ಆರೋಗ್ಯ

ರುಚಿಯ ಮೇಲಿನ ನಿಯಂತ್ರಣದಿಂದ ಮಾತ್ರ ಆರೋಗ್ಯ ಕಾಪಾಡಲು ಸಾಧ್ಯ,

Pinterest LinkedIn Tumblr

harmful_maida

 ನಾಲಿಗೆಗೆ ರುಚಿ ರುಚಿಯಾದ ತಿನಸು ತಿನ್ನುವುದೆಂದರೆ ಜನರಿಗೆ ಎಲ್ಲಿಲ್ಲದ್ದ ಸಂತೋಷ.ಅದರಲ್ಲೂ ಸಾಮಾನ್ಯವಾಗಿ ಬೇಕರಿ ತಿಂಡಿಯಂತೂ ಅಹಾ…. ಅಹಾ… ಸ್ಬರ್ಗ ಸುಖ. ತಿಂದರೇ ತಿನ್ನುತ್ತಲೇ ಇರಬೇಕಾನಿಸುತ್ತದೆ. ಅದರೇ ಬೇಕರಿಗಳಲ್ಲಿ ತಯಾರಿಸಲ್ಪಡುವ ಬಹುತೇಕ ಪದಾರ್ಥಗಳೂ ಬಳಕೆ ಮೈದದಿಂದಲೇ ಆಗುತ್ತದೆ ಎನ್ನುವುದು ನಿಮಗೆ ತಿಳಿದಿದೆಯೇ. ಇದರಿಂದ ಏನೂ ಸಮಸ್ಯೆ ಇಲ್ಲ ಎಂದು ನಂಬಿ ತಿನ್ನುವವರೇ ಹೆಚ್ಚು. ಅದರೇ ಇಲ್ಲಿದೇ ನಿಮಗೆ ಒಂದು ಶಾಕಿಂಗ್ ವಿಷಯ…..

ಗೋಧಿಯಿಂದ ಉತ್ಪಾದಿಸಲಾಗುವ ಮೈದಹಿಟ್ಟು ಅತ್ಯಂತ ಅಪಾಯಕಾರಿ. ಇದರಿಂದ ಆಗುವ ತೊಂದರೆಗಳ ಬಗ್ಗೆ ಯಾರೂ ಕಿಂಚಿತ್ತೂ ಯೋಚಿಸದೆ ಬಳಸುತ್ತಲೇ ಇದ್ದಾರೆ. ನಾಲಿಗೆ ರುಚಿ ಮತ್ತು ಬಿಳಿ ಪದಾರ್ಥದ ಮೇಲೆ ನಮಗಿರುವ ಆರಾಧನೆ ಇದರ ಪ್ರಚಾರಕ್ಕೆ ಅನುಕೂಲವಾಗಿದೆ.

‘12 ಸಂಘ-ಸಂಸ್ಥೆಗಳು ಮತ್ತು ಸಂಘಟನೆಗಳು ಸೇರಿ ಪಾಲಕ್ಕಾಡಿ ಎಂಬಲ್ಲಿ “ಮೈದಾವರ್ಜನ ಸಮಿತಿ’ ಎಂಬ ಆಂದೋಲನವನ್ನು ಪ್ರಾರಂಭಿಸಿತ್ತು.. ಮೈದಾದಿಂದ ಆಗುವ ತೊಂದರೆಗಳ ಬಗ್ಗೆ ಒಂದು ಕಿರುಹೊತ್ತಿಗೆ ಪ್ರಕಟಿಸಿ ರಾಜ್ಯಾದ್ಯಂತ ಪ್ರಚಾರವೂ ಮಾಡುತ್ತಿದೆ.

ಮೈದಾ ಇತಿಹಾಸ, ಮೈದಾ ಎಂದರೇನು, ಬೇಕರಿಯಲ್ಲಿ ಇದರಿಂದ ತಯಾರಿಸಲ್ಪಡುವ ತಿನಿಸುಗಳೇನು, ಇದರಲ್ಲಿ ಸೇರಿಸುವ ಕೃತಕ ರಾಸಾಯನಿಕಗಳು, ಬಣ್ಣಗಳು ಯಾವುವು, ಇದರಿಂದ ಆಗುವ ಆರೋಗ್ಯ ಸಮಸ್ಯೆಗಳೇನು ಮತ್ತು ನಾವು ಏನು ಮಾಡಬೇಕು ಎನ್ನುವ ವಿಚಾರಗಳು ಸಂಕ್ಷಿಪ್ತವಾಗಿ ನೀಡಲಾಗಿದೆ.

