ಆರೋಗ್ಯ

ಸೌತೆಯ ಸಿಪ್ಪೆಯಲ್ಲಿಯೂದೆ ಆರೋಗ್ಯಕ್ಕೆ ಉಪಯುಕ್ತವಾದ ಗುಣಗಳು

Pinterest LinkedIn Tumblr

ಇಂಗ್ಲೀಷ್ ಪ್ರಿಯರು ಕುಕುಂಬರ್ ಎಂದು ಕರೆಯುವ ಪಾಪದ ಸೌತೆ ಸಲಾಡ್ ರುಚಿಯನ್ನು ಹೆಚ್ಚಿಸಲು ಬಳಕೆಯಾಗುವುದೇ ಜಾಸ್ತಿ. ಆದರೆ ಅದು ನಮಗೆ ಅತ್ಯುತ್ತಮ ಆರೋಗ್ಯ ಲಾಭಗಳನ್ನೂ ನೀಡುತ್ತದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ.ದೇಹದ ತೂಕ ಕಡಿಮೆ ಮಾಡುವುದರಿಂದ ಹಿಡಿದು ರಕ್ತದೊತ್ತಡದ ಮತ್ತು ಮಲಬದ್ಧತೆಯ ವಿರುದ್ಧ ಹೋರಾಡುವವರೆಗೆ ಅದರ ಮಹಿಮೆ ವ್ಯಾಪಿಸಿದೆ. ಆದರೆ ಸೌತೆಯ ಸಿಪ್ಪೆಯಲ್ಲಿಯೂ ನಮ್ಮ ಆರೋಗ್ಯಕ್ಕೆ ಉಪಯುಕ್ತವಾದ ಗುಣಗಳು ಅಡಗಿವೆ ಎಂದು ಗೊತ್ತಾದರೆ ನೀವು ನಿಜಕ್ಕೂ ಅಚ್ಚರಿ ಪಡುತ್ತೀರಿ. ಸೌತೆ ಸಿಪ್ಪೆ ತೆಗೆಯುವ ಅಗತ್ಯವಿಲ್ಲದ ತರಕಾರಿಗಳ ಗುಂಪಿಗೆ ಸೇರಿದೆ.

►ದೇಹದ ತೂಕ ಇಳಿಕೆ
ದೇಹದ ತೂಕ ಇಳಿಸಿಕೊಳ್ಳಲು ಹೆಣಗಾಡುತ್ತಿರುವವರು ಸೌತೆಯನ್ನು ಅದರ ಸಿಪ್ಪೆ ಸಹಿತ ಅಗತ್ಯವಾಗಿ ತಿನ್ನಬೇಕು. ಶೇ.79ರಷ್ಟು ನೀರನ್ನು ಒಳಗೊಂಡಿರುವ ಅದು ನಾರನ್ನು ಸಮೃದ್ಧವಾಗಿ ಹೊಂದಿದೆ. ಮುಕ್ಕಾಲು ಕಪ್ನಷ್ಟು ಹೆಚ್ಚಿದ ಸೌತೆ ಸುಮಾರು 11 ಕ್ಯಾಲರಿಗಳನ್ನು ಒಳಗೊಂಡಿರುತ್ತದೆ. ಹೀಗಾಗಿ ಯಾವುದೇ ಪೂರ್ವಾಗ್ರಹವಿಲ್ಲದೆ ಸೌತೆಯನ್ನು ಧಾರಾಳವಾಗಿ ತಿನ್ನಿ. ಅದರಲ್ಲಿರುವ ಸಮೃದ್ಧ ನೀರು ನಿಮ್ಮ ಶರೀರದಲ್ಲಿ ನಿರ್ಜಲೀಕರಣಕ್ಕೆ ಅವಕಾಶ ನೀಡುವುದಿಲ್ಲ.

►ಕಣ್ಣಿಗೂ ಉತ್ತಮ
ಸೌತೆಯ ಸಿಪ್ಪೆಯಲ್ಲಿ ವಿಟಾಮಿನ್ ಎ ಮಾದರಿಯ ಬಿಟಾಕ್ಯಾರಟಿನ್ ಸಮೃದ್ಧವಾಗಿರುತ್ತದೆ. ಬಿಟಾಕ್ಯಾರಟಿನ್ ಕಣ್ಣಿನ ಆರೋಗ್ಯವನ್ನು ರಕ್ಷಿಸುವ ಜೊತೆಗೆ ದೃಷ್ಟಿಯನ್ನು ಚುರುಕುಗೊಳಿಸುತ್ತದೆ. ಕಣ್ಣುಗಳು ಊದಿಕೊಂಡಿದ್ದರೆ ಸೌತೆಯ ಸಿಪ್ಪೆಗಳನ್ನು 15 ನಿಮಿಷಗಳ ಕಾಲ ಅವುಗಳ ಮೇಲೆ ಇಟ್ಟುಕೊಳ್ಳಿ. ಊದಿದ್ದು ಕಡಿಮೆಯಾಗದಿದ್ದರೆ ಹೇಳಿ.

►ಕ್ಯಾನ್ಸರ್ ವಿರುದ್ಧ ಹೋರಾಡಲೂ ಸೈ
ಸೌತೆಯ ನಿಯಮಿತ ಸೇವನೆ ಸ್ತನ, ಪ್ರಾಸ್ಟೇಟ್ ಮತ್ತು ಅಂಡಾಶಯ ಕ್ಯಾನ್ಸರ್ಗಳ ಅಪಾಯವನ್ನು ತಗ್ಗಿಸಲು ನೆರವಾಗುತ್ತದೆ.

