿಸಿ ಇವನ್ನೆಲ್ಲ ಸೇವಿಸುವುದು ಒಳ್ಳೆಯದೆ. ಆದರೆ, ತಂಪು ಪಾನೀಯಗಳು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

ಹೌದು, ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಿದೆ. ದೇಹ ಒಣಗಿ ದಣಿಯುತ್ತಿದೆ. ಆದರೆ, ದಣಿದ ದೇಹಕ್ಕೆ ಸಂಜೀವಿನಿಯಾದ ಎಳನೀರು ಕುಡಿಯುವುದನ್ನು ಬಿಟ್ಟು ನಾವು ಪೆಪ್ಸಿ, ಕೋಲಾದಂತಹ ತಂಪು ಪಾನೀಯ ರೂಪದ ಆಧುನಿಕ ವಿಷ ಕುಡಿಯುತ್ತಿದ್ದೇವೆ ಎಂದರೆ ತಪ್ಪಾಗಲಾರದು.

ಈ ಬಗ್ಗೆ ಹಲವು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ತಂಪು ಪಾನೀಯಗಳ ಕರಾಳ ಸತ್ಯವನ್ನು ಹೊರಹಾಕಿದ್ದು, ಇದನ್ನು ಹೆಚ್ಚು ಸೇವಿಸಿದರೆ ದೇಹದ ಹಲವು ಅಂಗಾಗಗಳಿಗೆ ತೊಂದರೆಯಾಗುವುದು ಕಟ್ಟಿಟ್ಟ ಬುತ್ತಿ.

ಈ ಕೂಲ್‍ಡ್ರಿಂಕ್ಸ್ ಸೇವನೆ ಮನುಷ್ಯರಲ್ಲಿ ನರ ದೌರ್ಬಲ್ಯ ಸಮಸ್ಯೆ, ಕ್ಯಾನ್ಸರ್, ಮಧುಮೇಹ ಕಾಯಿಲೆ ಬರಲಿದೆ. ಕಿಡ್ನಿ, ಪಿತ್ತಕೋಶಕ್ಕೆ ಹೆಚ್ಚು ಹಾನಿಯಾಗಲಿದೆ ಎಂದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಅಲ್ಲದೆ, ಮಾನವ ದೇಹಕ್ಕೆ ನಡೆದಾಡಲು ಹೆಚ್ಚು ಸಹಕಾರಿಯಾಗುವ ಮೂಳೆಯ ಬೆಳವಣಿಗೆಗೆ ಬ್ರೇಕ್ ಹಾಕುವ ಅಂಶ ಈ ಪಾನೀಯದಲ್ಲಿದೆ ಎಂಬ ಅಘಾತಕಾರಿ ಮಾಹಿತಿ ಕೂಡ ಹೊರಬಿದ್ದಿದೆ.

ತಂಪು ಪಾನೀಯದಿಂದ ಕೆಟ್ಟ ಪರಿಣಾಮವಾಗುತ್ತದೆ ಎಂಬುದು ಗೊತ್ತಿದ್ದರೂ ಸೇವನೆ ಮಾಡುವ ಮಂದಿ ಕಡಿಮೆಯಾಗಿಲ್ಲ. ಇದಕ್ಕೆ ಆಡಂಬರ, ಪಾಶ್ಚಾತ್ಯ ಸಂಸ್ಕಂತಿಯ ಪ್ರಭಾವ ಕಾರಣ ಎನ್ನಬಹುದು. ಅಮೃತ ಸಮಾನವಾದ ಎಳನೀರು ಇನ್ನು ನೈಸರ್ಗಿಕ ಎಳನೀರು ಕಲಿಯುಗದ ಅಮೃತವೇ ಸರಿ. ಇದನ್ನು ಕುಡಿದರೆ ದೇಹಕ್ಕೆ ಬೇಕಾದ ವಿಟಮಿನ್ ದೊರೆಯುತ್ತದೆ. ಆರೋಗ್ಯದ ಜತೆಗೆ ಸಮೃದ್ಧವಾದ ಫೋಷಕಾಂಶಗಳು ಸಿಗುತ್ತವೆ.

ಅಷ್ಟೇ ಅಲ್ಲ, ಎಳನೀರು ಕುಡಿಯುವ ಮೂಲಕ ರೈತರಿಗೆ ನೆರವಾದಂತಾಗುತ್ತದೆ. ದೇಸಿ ಉತ್ಪನ್ನಕ್ಕೆ ಉತ್ತೇಜನ ನೀಡುವ ಮೂಲಕ ರೈತರ ಆರ್ಥಿಕ ಪ್ರಗತಿಗೆ ಸಹಕಾರಿಯಾಗಬಹುದು ಅಲ್ಲವೆ? ಬಿಸಿಲಿನಲ್ಲಿ ತನ್ನ ತೋಟದಿಂದ ಕೊಯ್ದು ತಂದ ಎಳನೀರು ಮಾರಾಟ ಮಾಡುವ ರೈತರ ಶ್ರಮಕ್ಕೆ ಬೆಲೆಯೂ ಸಿಗಲಿದೆ..!