harmful_maida_food_1

ಮೈದಾ ಇತಿಹಾಸ :
ಗೋಧಿಯಿಂದ ಉಮಿ ಮತ್ತು ತೌಡು ಸೇರಿದಂತೆ ಎಲ್ಲಾ ನಾರಿನ ಅಂಶಗಳೂ ತೆಗೆದು, ಅದರಲ್ಲಿರುವ ತರಿ ಮತ್ತು ಪುಡಿಯನ್ನು ಬೇರ್ಪಡಿಸಲಾಗುತ್ತದೆ. ಇವೆರಡನ್ನೂ ‘ಬೆನ್ಸೋಯಿಕ್ ಪೆರೋಕ್ಸೈಡ್’ ಬಳಸಿ ಬ್ಲೀಚ್ ಮಾಡಲಾಗುತ್ತದೆ. ತರಿಯ ‘ರವ’ ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಬರುತ್ತದೆ. ಪುಡಿಯನ್ನು ‘ಅಲೋಕ್ಸನ್’ ಎಂಬ ಕೆಮಿಕಲ್ ಸೇರಿಸಿ ಮೃದು ಮಾಡಿದ ಮೇಲೆ ಅದು ಮೈದಾ ಆಗುತ್ತದೆ.

1949 ರಲ್ಲಿ ಇಂಗ್ಲೆಂಡಿನಲ್ಲಿ ಮೈದಾವನ್ನು ನಿಷೇಧಿಸಲಾಗಿತ್ತು. ಅಮೇರಿಕ ಮತ್ತು ಯುರೋಪಿನಲ್ಲಿ ಟನ್‍ಗಟ್ಟಲೆ ಮೈದಾ ನದೀ ದಂಡೆಗಳಲ್ಲಿ ಮತ್ತು ಖಾಲಿ ಜಾಗಗಳಲ್ಲಿ ತಂದು ಸುರಿದ ನಂತರ ಪರಿಸರ ಸಮಸ್ಯೆ ಶುರುವಾದಾಗ ಅದಕ್ಕೆ ಪರಿಹಾರ ಏನು ಎಂದು ಯುರೋಪಿ ಯನ್ನ ರು  ಯೋಚಿಸಿದರು. ನದೀ ದಡದಲ್ಲಿ ಅಲೆಯುತ್ತಿರುವ ಹಸುಗಳ ಮೈಮೇಲೆ ಮೈದಾ ಅಂಟಿಕೊಂಡಿರುವುದನ್ನು ನೋಡಿದ ಬುದ್ಧಿವಂತ ಬಿಳಿಯ ಸಾಹೇಬ ಅದರಿಂದ ‘ಕೇರ್’ ಎಂಬ ಹೆಸರಿನಲ್ಲಿ ಆಹಾರ ಪದಾರ್ಥಗಳನ್ನು ಮೂರನೇ ಜಗತ್ತಿನ ದೇಶಗಳಿಗೆ ಕಳುಹಿಸಿದಾಗ ಭಾರತಕ್ಕೂ ಇದನ್ನು ಕಳುಹಿಸಲಾಯಿತು. ಚಳುವಳಿಗಾರರು ಭಿತ್ತಿ ಚಿತ್ರಗಳನ್ನು ಅಂಟಿಸಲು ಮೈದಾವನ್ನು ಬಳಸುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಚಲನಚಿತ್ರದ ಪೋಸ್ಟರುಗಳನ್ನು ಅಂಟಿಸಲು ಮೈದಾವನ್ನೇ ಬಳಸಲಾಗುತ್ತಿದೆ.

ಮೈದಾದಿಂದ ತಯಾರಿಸುವ ಆಹಾರ ಪದಾರ್ಥಗಳು & ಅದರಿಂದಾಗುವ ಆರೋಗ್ಯ ಸಮಸ್ಯೆಗಳು :
ಈಗ ಮೈದಾವನ್ನು ಬಳಸಿ ಕೇಕ್, ಬ್ರೆಡ್, ಬನ್, ರಸ್ಕ್, ನೂಡಲ್ಸ್, ಸೇಮಿಯಾ, ಬಿಸ್ಕತ್, ಪರೋಟ, ಪೂರಿ, ಚಪಾತಿ, ನಾನ್, ತಂದೂರಿ, ರೋಟಿ ಇವೆಲ್ಲವನ್ನೂ ತಯಾರಿಸಲಾಗುತ್ತದೆ. ಮೈದಾ ತಿನ್ನುವವರಿಗೆ ಸಕ್ಕರೆ ಖಾಯಿಲೆ ಕಟ್ಟಿಟ್ಟ ಬುತ್ತಿ. ಏಕೆಂದರೆ, ಮೈದಾದಲ್ಲಿ ಬಳಸುವ ಅಲಾಕ್ಸ್‍ನ್ ಎಂಬ ಔಷಧಿಯು ಪ್ಯಾಂಕ್ರಿಯಾಸ್‍ನಲ್ಲಿರುವ ಬೀಟಾ ಜೀವಕೋಶಗಳನ್ನು ನಾಶ ಮಾಡಿ, ಇನ್‍ಸುಲಿನ್ ಕಡಿಮೆಯಾಗಲು ಕಾರಣವಾಗುತ್ತದೆ.