►ಮಲಬದ್ಧತೆಗೆ ರಾಮಬಾಣ
ಸೌತೆಯ ಸಿಪ್ಪೆಯಲ್ಲಿರುವ ಕರಗದ ನಾರು ಪಚನ ನಾಳವನ್ನು ಪರಿಣಾಮಕಾರಿಯಾಗಿ ಸುಗಮಗೊಳಿಸುತ್ತದೆ. ಸೌತೆಯ ಸಿಪ್ಪೆಯನ್ನು ಜಜ್ಜಿ ಅದಕ್ಕೆ ಸ್ವಲ್ಪ ಜೇನು ಬೆರೆಸಿ ಪ್ರತಿದಿನ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಮಲಬದ್ಧತೆಯ ಕಾಟದಿಂದ ಪಾರಾಗಬಹುದು.

►ಚರ್ಮಕ್ಕೂ ಲಾಭಕಾರಿ
ಚರ್ಮಕ್ಕೆ ಒಳಗಿನಿಂದಲೇ ಪುನಃಶ್ಚೇತನ ನೀಡುವಲ್ಲಿ ಸೌತೆ ನೆರವಾಗುತ್ತದೆ. ಕುಕುಂಬರ್ ಬೇಸ್ಡ್ ಫೇಸ್ ಪ್ಯಾಕ್ ಅಥವಾ ಸೌತೆಯ ಹೋಳುಗಳನ್ನು ಬಳಸಿದರೆ ಚರ್ಮಕ್ಕೆ ವಯಸ್ಸಾಗುತ್ತಿದೆ ಎನ್ನುವುದನ್ನು ತೋರಿಸುವ ಲಕ್ಷಣಗಳನ್ನು ತಗ್ಗಿಸಬಹುದು. ಕಣ್ಣಿನ ಬಳಿಯ ಕಪ್ಪು ವರ್ತುಲಗಳು, ತೆರೆದ ರಂಧ್ರಗಳು ಮತ್ತು ಕಲೆಗಳಿಗೂ ಸೌತೆ ಒಳ್ಳೆಯದು.

►ಬಾಯಿಯ ದುರ್ವಾಸನೆಯನ್ನು ತಗ್ಗಿಸುತ್ತದೆ
ಸೌತೆಯಲ್ಲಿತುವ ನಾರು ಬಾಯಿಯೊಳಗೆ ಲಾಲಾರಸದ ಉತ್ಪಾದನೆಯನ್ನು ಪ್ರಚೋದಿ ಸುತ್ತದೆ ಮತ್ತು ಇದು ಬಾಯಿಯೊಳಗೆ ದುರ್ವಾಸನೆಗೆ ಕಾರಣವಾಗುವ ಕೆಟ್ಟ ಬ್ಯಾಕ್ಟೀರಿಯಾಗಳು ಶೇಖರಗೊಳ್ಳುವುದನ್ನು ತಡೆಯುತ್ತದೆ.

►ಹೃದಯಕ್ಕೂ ಒಳ್ಳೆಯದು
ಸೌತೆಯಲ್ಲಿರುವ ಪೊಟ್ಯಾಷಿಯಂ ಹೆಚ್ಚಿನ ರಕ್ತದೊತ್ತಡವನ್ನು ತಗ್ಗಿಸಲು ನೆರವಾಗುತ್ತದೆ. ನಿಯಮಿತವಾಗಿ ಹೆಚ್ಚಿನ ಪ್ರಮಾಣದಲ್ಲಿ ಸೌತೆಯನ್ನು ತಿನ್ನುವವರಲ್ಲಿ ಮಿದುಳಿನ ಆಘಾತ ಮತ್ತು ಹೃದ್ರೋಗಗಳ ಅಪಾಯ ಕಡಿಮೆ ಎನ್ನುವುದನ್ನು ಸಂಶೋಧನೆಗಳು ಸಾಬೀತು ಮಾಡಿವೆ.

►ಮೂಳೆಗಳೂ ಆರೋಗ್ಯಪೂರ್ಣ
ಮೂಳೆಗಳ ಆರೋಗ್ಯ ಕಾಯ್ದುಕೊಳ್ಳುವಲ್ಲಿ ವಿಟಾಮಿನ್ ಕೆ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಸೌತೆ ಈ ವಿಟಾಮಿನ್ನ ಸಮೃದ್ಧ ಆಗರವಾಗಿದೆ. ಹೀಗಾಗಿ ಸೌತೆಯನ್ನು ನಿಯಮಿತವಾಗಿ ತಿನ್ನುವುದು ಮೂಳೆಗಳಲ್ಲಿ ಕ್ಯಾಲ್ಶಿಯಂ ಹೀರುವಿಕೆಯನ್ನು ಹೆಚ್ಚಿಸುತ್ತದೆ.

►ಕರುಳಿನಲ್ಲಿಯ ಹುಳಗಳನ್ನೂ ಬಿಡುವುದಿಲ್ಲ
ಸೌತೆಯಲ್ಲಿರುವ ಎರಿಪ್ಸಿನ್ ಎಂಬ ಕಿಣ್ವವು ಕರುಳಿನಲ್ಲಿಯ ಟೇಪ್ವರ್ಮ ಅಥವಾ ಲಾಡಿಹುಳದಂತಹ ಹುಳಗಳನ್ನು ನಾಶ ಮಾಡಲು ನೆರವಾಗುತ್ತದೆ

 

Comments are closed.