ಆರೋಗ್ಯ

ಸರಳ ಸುಲಭ ಮನೆ ಮದ್ದಿನಿಂದ ಕಣ್ಣಿನ ಸುತ್ತಲಿನ ಕಪ್ಪು ಕಲೆ ಮಾಯ

Pinterest LinkedIn Tumblr

ಕಣ್ಣಿನ ಸುತ್ತಲು ಕಾಣುವ ಕಪ್ಪು ಕಲೆಗಳನ್ನು ಹೋಗಲಾಡಿಸಲು ಬಹಳ ಸರಳ ಉಪಾಯವಿದೆ. ನಾವು ಏನಾದರೂ ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಿಲ್ಲವಾದರೆ, ನಮಗೆ ನಮ್ಮ ಕಣ್ಣಿನ ಸುತ್ತ ಅಥವಾ ಕಣ್ಣಿನ ಕೆಳಗೆ ಹೆಚ್ಚು ಕಪ್ಪು ಕಲೆಗಳು ಕಂಡು ಬರುತ್ತವೆ. ಜೊತೆಗೆ ನೀವು ಹೆಚ್ಚು ಸುಡುವ ಬಿಸಿಲಿನಲ್ಲಿ ಓಡಾಡುವುದರಿಂದ ನಿಮಗೆ ಈ ಸಮಸ್ಯೆಗಳು ಕಂಡುಬರುತ್ತವೆ.

ನಿಂಬೆರಸ, ಹಾಲು, ಸೌತೆಕಾಯಿ ಎಲ್ಲವೂ ಒಂದು ಒಂದು ಚಮಚ ತೆಗೆದುಕೊಂಡು ಮಿಶ್ರಣ ಮಾಡಿ ಹತ್ತಿಯಿಂದ ಕಪ್ಪು ಕಲೆಗಳು ಇರುವ ಕಣ್ಣಿನ ಭಾಗಕ್ಕೆ ಹಚ್ಚಿರಿ. ಹೀಗೆ ಮಾಡುವುದರಿಂದ ನಿಮ್ಮ ಕಣ್ಣಿನ ಸುತ್ತಲೂ ಇರುವ ಕಪ್ಪು ಕಲೆಗಳು ಮಾಯವಾಗುತ್ತದೆ.

ರೋಸೆಟ್ಟ್ ಬಾದಾಮಿಯನ್ನು ನೀವು ರಾತ್ರಿ ನೆನೆಸಿ ಅದರನ್ನು ಬೆಳ್ಳಗ್ಗೆ ಬಾದಾಮಿ ಜೊತೆಗೆ ಚೆನ್ನಾಗಿ ಮಿಶ್ರಣ ಮಾಡಿಕೊಂಡು ರುಬ್ಬಿಕೊಂಡು ನಂತರ ಅದಕ್ಕೆ ಸ್ವಲ್ಪ ಹಾಲು ಸೇರಿಸಿ ಕಪ್ಪು ಕಲೆಗಳು ಇರುವ ಸ್ಥಳದಲ್ಲಿ ಹತ್ತಿಯಿಂದ ರುಬ್ಬಿಕೊಂಡ ಪೇಸ್ಟ್ ನ್ನು ಲೇಪಿಸಿ. ಸುಮಾರು 15 ನಿಮಿಷಗಳ ನಂತರ ಶುದ್ದವಾದ ನೀರಿನಲ್ಲಿ ವಾಷ್ ಮಾಡಿ.

ನೀವು ರೋಜ್ ವಾಟರ್ ಮತ್ತು ಶುದ್ದವಾದ ಹಾಲನ್ನು ಮೊದಲಿಗೆ ಮಿಶ್ರಣ ಮಾಡಿ. ನಂತರ ನಿಮ್ಮ ಕಣ್ಣಿನ ಸುತ್ತಕಂಡು ಬರುವ ಕಪ್ಪು ಕಲೆಗಳ ಮೇಲೆ ಒಂದು ಚೂರು ಹತ್ತಿಯಿಂದ ಅದ್ದಿ ಕಲೆಗಳ ಜಾಗದಲ್ಲಿ ಅದ್ದಿ. ನಂತರ ಸುಮಾರು 15 ನಿಮಿಷದವರೆಗೆ ಹಾಗೆ ಬಿಟ್ಟು ತೊಳೆಯಿರಿ. ಹೀಗೆ ವಾರಕ್ಕೆ 3 ರಿಂದ 4 ಬಾರೀ ಮಾಡಿದರೆ ಕಪ್ಪು ಕಲೆಗಳು ಖಂಡಿತ ಮಾಯ

Comments are closed.