ಆರೋಗ್ಯ

ದೇಹದಲ್ಲಿನ ಮೂಳೆಗಳು ಗಟ್ಟಿಯಾಗಲು ಹಾಲಿನಲ್ಲಿ ಬೇಯಿಸಿದ ಖರ್ಜೂರ ಸೇವನೆ ಉತ್ತಮ

Pinterest LinkedIn Tumblr

ಹಾಲು ಹಾಗು ಖರ್ಜುರ ಮನುಷ್ಯನ ದೇಹಕ್ಕೆ ಉತ್ತಮವಾದ ಆರೋಗ್ಯಕಾರಿ ಲಾಭಗಳನ್ನು ಕೊಡುವಂತವು, ಇವು ತುಂಬಾನೇ ಸಹಕಾರಿಯಾಗಿದೆ. ಹಾಗಾದರೆ ಯಾವೆಲ್ಲ ಲಾಭಗಳು ಇವೆ ಅನ್ನೋದನ್ನ ತಿಳಿಸಿಕೊಡುತ್ತೇವೆ ಬನ್ನಿ.

ಖರ್ಜೂರದಲ್ಲಿ ವಿಟಾಮಿನ್ ಅಂಶ ಹೆಚ್ಚಾಗಿರುವುದರಿಂದ ನಿಮ್ಮ ಚರ್ಮದ ರಕ್ಷಣೆಗೆ ಹೆಚ್ಚು ಸಹಾಯಕಾರಿಯಾಗಿದೆ.

ಮಧುಮೇಹದಂತಹ ಕಾಯಿಲೆಗಳು ದೂರವಿಡುವ ಶಕ್ತಿ ಖರ್ಜೂರದಲ್ಲಿದೆ, ಯಾಕೆಂದರೆ ಮೆಗ್ನೆಶಿಯಂ ಅಂಶ ಇದರಲ್ಲಿ ಹೆಚ್ಚಾಗಿರುವುದರಿಂದ ನಿಮ್ಮ ದೇಹದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ.

ನೀವು ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿದ್ದೀರಾ ಹಾಗಾದರೆ ನಿಮ್ಮ ಸಹಾಯಕ್ಕೆ ಖರ್ಜುರ ಉತ್ತಮ ಹೇಗೆ ಅಂತೀರಾ? ಖರ್ಜುರದಲ್ಲಿ ಫೈಬರ್ ಇರೋದ್ರಿಂದ ಜೀರ್ಣಕ್ರಿಯೆಗೆ ಇದು ಸಹಾಯಕಾರಿ.

ನಿಮ್ಮಲ್ಲಿ ಯಾವುದೇ ತರಹದ ಹೊಟ್ಟೆ ನೋವು ಸಮಸ್ಯೆಗಳು ಕಂಡುಬಂದರೆ ಮದ್ದಾಗಿ ಕೆಲಸಮಾಡುತ್ತದೆ, ಹಾಲಿನಲ್ಲಿ ಪೋಟ್ಯಾಶಿಯಂ ಅಂಶ ಹೆಚ್ಚಾಗಿರುವುದರಿಂದ ಇದನ್ನು ಹೆಚ್ಚಾಗಿ ಸೇವಿಸುವುರಿಂದ ಉಪಶಮನವಾಗುತ್ತವೆ.

ನಿಮ್ಮ ಮೂಳೆಗಳು ಗಟ್ಟಿಯಾಗಬೇಕೆಂಬ ಆಸೆ ನಿಮ್ಮದಾಗಿದ್ದರೆ ಖರ್ಜೂರ ತಿನ್ನಿ. ಇದರಿಂದ ಮೂಳೆಗಳು ಗಟ್ಟಿಯಾಗುತ್ತವೆ. ಹಾಲಿನಲ್ಲಿ ಬೇಯಿಸಿದ ಖರ್ಜೂರ ತಿನ್ನುವುದರಿಂದ ಕ್ಯಾಲ್ಸಿಯಂ, ಸೇಲೆನಿಯಂ, ಹೆಚ್ಚಾಗಿ ಕಾಣಬಹುದು.

ಜೊತೆಯಲ್ಲಿ ಇದನ್ನು ಓದಿ ನೀವು ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಿದರೆ ಎಷ್ಟೆಲ್ಲ ಪ್ರಯೋಜನ ಇದೆ ಗೋತ್ತಾ? ಈ ಲೇಖನ ನೋಡಿ.

ಬೆಳಗ್ಗಿನ ಸಮಯದಲ್ಲಿ ಎದ್ದ ತಕ್ಷಣ ನಿಮ್ಮ ನಿತ್ಯಕರ್ಮಗಳನ್ನು ಮುಗಿಸಿದ ನಂತರ ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ!
ಲಿಂಬೆರಸ ಕುಡಿಯೋದ್ರಿಂದ ಸಿಗುವಂತ ಲಾಭಗಳೇನು? ಇಲ್ಲಿದೆ ನೋಡಿ

ಲಿಂಬೆಯಲ್ಲಿ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಹಾಗೂ ಇನ್ನಿತರ ಕೆಲವೊಂದು ಪೋಷಕಾಂಶಗಳು ಜೀರ್ಣಾಂಗ ವ್ಯವಸ್ಥೆ, ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.

ಬಾಯಿಯ ದುರ್ವಾಸನೆ ನಿವಾರಿಸುತ್ತದೆ ಹಲ್ಲು ಮತ್ತು ಒಸಡುಗಳು ಸಹಾ ಸುಸ್ಥಿತಿಯಲ್ಲಿರುತ್ತವೆ. ಹಲ್ಲುನೋವು ಮೊದಲಾದ ತೊಂದರೆಗಳಿಂದ ಮುಕ್ತರಾಗಲು ನೆರವಾಗುತ್ತದೆ.

ಲಿಂಬೆಯ ಅತ್ಯುತ್ತಮ ಗುಣವೆಂದರೆ ರಕ್ತಶುದ್ಧಿ, ರಕ್ತದಲ್ಲಿದ್ದ ವಿಷಕಾರಿ ವಸ್ತುಗಳನ್ನು ವಿಸರ್ಜಸುವ ಮೂಲಕ ರಕ್ತನಾಳ ಮತ್ತು ರಕ್ತಪರಿಚಲನಾ ವ್ಯವಸ್ಥೆ ಸುಸ್ಥಿತಿಯಲ್ಲಿರುವಂತೆ ನೆರವಾಗುತ್ತದೆ.

ಲಿಂಬೆರಸದ ಸೇವೆನೆಯಿಂದ ಬಾಯಿಯಲ್ಲಿ ದುರ್ವಾಸನೆಯಾಗುವುದು ಕಡಿಮೆಯಾಗುತ್ತದೆ ಹಾಗೂಉರಿಯೂತವನ್ನು ತಡೆಯುತ್ತದೆ. ಇದರಿಂದ ಊತ ಕಡಿಮೆಯಾಗುವುದು.

ಸಂಧಿವಾತದಂತಹ ಉರಿಯೂತದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವವರು ಲಿಂಬೆಯ ನೀರನ್ನು ಬಳಸಿಕೊಳ್ಳಬಹುದು. ಜೀರ್ಣಕ್ರಿಯೆ ಹೆಚ್ಚಿಸುವುದು ಹೊಟ್ಟೆಯಲ್ಲಿ ಕಂಡುಬರುವಂತಹ ಜೀರ್ಣರಸವು ಲಿಂಬೆರಸಕ್ಕೆ ಸಮಾನವಾಗಿದೆ.
.

Comments are closed.