ಆರೋಗ್ಯ

ನಮ್ಮ ಅಂಗೈಯಲ್ಲಿದೆ ತಲೆ ಸುತ್ತು ಅಥವಾ ತಲೆ ನೋವಿಗೆ ಶೀಘ್ರ ಪರಿಹಾರ

Pinterest LinkedIn Tumblr

headache_treatment

 ಪತ್ರಿಯೊಬ್ಬ ಮನುಷ್ಯನಿಗೆ ಅತನ ಜೀವನದಲ್ಲಿ ಸಮಸ್ಯೆಗಳು ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ಅದರೆ ಅದಕ್ಕೆ ಪರಿಹಾರವು ಕೂಡ ಅತನಲ್ಲಿಯೇ ಇದೆ ಅದರೆ ಅದು ಅತನಿಗೆ ತಿಳಿದಿರುವುದಿಲ್ಲ ಕಾರಣ ಎಲ್ಲದ್ದಕ್ಕೂ ಮಾತ್ರೆ ಒಂದೇ ಪರಿಹಾರ ಎಂದು ತಿಳಿದಿರುತ್ತಾನೆ, ಆದರೆ ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಿ ಓದುಗರೇ ಅಂಗಡಿಗಳಲ್ಲಿ ಸಿಗುವ ಎಲ್ಲ ರೀತಿಯ ಜೌಷದಿಗಳು ಕೇವಲ ಕ್ಷಣಿಕ ಶಮನವಾಗಿರುತ್ತದೆ.
ಅದಕ್ಕಾಗಿ ಅದಷ್ಟು ನಮ್ಮ ಮನೆಯಲ್ಲಿಯೇ ಸಿಗುವಂತಹ ಅಂಗೈ ಮದ್ದುಗಳು ಈ ಸಮಸ್ಯೆಗಳಿಗೆ ಉತ್ತಮ ಪರಿಹಾರ ಎಂದು ನಾವು ತಿಳಿದುಕೊಂಡು ನಮ್ಮ ಆರೋಗ್ಯವನ್ನು ಕಾಪಾಡುವುದು ಉತ್ತಮವಲ್ಲವೇ…

