ಆರೋಗ್ಯ

ಬಾಯಿಗೆ ರುಚಿ ನೀಡುವ ಯಾವ ಮಿಲ್ಕ್ ಶೇಕ್ ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ…ತಿಳಿಯಿರಿ.?

Pinterest LinkedIn Tumblr


ಬನಾನ ಮಿಲ್ಕ್ ಶೇಕ್ ಇಷ್ಟಪಡದವರು ಯಾರಾದರೂ ಇರುವರೇ? ಅದರಲ್ಲೂ ಬೇಸಿಗೆ ಕಾಲದಲ್ಲಿ ಹಣ್ಣು ಮತ್ತು ಹಾಲು ಸೇರಿಸಿ ಮಾಡಿದ ಪೇಯ ಮನಸ್ಸು ದೇಹ ಎರಡನ್ನೂ ತಂಪಾಗಿಡುತ್ತದೆ. ಆದರೆ ಬಾಳೆಹಣ್ಣು ಮತ್ತು ಹಾಲನ್ನು ಸೇರಿಸಿದ ಮಿಲ್ಕ್ ಶೇಕ್ ಬಾಯಿಗೆ ರುಚಿಯನ್ನು ನೀಡಿ ಹೊಟ್ಟೆ ತುಂಬಿಸುತ್ತದೆ. ಇದರ ರುಚಿ ಅದ್ಭುತವಾಗಿದ್ದರೂ ಈ ಸಂಯೋಜನೆ ಅಷ್ಟೊಂದು ಉತ್ತಮವಲ್ಲ. ಹೌದು! ಇದರಿಂದ ಆರೋಗ್ಯಕ್ಕೆ ಬಹಳಷ್ಟು ಸಮಸ್ಯೆಗಳು ಉಂಟಾಗಬಹುದು.

ಬಾಳೆಹಣ್ಣು ಮತ್ತು ಹಾಲು ಒಟ್ಟಾಗಿ ಸೇವಿಸುವುದು ಒಳ್ಳೆಯದೋ, ಕೆಟ್ಟದೋ ಎಂಬುದು ಬಹಳ ಕಾಲದಿಂದಲೂ ಚರ್ಚೆಯಾಗುತ್ತಿರುವ ವಿಷಯ.ಕೆಲವರ ಪ್ರಕಾರ ಇದು ಉತ್ತಮವಾದ ಪೇಯವಾಗಿದ್ದರೆ ಇನ್ನೂ ಕೆಲವರು ಇದರ ವಿರುದ್ಧವಾಗಿ ಮಾತನಾಡುತ್ತಾರೆ. ‘ಹಾಲು ಮತ್ತು ಬಾಳೆಹಣ್ಣು ನಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ನಿಮಗೆ ಎರಡನ್ನೂ ತಿನ್ನಬೇಕೆಂದರೆ ಒಟ್ಟಾಗಿ ತಿನ್ನುವ ಬದಲು ಮೊದಲು ಹಾಲು ಕುಡಿದು 20 ನಿಮಿಷದ ನಂತರ ಬಾಳೆಹಣ್ಣು ತಿನ್ನುವುದು ಒಳಿತು. ಅದರಲ್ಲೂ ಬನಾನ ಮಿಲ್ಕ್ ಶೇಕ್ ನಮ್ಮ ಜೀರ್ಣಾಂಗ ಕಾರ್ಯಕ್ಕೆ ತಡೆ ಒಡದಡುವುದಲ್ಲದೆ, ನಿದ್ದೆಗೂ ಸಮಸ್ಯೆಯನ್ನು ತರುತ್ತದೆ’ ಎನ್ನುತ್ತಾರೆ

ಆದರೆ ಮತ್ತೊಬ್ಬ ಡಯಟಿಶನ್ ಶಿಲ್ಪಾ ಅರೋರಾ ಇದಕ್ಕೆ ವಿರುದ್ಧವಾದ ಮಾತನ್ನು ಹೇಳುತ್ತಾರೆ. ಅವರ ಪ್ರಕಾರ ‘ಬಾಳೆಹಣ್ಣು ಮತ್ತು ಹಾಲು ದೇಹ ಬೆಳೆಸುವವರಿಗೆ ಅತ್ಯುತ್ತಮ ಆಹಾರ. ತೂಕ ಹೆಚ್ಚಿಸಿಕೊಳ್ಳಬೇಕೆನ್ನುವವರು ಮತ್ತು ಹೆಚ್ಚು ಶಕ್ತಿ ವ್ಯಯವಾಗುವಂತಹ ಕೆಲಸ ಮಾಡುವವರಿಗೆ ಇದು ಅದ್ಭುತವಾದ ಪೇಯ. ಆದರೆ ಅಸ್ತಮಾದಂತಹ ಅಲರ್ಜಿ ಹೊಂದಿರುವವರಿಗೆ ಈ ಪೇಯ ಉತ್ತಮವಲ್ಲ, ಇದರಿಂದ ಕಫ ಹೆಚ್ಚಾಗಿ ಉಸಿರಾಟದ ಸಮಸ್ಯೆಗಳು ಕಾಡಬಹುದು.’