ಇನ್ನು ಎಳನೀರನ್ನು ಕೇವಲ ಜ್ವರ ಬಂದಾಗ, ಆರೋಗ್ಯ ಹದಗೆಟ್ಟಾಗ ಮಾತ್ರ ಬಳಸುವ ಪರಿಪಾಠ ಮಾಡಿಕೊಂಡಿರುವ ಜನರು ದೇಹಕ್ಕೆ ಉತ್ತಮ ದಾಹ ನಿವಾರಕ ನೀರಾಗಿ ಬಳಸು ತ್ತಿಲ್ಲ ಎಂಬುದು ವಿಪರ್ಯಾಸವೇ ಸರಿ. ಎಳನೀರಿಗೆ ನಿಂಬೆಹಣ್ಣಿನ ರಸ ಹಾಕಿಕೊಂಡು ಕುಡಿದರೆ ದೇಹದ ಉಷ್ಣತೆ ಕೂಡಲೇ ಕಡಿಮೆಯಾಗುತ್ತದೆ. ಇಂತಹ ಬಿರು ಬಿಸಿಲಿನಲ್ಲಿ ಎಳನೀರನ್ನು ಜೀವಾಮೃತವಾಗಿ ಬಳಸಬಹುದಾಗಿದೆ. 20-30ರೂ.ಗೆ ಸಿಗುವ ಎಳನೀರು ಅಮೃತ ಸಮಾನವಾಗಿದೆ.

ಹೆಚ್ಚು ಹಣ ನೀಡಿ ಕೂಲ್‍ಡ್ರಿಂಕ್ಸ್ ಎಂಬ ವಿಷ ಸೇವಿಸೊ ಬದಲು ಇನ್ನಾದರೂ ಕೇವಲ ದೇಹ ಹದಗೆಟ್ಟಾಗ ಎಳನೀರಿಗೆ ಮೊರೆ ಹೋಗುವ ಮಂದಿ ದಾಹವಾದಾಗ, ದೇಹ ದಣಿದಾಗ ಎಳನೀರು ಕುಡಿಯುವುದನ್ನು ರೂಢಿಸಿಕೊಳ್ಳಬೇಕಿದೆ ಹಾಗೂ ದೇಹದ ಆರೋಗ್ಯ ರಕ್ಷಣೆಗೆ ಹೆಚ್ಚು ಜಾಗೃತಿ ವಹಿಸಬೇಕಿದೆ.

ತಾಪಮಾನ ಹೆಚ್ಚಾದಂತೆ ಪರಿಸರದಲ್ಲಿ ರೋಗಕಾರಕ ಲಕ್ಷಣಗಳು ಕಾಣಲಾರಂಭಿಸುತ್ತವೆ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಸಹ ಕಡಿಮೆಯಾಗುತ್ತದೆ. ಆದ್ದರಿಂದ ನೈಸರ್ಗಿಕ ಉತ್ಪನ್ನವನ್ನು ಹೆಚ್ಚು ಉಪಯೋಗಿಸುವ ಮೂಲಕ ನಮ್ಮ ಆರೋಗ್ಯದ ಕಡೆ ಗಮಹರಿಸಬೇಕಿದೆ.

ನೈಸರ್ಗಿಕ ಉತ್ಪನ್ನಗಳಾದ ಎಳನೀರು, ದ್ರಾಕ್ಷಿರಸ, ವಿವಿಧ ಹಣ್ಣು, ತರಕಾರಿ ಹೀಗೆ ನಮ್ಮ ದೇಹಕ್ಕೆ ಎಷ್ಟು ಉತ್ತಮ ಆಹಾರ ಸೇವಿಸುತ್ತೇಯೋ ಅದೇ ರೀತಿ ದೇಹ ಕೂಡ ಸ್ಪಂದಿಸುತ್ತದೆ.

ಉದಾಹರಣೆಗೆ ನಾವು ಕೂಲ್‍ಡ್ರಿಂಕ್ಸ್ ಸೇವಿಸಿದರೆ ಆ ಕ್ಷಣ ನಮಗೆ ಹಿತವೆನಿಸಿದರೂ ಕೆಲವೇ ನಿಮಿಷಗಳಲ್ಲಿ ದೇಹದ ತಾಪ ಏರುತ್ತದೆ ಹಾಗೂ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಾರಂಭಿಸುತ್ತದೆ. ಅದೇ ಎಳನೀರು ಮತ್ತು ಹಣ್ಣಿನ ರಸ ಸೇವಿಸಿದರೆ ದೇಹಕ್ಕೆ ಹಿತಾನುಭವದ ಜತೆಗೆ ದೇಹದ ಉಷ್ಣತೆಯೂ ಕಡಿಮೆಯಾಗಲಿದೆ ಎಂಬುದು ಹಲವು ವೈಜ್ಞಾನಿಕ ಪರೀಕ್ಷೆಯಿಂದ ದೃಢಪಟ್ಟಿದೆ.

ಇನ್ನು ಹೆಚ್ಚು ದಣಿವಾದಾಗ ಕೂಡಲೇ ನೀರನ್ನು ಸೇವಿಸಬಾರದು. ಇದು ಕಾದ ಹೆಂಚಿಗೆ ನೀರು ಹಾಕಿದ ಹಾಗೆ ಆಗಲಿದೆ. ಆದ್ದರಿಂದ ದಣಿವಾದಾಗ ಸ್ವಲ್ಪ ವಿರಮಿಸಿ ನೀರು ಅಥವಾ ದ್ರವರೂಪದ ಪದಾರ್ಥಗಳನ್ನು ಸೇವಿಸುವುದು ಉತ್ತಮ ಎಂದು ಹಿರಿಯರು ಸಲಹೆ ನೀಡುತ್ತಾರೆ.

Comments are closed.