* ಕೋಕಂ,ಪುನರ್‌ಪುಲಿ,ಮುರುಗಲ ಹಣ್ಣು ಎಂದೂ ಕರೆಯಲ್ಪಡುವ ಈ ಹಣ್ಣಿನ ರಸ ,ಸಾರು ಪಿತ್ತಕ್ಕೆ ದಿವ್ಯಔಷದ.ಕೆಮ್ಮಣ್ಣು ನೀರಲ್ಲಿ ನೆನೆಸಿಟ್ಟು ಅದರ ತಿಳಿಯನ್ನು ದಿನಕ್ಕ್ಕೆ ಮೂರು ನಾಲ್ಕು ಬಾರಿ ಕುಡಿಯುವುದರಿಂದಲೂ ಪಿತ್ಹ ದಿಂದ ಬರುವ ಎಲ್ಲಾ ತೊಂದರೆ ಶಮನ ಗೊಳ್ಳುತ್ತದೆ…
* ಹಳೆ ಹುಣಿಸೆ ಹಣ್ಣನ್ನು ರಾತ್ರಿ ನೀರಿಗೆ ಹಾಕಿಟ್ಟು, ಬೆಳಿಗ್ಗೆ ಅದನ್ನು ಕಿವುಚಿ ರಸ ತೆಗೆದು ಅದಕ್ಕೆ ಸ್ವಲ್ಪ ಬೆಲ್ಲ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಅರ್ಧ ಗಂಟೆಯ ನಂತರ ಬೇರೆ ಆಹಾರ ಸೇವಿಸಬಹುದು.
* ಇದು ತಲೆನೋವಿಗೆ ಪರಿಣಾಮಕಾರಿ ಮನೆ ಮದ್ದು.ನೀವು ಮಾಡಬೇಕಾದ್ದು ಇಷ್ಟೆ,ಲವಂಗ ಮತ್ತು ಹರಳುಪ್ಪು ಕುಟ್ಟಿ ಪುಡಿ ಮಾಡಿ,ಹಾಲಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ಇಟ್ಟುಕೊಳ್ಳಿ.ಪೇಸ್ಟ್ ನಲ್ಲಿ ಇರುವ ಹರಳುಪ್ಪು ಹೈಗ್ರೋಸ್ಕೊಪಿಕ್ ಆಗಿರುವುದರಿಂದ ತಲೆಯಲ್ಲಿರುವ ದ್ರವವನ್ನು ತೆಗೆದು ತಲೆ ನೋವನ್ನು ಕಡಿಮೆ ಮಾಡುತ್ತದೆ.
* ಒಂದು ಲೋಟದಲ್ಲಿ ಹದವಾದ ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ನಿಂಬುವನ್ನು ಬೆರೆಸಿ.ಇದನ್ನು ಕುಡಿದರೆ ನಿಮ್ಮ ತಲೆನೋವು ತಕ್ಷಣ ಕಡಿಮೆ ಆಗುತ್ತದೆ.ಕೆಲವರಿಗೆ ಗ್ಯಾಸ್ ಸಮಸ್ಯೆಯಿಂದ ಕೂಡ ತಲೆನೋವು ಬಂದಿರುತ್ತದೆ ಅಂತವರಿಗೆ ಇದು ಸಹಕಾರಿ.ಇದು ಗ್ಯಾಸ್ ಮತ್ತು ತಲೆನೋವು ಎರಡರಿಂದಲೂ ಮುಕ್ತಿ ನೀಡುತ್ತದೆ.
* ತಲೆನೋವನ್ನು ಹೋಗಲಾಡಿಸಲು ಇನ್ನೊಂದು ಉಪಾಯವೆಂದರೆ ನೀಲಗಿರಿ ಎಣ್ಣೆಯಿಂದ ಮಸಾಜ್ ಮಾಡುವುದು.ಇದು ನೋವು ನಿವಾರಕವಾದ್ದರಿಂದ ಬೇಗ ತಲೆನೋವು ನಿವಾರಿಸುತ್ತದೆ
* ತಲೆನೋವನ್ನು ನಿವಾರಿಸಲು ಸುಲಭ ಉಪಾಯವೆಂದರೆ ದಾಲ್ಚಿನ್ನಿ ಪುಡಿಯನ್ನು ನೀರು ಬೇರೆಸಿ ಪೇಸ್ಟ್ ಮಾಡಿ ಅದನ್ನು ತಲೆಗೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ.ಇದನ್ನು ಹಣೆಗೆ ಹಚ್ಚಿದರೆ ತಕ್ಷಣ ನೋವು ಕಡಿಮೆ ಆಗುತ್ತದೆ.
* ಕೊತ್ತಂಬರಿ,ಸಕ್ಕರೆ ಯನ್ನು ನೀರಿನೊಂದಿಗೆ ಬೆರೆಸಿ ಕುಡಿದರೆ ತಲೆನೋವಿನಿಂದ ಪರಿಹಾರ ದೊರಕುವುದು.ಸಾಮಾನ್ಯ ತಂಡಿಯಿಂದ ತಲೆನೋವು ಬಂದಿದ್ದರೆ ಈ ರೀತಿ ಮಾಡಿ ಕುಡಿಯುವುದರಿಂದ ಕಡಿಮೆ ಆಗುತ್ತದೆ.
