ಆರೋಗ್ಯ

ತಡವಾಗಿ ಮಲಗಿ ಬೇಗ ಎಳುವುದು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬಿರಲಿದೆ

Pinterest LinkedIn Tumblr


ಈಗಷ್ಟೇ ಮಲಗಿದ ನೆನಪು… ಅಷ್ಟರಲ್ಲಿಯೇ ಹಾಲ್ ನಲ್ಲಿ ಮಗ ತಾನೊಬ್ಬನೆ ಶಾಲೆಯಲ್ಲಿ ಕಲಿಸಿದ ಪಾಠವನ್ನು ಸ್ವಲ್ಪ ಜೋರಾಗಿಯೇ ಗೊಣಗುತ್ತಿದ್ದ. ಅಡುಗೆ ಮನೆಯಿಂದ ಕುಕ್ಕರ್ ಸದ್ದು… ಆದರೆ ಇದೆಲ್ಲ ಕಿವಿಯ ತಮಟೆಗೆ ಬಹಳ ಹತ್ತಿರದಿಂದಲೇ ಕೇಳಿದಾಗೆ ಇದೆ ಆದರೆ ಕಣ್ಣು ತೆರೆದು ನೋಡುವ ಎಂದರೆ ನಿದ್ರಾ ದೇವಿ ನನ್ನನ್ನ ಅತಿಯಾಗಿ ಆವರಿಸಿದ್ದಾಳೆ ಆದರೂ ಹತ್ತಿರದಲ್ಲಿ ಇದ್ದ ಮೊಬೈಲ್ ನ್ನು ನೋಡಿದರೆ ಗಂಟೆ ಅದಾಗಲೇ 7 ಎಂದು ತೋರಿಸುತ್ತಿತ್ತು. ಛೇ ಇಷ್ಟು ಬೇಗ ಆ ಸೂರ್ಯ ಬೆಳಕು ಹರಿಸಿ ಆಯಿತೆ ಎಂದು ಮನಸ್ಸಿನಲ್ಲೆ ಗೊಣಗುತ್ತ ಹೊದಿಕೆಯನ್ನು ಮತ್ತೆ ತಲೆ ಮೇಲೆ ಎಳೆದುಕೊಂಡು ನಿದ್ರೆಗೆ ಜಾರಿದೆ.

ಆದರೆ, ಇದು ಸಾಮಾನ್ಯವಾಗಿ ದಿನ ನಿತ್ಯ ನಡೆಯುವ ಮುಂಜಾವಿನ ಪದ್ಧತಿ. ಇದು ಕೇವಲ ಒಬ್ಬರ ಕಥೆಯಲ್ಲ, ಸಾಮಾನ್ಯವಾಗಿ ಎಲ್ಲರೂ ಬೆಳಗ್ಗೆ ಏಳಬೇಕಾದರೆ ಮುಖ ತಿವುಚುವುದುಂಟು. ನಮ್ಮ ದಿನಚರಿಯೇ ಹೀಗೆ ಎಂದು ನಾವು ನಮ್ಮನ್ನು ಸಮರ್ಥಿಕೊಳ್ಳಬಹುದು. ಆದರೆ ಇದು ಆರೋಗ್ಯದ ಮೇಲೆ ಆತಿಯಾದ ಪರಿಣಾಮವನ್ನು ಬೀರುವುದು ಇದೆ ಎಂಬ ಸತ್ಯ ನಮಗೆಲ್ಲ ಗೊತ್ತೆ ಇದೆ.

ಇಂದಿನ ದುಬಾರಿ ಯುಗದಲ್ಲಿ ಜೀವನ ನಡೆಸಲು ಒಂದು ಹೊತ್ತಿನ ಅವಧಿಯಲ್ಲಿ ಕೆಲಸ ನಿರ್ವಹಿಸಿದರೆ ಸಾಲದು ಪ್ರತಿಯಾಗಿ ರಾತ್ರಿ ಪಾಳೆಯದಲ್ಲೂ ದುಡಿಯುವವರ ಸಂಖ್ಯೆ ಅದೆಷ್ಟೋ ಇದೆ. ಅವರೆಲ್ಲ ರಾತ್ರಿ ತಮ್ಮ ಪಾಳಿಯ ಕೆಲಸವನ್ನು ಮುಗಿಸಿ ಮಲಗುವಷ್ಟರಲ್ಲಿ ಸೂರ್ಯ ತನ್ನ ದಿನಚರಿಯನ್ನು ಪ್ರಾರಂಭಿಸಲು ಇನ್ನೇನು ಕಾಯುತ್ತಿರುತ್ತಾನೆ. ಹೀಗಿರುವಾಗ ರಾತ್ರಿ ಲೇಟಾಗಿ ಮಲಗಿ, ಲೇಟಾಗಿ ಏಳುವವರ ಅಥವಾ ಬೇಗ ಏಳುವವರ ಆರೋಗ್ಯದ ಮೇಲಾಗುವ ಪರಿಣಮ ಹಲವಾರು.

ಈ ರೀತಿಯ ಅಭ್ಯಾಸ ಇದ್ದಲ್ಲಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಇಂಗ್ಲೆಂಡ್ ನ ಬ್ರಿಸ್ಟೋಲ್ ಯೂನಿವರ್ಸಿಟಿ ನಡೆಸಿದ ಸಂಶೋಧದೆಯಿಂದ ತಿಳಿದು ಬಂದಿದೆ. ದಿನಕ್ಕೆ 8 ಗಂಟೆ ನಿದ್ರೆ ಅವಶ್ಯ ಎಂದು ಈ ಸಂಶೋಧನೆ ಹೇಳುತ್ತದೆ.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಪೌಷ್ಟಿಕಾಂಶ ಆಹಾರದ ಸಮಸ್ಯೆ ಜೊತೆಗೆ ನಿದ್ರೆಯ ಕೊರತೆ ಇರುವುದರಿಂದ ಒತ್ತಡ ಹೆಚ್ಚಿರುತ್ತದೆ, ಇದರಿಂದಾಗಿ ಆ್ಯಸಿಡಿಟಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ರಾತ್ರಿ ಊಟದ ಸಮಯದಲ್ಲಿ ಬದಲಾವಣೆ ಅಗುವುದರಿಂದ ದೇಹದಲ್ಲಿ ಬೊಜ್ಜು ಬೆಳೆಯಲು ಪ್ರಾರಂಭವಾಗುತ್ತದೆ. ದೇಹದ ತೂಕ ಹೆಚ್ಚಾಗುತ್ತದೆ. ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುತ್ತದೆ. ವ್ಯಕ್ತಿ ಖಿನ್ನತೆಗೆ ಒಳಗಾಗಬಹುದು. ಸಕ್ಕರೆ ಕಾಯಿಲೆ ನಮ್ಮ ನ್ನು ಆವರಿಸಿಕೊಳ್ಳಬಹುದು.
ಹೀಗೆ ಹಲವಾರು ಕಾಯಿಲೆಗಳು ನಮ್ಮನ್ನು ಅರಸಿಕೊಂಡು ಬರಬಹುದು .

ನಿದ್ದೆಯನ್ನು ಕಡೆಗಣಿಸಬಾರದು. ದಿನಂಪ್ರತಿ ಮನುಷ್ಯನ ದೇಹ ಮತ್ತು ಮನಸ್ಸಿಗೆ ಸಾಕಷ್ಟು ನಿದ್ರೆಯ ಅವಶ್ಯಕತೆ ಇದೆ ಎಂಬುದು ತಜ್ಞರ ಅಭಿಮತ.

Comments are closed.