ಆರೋಗ್ಯ

ದಿನ ನಿತ್ಯವೂ ಲಿಪ್‌ಸ್ಟಿಕ್‌ ಬಳಸುವವರಿಗೆ ಎಚ್ಚರಿಕೆ!

Pinterest LinkedIn Tumblr


ಲಿಪ್‌ಸ್ಟಿಕ್‌ ಹಚ್ಚುವುದರಿಂದ ಮುಖದ ಚೆಲುವು ಹೆಚ್ಚುವುದು ನಿಜ, ಆದರೆ ಕ್ವಾಲಿಟಿ ಲಿಪ್‌ಸ್ಟಿಕ್‌ ಬಳಸದಿದ್ದರೆ ತುಟಿ ಸೌಂದರ್ಯ ಜೋಕೆ. ಪ್ರತಿದಿನ ಲಿಪ್‌ಸ್ಟಿಕ್ ಬಳಸುತ್ತಿದ್ದರೆ ತುಟಿ ಡ್ರೈಯಾಗಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು.

ಲಿಪ್‌ಸ್ಟಿಕ್‌ನಿಂದ ತುಟಿ ಹಾಳಾಗಬಾರದೆಂದು ನೀವು ಬಯಸುವುದಾದರೆ ಈ ಟಿಪ್ಸ್ ಪಾಲಿಸುವುದು ಒಳ್ಳೆಯದು.

1. ಎರಡು ವರ್ಷಕ್ಕಿಂತ ಹಳೆಯದಾದ ಲಿಪ್‌ಸ್ಟಿಕ್‌ ಬಳಸಲೇಬೇಡಿ.

2. ವಾರದಲ್ಲಿ ಒಂದು ಅಥವಾ ಎರಡು ಬಾರಿ ತುಟಿಗೆ ಏನೂ ಹಚ್ಚಬೇಡಿ. ದಿನಾ ಲಿಪ್‌ಸ್ಟಿಕ್‌ ಹಚ್ಚುವವರಿಗೆ ಒಂದು ದಿನ ಹಚ್ಚದೆ ಇದ್ದರೆ ಮುಖ ಬೋರು ಕಾಣುತ್ತಿದೆ ಅನಿಸುತ್ತದೆ. ಅಂಥವರು ಲಿಪ್‌ಗ್ಲೋಸ್ ಹಚ್ಚಬಹುದು.

3. ದಿನಕ್ಕೆ ಎರಡು ಬಾರಿಗಿಂತ ಅಧಿಕ ಬಾರಿ ಲಿಪ್‌ಸ್ಟಿಕ್‌ ಹಚ್ಚಬೇಡಿ.

4. ಲಿಪ್‌ಸ್ಟಿಕ್‌ ಹಚ್ಚುವ ಮುನ್ನ ಲಿಪ್‌ಬಾಮ್‌ ಹಚ್ಚಿ.

ತುಟಿ ರಕ್ಷಣೆ ಮಾಡಿ ತುಟಿಯ ಅಂದ ಹೆಚ್ಚಿಸಲು ಕೆಲ ಸೂತ್ರಗಳು

1.ತುಟಿಗೆ ಹಾಲಿನ ಕೆನೆ/ತುಪ್ಪ ಹಚ್ಚಿದರೆ ತುಟಿ ಮೃದುವಾಗುವುದು.
2. ಬೀಟ್‌ರೂಟ್ ರಸವನ್ನು ತುಟಿಗೆ ಹಚ್ಚುವುದರಿಂದ ಗುಲಾಬಿ ತುಟಿ ಚೆಲುವು ನಿಮ್ಮದಾಗುವುದು.

Comments are closed.