* 15 ರಿಂದ 20 ನಿಮಿಷ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿದರೆ ತಲೆನೋವು ಕಡಿಮೆಯಾಗುತ್ತದೆ.ಬೇಸಿಗೆಯ ಬಿಸಿಲಿಗೆ ತಲೆನೋವು ಬಂದಾಗ ಈ ರೀತಿ ಮಾಡಿದರೆ ಕೊಬ್ಬರಿ ಎಣ್ಣೆ ತಂಪು ಮಾಡುವುದರ ಮೂಲಕ ತಲೆನೋವನ್ನು ಕಡಿಮೆ ಮಾಡುತ್ತದೆ.
* ಕೆಲವು ಬೆಳ್ಳುಳ್ಳಿ ತೆಗೆದುಕೊಂಡು ಅದರಿಂದ ರಸ ತೆಗೆಯಿರಿ.1 ಚಮಚದಷ್ಟು ರಸ ಕುಡಿಯಿರಿ.ಇದು ನೋವು ನಿವಾರಕದಂತೆ ಕೆಲಸಮಾಡುತ್ತದೆ ಮತ್ತು ತಲೆನೋವು ಸಂಪೂರ್ಣ ಕಡಿಮೆ ಆಗುತ್ತದೆ.
* ಕೊತ್ತಂಬರಿ ಸೊಪ್ಪು ,ಜೀರಿಗೆ ಮತ್ತು ಶುಂಟಿ ಬೆರೆಸಿ ಮಾಡಿದ ಕಷಾಯ ಅಥವಾ ಟೀ ಕುಡಿಯುವುದರಿಂದ ತಲೆನೋವು ಸುಲಭವಾಗಿ ಮತ್ತು ಬೇಗ ಕಡಿಮೆ ಆಗುತ್ತದೆ.ಬಿಸಿ ನೀರಿಗೆ ಮೇಲೆ ಹೇಳಿದ ಪದಾರ್ಥ ಮಿಶ್ರಮಾಡಿ 5 ನಿಮಿಷಗಳವರೆಗೆ ಕುದಿಸಿ.ನಂತರ ಆ ನೀರನ್ನು ದಿನದಲ್ಲಿ ಎರಡು ಬಾರಿಯಾದರೂ ಕುಡಿಯಿರಿ.ನಿಮಗೆ ಉತ್ತಮ ಎನಿಸುವವರೆಗೂ ಕುಡಿಯುತ್ತಿರಿ.
* ಇಂಗನ್ನು ತೆಂಗಿನ ಎಣ್ಣೆಯಲ್ಲಿ ಅರೆದು ಹಣೆಗೆ ಹಚ್ಚಿದರೆ ತಲೆನೋವ್ವು ಕಡಿಮೆ ಆಗುತ್ತದೆ. ಕೀಲು ನೋವ್ವಿಗೂ ಇದನ್ನು ಹಚ್ಚಿದರೆ ನೋವ್ವು ಕಡಿಮೆ ಆಗುತ್ತದೆ.
* ಬಿಸಿಲಲ್ಲಿ ತಿರುಗುವುದರಿಂದ ಉಂಟಾಗುವ ತಲೆನೋವ್ವಿಗೆ ದ್ರಾಕ್ಷಿ ಹಣ್ಣನ್ನು ಸೇವಿಸುವುದು ಅದರ ರಸವನ್ನು ಸೇವಿಸುವುದು ಪರಿಣಾಮಕಾರಿ.
* ನಿಂಬೆ ಹಣ್ಣಿನ ಸಿಪ್ಪೆಯನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ಅರೆದು ಹಣೆಗೆ ಹಚ್ಚುವುದರಿಂದ ಅರೆತಲೆನೋವ್ವು ಗುಣವಾಗುತ್ತದೆ.
* ದಿನವು 10-15 ಒಣದ್ರಾಕ್ಷಿಗಳನ್ನು ತಿಂದು ಹಾಲು ಕುಡಿಯುವುದರಿಂದ ದುರ್ಬಲತೆಯಿಂದ ತಲೆ ತಿರುಗುವುದು ನಿಲ್ಲುತ್ತದೆ. ಲೈಂಗಿಕ ಶಕ್ತಿಯು ವೃದ್ದಿಯಾಗುತ್ತದೆ .
* ನೆಲ್ಲಿಕಾಯಿಯ ಶರಬತ್ತು ಮಾಡಿ ಕುಡಿಯುವುದರಿಂದ ತಲೆ ತಿರುಗುವುದು ನಿಲ್ಲುತ್ತದೆ.
* ಹುಣಿಸೆ ಹಣ್ಣಿನ ಸಕ್ಕರೆ ಪಾನಕ ಕುಡಿದರೆ ತಲೆನೋವ್ವು ಪರಿಹಾರವಾಗುತ್ತದೆ.
* ಉಷ್ಣದಿಂದ ತಲೆನೋವ್ವು ಉಂಟಾದರೆ ಕಲ್ಲಂಗಡಿಯ ರಸವನ್ನು ತೆಗೆದು ಸ್ವಲ್ಪ ಕಲ್ಲುಸಕ್ಕರೆ ಹಾಕಿ ಕುಡಿದರೆ ಗುಣವಾಗುತ್ತದೆ.
* ರಾತ್ರಿ 5-6 ಹನಿ ಬಾಧಾಮಿ ತೈಲವನ್ನು ಮೂಗಿಗೆ ಹಾಕಿದರೆ ತಲೆನೋವ್ವು ಕಡಿಮೆ ಆಗುತ್ತದೆ.
* ಸೇಬಿಗೆ ಸ್ವಲ್ಪ ಉಪ್ಪು ಹಚ್ಚಿ ಸೇವಿಸಿದರೆ ತಲೆನೋವ್ವು ಕಡಿಮೆಯಾಗುತ್ತದೆ.
* ಏಲಕ್ಕಿ ಚೂರ್ಣ ಬೆರೆಸಿದ ನಿಂಬೆ ಪಾನಕ ಸೇವಿಸಿದರು ತಲೆ ತಿರುಗು ನಿಲ್ಲುತ್ತದೆ

Comments are closed.