ಆರೋಗ್ಯ

ತೊಡೆ (ಮೀನಖಂಡ ) ಸ್ನಾಯುಗಳ ಸೆಳೆತಕ್ಕೆ ಪರಿಹಾರ ಇಲ್ಲಿದೆ…

Pinterest LinkedIn Tumblr

ಇಂದು ಬಹಳಷ್ಟು ಮಂದಿ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಒಂದು ತೊಡೆ ಸ್ನಾಯುಗಳ ಸೆಳೆತ. ಅಥವಾ ಕಾಲಿನ ಮೀನಖಂಡ ಸಹ ಕೆಲವರಿಗೆ ಸೆಳೆಯುತ್ತದೆ. ಸಾಮಾನ್ಯವಾಗಿ ಬಹಳಷ್ಟು ಮಂದಿ ನಿದ್ದೆಯಲ್ಲಿದ್ದಾಗ ಈ ರೀತಿ ನಡೆಯುತ್ತದೆ. ಇನ್ನು ಕೆಲವರಿಗಾದರೆ ಇತರೆ ಸಮಯಗಳಲ್ಲು ಸಹ ಈ ಸಮಸ್ಯೆ ಬರುತ್ತದೆ.

ಇದಕ್ಕೆ ಕಾರಣಗಳು ಅನೇಕ ಇವೆ. ವಯಸ್ಸು ಹೆಚ್ಚುತಿರುವುದು, ದೀರ್ಘ ಕಾಲದ ಅನಾರೋಗ್ಯಗಳು ಇರುವುದು, ವ್ಯಾಯಾಮ ಮಾಡುವಾಗ, ಕ್ರೀಡೆಗಳು ಆಡುವಾಗ ಅಥವಾ ಪೋಷಕಾಹಾರ ಲೋಪದಂತಹ ಸಮಸ್ಯೆಗಳಿಂದ ಸಹ ತೊಡೆ ಸ್ನಾಯುಗಳು ಅಥವಾ ಮೀನಖಂಡ ಸೆಳೆತ ಉಂಟಾಗುತ್ತದೆ. ಅಂತಹ ಸಮಯದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಏನು ಮಾಡಬೇಕು ಎಂದು ಅರ್ಥವಾಗಲ್ಲ. ಆದರೆ ಕೆಳಗೆ ತಿಳಿಸಿದ ರೀತಿಯಲ್ಲಿ ಕೆಲವು ಸಲಹೆಗಳನ್ನು ಪಾಲಿಸಿದರೆ ಈ ಸಮಸ್ಯೆಯಿಂದ ಉಪಶಮನ ಸಿಗುತ್ತದೆ. ಹಾಗಿದ್ದರೆ ಆ ಸಲಹೆಗಳು ಏನು ಎಂದು ಈಗ ತಿಳಿದುಕೊಳ್ಳೋಣ…!

1. ತೊಡೆ ಸ್ನಾಯುಗಳು ಸೆಳೆದರೆ ಕೂಡಲೆ ಆ ಜಾಗದಲ್ಲಿ ಐಸ್‍ಪ್ಯಾಕ್ ಇಡಬೇಕು. ಸ್ವಲ್ಪ ಸಮಯ ಹಾಗೆಯೇ ಇಡಬೇಕು. ಇದರಿಂದ ನೋವು ಕಡಿಮೆಯಾಗುತ್ತದೆ. ಆ ಬಳಿಕ ಸ್ನಾಯುಗಳು ರಿಲ್ಯಾಕ್ಸ್ ಆಗುತ್ತವೆ.
2. ಕೊಬ್ಬರಿ ಎಣ್ಣೆ, ಆಲೀವ್ ಎಣ್ಣೆ, ಎಳ್ಳೆಣ್ಣೆಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರಣವಾಗಿ ಮಾಡಿ ಅದನ್ನು ಬಿಸಿ ಮಾಡಬೇಕು. ಆ ಬಳಿಕ ಆ ಮಿಶ್ರಣವನ್ನು ಸಮಸ್ಯೆ ಇರುವ ಪ್ರದೇಶಗಳಲ್ಲಿ ಹಚ್ಚಿ ನಯವಾಗಿ ಮಸಾಜ್ ಮಾಡಬೇಕು. ಇದರಿಂದ ಬಿಗಿಯಾದ ಸ್ನಾಯುಗಳು ರಿಲ್ಯಾಕ್ಸ್ ಆಗುತ್ತವೆ. ನೋವು ಕಡಿಮೆಯಾಗುತ್ತದೆ.
3. ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ತೆಗೆದುಕೊಂಡು ಅದರಲ್ಲಿ ಸ್ವಲ್ಪ ಲವಂಗ ಹಾಕಬೇಕು. ಆ ಬಳಿಕ ಆ ಮಿಶ್ರಣವನ್ನು ಬಿಸಿ ಮಾಡಬೇಕು. ಇದನ್ನು ಉಗುರು ಬೆಚ್ಚಗೆ ಇದ್ದಾಗ ಸಮಸ್ಯೆ ಇರುವ ಭಾಗದಲ್ಲಿ ಹಚ್ಚಬೇಕು. ಈ ರೀತಿ ಮಾಡಿದರೆ ಸಹ ಸಮಸ್ಯೆಯಿಂದ ಉಪಶಮನ ಸಿಗಲಿದೆ.
4. ಸಾಮಾನ್ಯವಾಗಿ ಬಹಳಷ್ಟು ಮಂದಿಗೆ ಡೀಹೈಡ್ರೇಷನ್ ಸಮಸ್ಯೆ ಇರುತ್ತದೆ. ನೀರು ತಕ್ಕಷ್ಟು ಕುಡಿಯದಿದ್ದರೂ ಈ ರೀತಿ ಆಗುತ್ತದೆ. ಡೀಹೈಡ್ರೇಷನ್ ಬಂದಾಗ ತೊಡೆ ಸ್ನಾಯುಗಳು ಅಥವಾ ಮೀನಖಂಡ ಸೆಳೆಯುತ್ತದೆ. ಅಂತಹ ಸಮಯದಲ್ಲಿ ತಕ್ಕಷ್ಟು ನೀರು ಕುಡಿದರೆ ಸಮಸ್ಯೆಯಿಂದ ಉಪಶಮನ ಲಭಿಸುತ್ತದೆ.
5. ದೇಹದಲ್ಲಿ ಸೂಕ್ತ ರೀತಿಯ ಪೊಟ್ಯಾಶಿಯಂ ಇಲ್ಲದಿದ್ದರೂ ಈ ರೀತಿ ನಡೆಯುತ್ತದೆ. ಅಂತಹವರು ಪೊಟ್ಯಾಷಿಯಂ ಹೆಚ್ಚಾಗಿ ಇರುವ ಬಾಳೆಹಣ್ಣು ಇನ್ನಿತರೆ ಆಹಾರಗಳನ್ನು ತೆಗೆದುಕೊಂಡರೆ ಸಮಸ್ಯೆ ಬರಲ್ಲ.

Comments are closed.