ಆಯುರ್ವೇದ ಏನು ಹೇಳುತ್ತದೆ?
ಆಯುರ್ವೇದದ ಪ್ರಕಾರ ಪ್ರತಿಯೊಂದು ಆಹಾರವೂ ಜೀರ್ಣವಾದ ನಂತರ, ಬಿಸಿ ಮಾಡಿದ ಮೇಲೆ ಅಥವಾ ತಂಪುಗೊಳಿಸಿದ ನಂತರ ತನ್ನದೇ ಆದ ರುಚಿ(ರಸ)ಯನ್ನು ಹೊಂದಿರುತ್ತದೆ. ಪ್ರತಿಯೊಬ್ಬರು ತಮ್ಮ ದೇಹ ಪ್ರಕೃತಿಗೆ ಅನುಗುಣವಾಗಿ ಆಹಾರಗಳನ್ನು ಸಂಯೋಜನೆ ಮಾಡಿ ಸೇವಿಸುವುದರಿಂದ ಯಾವುದೇ ಆರೋಗ್ಯದ ಸಮಸ್ಯೆಗಳು ಸಂಭವಿಸದು. ಬಾಳೆಹಣ್ಣು ಮತ್ತು ಹಾಲು ಜೊತೆ ಸೇರಿಸಿ ಸೇವಿಸುವುದು ಆರೋಗ್ಯಕ್ಕೆ ಖಂಡಿತವಾಗಿಯೂ ಒಳ್ಳೆಯದಲ್ಲ ಎನ್ನುತ್ತದೆ ಆಯುರ್ವೇದ. ಯಾವುದೇ ಫಲವಸ್ತುವನ್ನು ಹಾಲಿನ ಜೊತೆ ಸೇರಿಸಿ ತಿನ್ನುವುದನ್ನು ಆಯುರ್ವೇದ ನಿಷೇಧಿಸುತ್ತದೆ.

ಹಾಲಿನ ಜೊತೆ ಬಾಳೆಹಣ್ಣು ಸೇವನೆ ದೇಹದಲ್ಲಿರುವ ಅಗ್ನಿ(ಉಷ್ಣ)ಯನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಕಲ್ಮಶವನ್ನು ಉತ್ಪತ್ತಿ ಮಾಡುವುದಲ್ಲಿದೆ, ಶೀತ, ಕೆಮ್ಮು ಮತ್ತು ಸೈನಸ್ ಸಮಸ್ಯೆಗಳನ್ನು ತಂದೊಡ್ಡುತ್ತದೆ.
ಈ ಎರಡೂ ಆಹಾರ ವಸ್ತುಗಳು ದೇಹವನ್ನು ತಂಪು ಮಾಡುವ ಲಕ್ಷಣ ಹೊಂದಿದ್ದರೂ ಅದರ ಜೀರ್ಣಕ್ರೀಯೆ ಬೇರೆಯದೇ ಆಗಿರುತ್ತದೆ. ಬಾಳೆಹಣ್ಣು ಹುಳಿಯಾಗಿದ್ದು, ಹಾಲು ಸಿಹಿಯಾಗಿರುತ್ತದೆ. ಇದು ನಮ್ಮ ಜೀರ್ಣಾಂಗವ್ಯವಸ್ಥೆಯನ್ನು ಗೊಂದಲಕ್ಕೆ ದೂಡಿ, ದೇಹದಲ್ಲಿ ವಿಷದ ಪ್ರಮಾಣ ಹೆಚ್ಚಬಹುದು, ಅಲರ್ಜಿ ಉಂಟಾಗಬಹುದು ಅಥವಾ ಆರೋಗ್ಯವನ್ನು ಅಸಮತೋಲನ ಮಾಡಬಹುದು.

ಹಾಲು ಮತ್ತು ಬಾಳೆಹಣ್ಣು ಎರಡೂ ವಿರುದ್ಧ ದಿಕ್ಕಿನಲ್ಲಿರುವ ಆಹಾರಗಳು. ಇದನ್ನು ಜೊತೆಯಾಗಿ ಸೇವಿಸಿದರೆ ಎದೆಯುರಿ, ವಾಯು ಸಮಸ್ಯೆ ಉಂಟಾಗುವುದಲ್ಲದೆ ಕರುಳಿಗೂ ಹಾನಿಯುಂಟುಮಾಡುತ್ತದೆ. ಅಲ್ಲದೆ ಚರ್ಮದಲ್ಲಿ ಗುಳ್ಳೆಗಳು, ಅಲರ್ಜಿ ಮುಂತಾದ ಸಮಸ್ಯೆಗಳನ್ನೂ ತರಬಹುದು.

ಇದು ದೇಹದಲ್ಲಿ ಋಣಾತ್ಮಕ ಪರಿಣಾಮ ಬೀರಿ ದೇಹದೊಳಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ನೀರನ್ನು ಉತ್ಪತ್ತಿ ಮಾಡುತ್ತದೆ. ದೇಹದೊಳಗಿನ ನರಗಳನ್ನು ಮುಚ್ಚುವಂತೆ ಮಾಡುವುದರಿಂದ ಹೃದಯದ ಸಮಸ್ಯೆ, ವಾಂತಿ ಮತ್ತು ಭೇದಿ ಉಂಟುಮಾಡಬಹುದು.

ಒಳ್ಳೆಯದೇ ಕೆಟ್ಟದೇ?
ಹೆಚ್ಚಿನ ವೈದ್ಯರ ಪ್ರಕಾರ ಬಾಳೆಹಣ್ಣು ಮತ್ತು ಹಾಲಿನ ಸಂಯೋಜನೆಯ ಆಹಾರ ಖಂಡಿತವಾಗಿಯೂ ಆರೋಗ್ಯಕ್ಕೆ ಉತ್ತಮವಲ್ಲ. ಅದನ್ನು ಮಿಲ್ಕ್ ಶೇಕ್ ಆಗಿ ಕುಡಿಯುದನ್ನು ತಡೆದು ಬೇರೆ ಬೇರೆಯಾಗಿ ತಿಂದರೆ ಒಳಿತು.

Comments are closed.