ಅಂಗಡಿಗಳಲ್ಲಿ ಮಾರುತ್ತಿರುವ ಎಲ್ಲಾ ಹಿಟ್ಟುಗಳಲ್ಲೂ ಅಲಾಕ್ಸನ್ ಬಳಸಲಾಗುತ್ತದೆ. ನಾವು ಮಾಡುವ ಹಿಟ್ಟು ಇಷ್ಟು ಮೃದುವಾಗಲು ಸಾಧ್ಯವಿಲ್ಲ.

ಇನ್ನು ಬೇಕರಿಯಲ್ಲಿ ಮೈದಾ ಬಳಸುವಾಗ ಉಪಯೋಗಿಸುವ ಪದಾರ್ಥಗಳ ಬಗ್ಗೆ ತಿಳಿದರೆ ಗಾಬರಿಯಾಗುತ್ತದೆ. ಕೃತಕ ಬಣ್ಣಗಳು, ಮಿನರಲ್ ಆಯಿಲ್, ಟೇಸ್ಟ್ ಮೇಕರುಗಳು, ಪ್ರಿಸರ್ವೇಟೀವ್‍ಗಳು, ಡಾಲ್ಡ, ಸಕ್ಕರೆ, ಸಾಕರಿನ್, ಅಜಿನೋಮೋಟೋ ಇವೆಲ್ಲವನ್ನೂ ಸೇರಿಸಲಾಗುತ್ತದೆ. ಬಣ್ಣವಾಗಿ ಬಳಸುವುದೆಲ್ಲವೂ ಪೆಟ್ರೋಲಿಯಂ ಉಪ ಉತ್ಪನ್ನಗಳೇ, ಈ ಬಣ್ಣಗಳು ಅರ್ಬುಧಕ್ಕೆ (ಕ್ಯಾನ್ಸರ್‍ಗೆ) ಕಾರಣವಾಗುತ್ತವೆ. ಬೇಕರಿಗಳಲ್ಲಿ ಎಣ್ಣೆಗೆ ಬದಲು ಬಳಸುವುದು ಮಿನರಲ್ ಆಯಿಲ್ ಎಂಬ ಲಿಕ್ವಿಡ್ ಪಾರಫೀನ್ ಆಗಿದೆ.

ಏನಿದು ಲಿಕ್ವಿಡ್ ಪಾರಫೀನ್? ಪೆಟ್ರೋಲಿಯಂನಿಂದ ಡೀಸಲ್, ಪೆಟ್ರೋಲ್ ಮತ್ತು ಸೀಮೆಎಣ್ಣೆ ತೆಗೆದ ನಂತರದ ಉಳಿಕೆಯಿಂದ ಇದನ್ನು ಉತ್ಪಾದಿಸಲಾಗುತ್ತದೆ. ಇದನ್ನು ವಾಸನೆ ಇಲ್ಲದ ಸೀಮೆಎಣ್ಣೆ ಎಂದು ಕರೆಯಬಹುದು. ಇದರಲ್ಲಿ ಹುರಿಯುವ ಪದಾರ್ಥಗಳು ಬೇಗ ಹಾಳಾಗುವುದಿಲ್ಲ. ಇದು ದೇಹದ ತೂಕ ಹೆಚ್ಚಿಸಿ ಜೀವಕೋಶಗಳ ನಾಶಕ್ಕೆ ದಾರಿ ಮಾಡುತ್ತವೆ. ಇದಲ್ಲದೆ, ಪದೇ ಪದೇ ತಿನ್ನಬೇಕೆನ್ನುವ ಆಸೆಯನ್ನೂ ಹುಟ್ಟಿಸುತ್ತದೆ.

ತಿನಿಸುಗಳು ಹಾಳಾಗದಿರಲು ಬಳಸುವ ಪ್ರಿಸರ್ವೇಟೀವ್‍ಗಳು ರಾಸಾಯನಿಕಗಳೇ, ತಿನಿಸುಗಳಲ್ಲಿ ಬೆಳೆಯುವ ಬ್ಯಾಕ್ಟೀರಿಯಾಗಳನ್ನು ಇದು ನಾಶ ಮಾಡುತ್ತದೆ. ಇದು ವಿಷವಲ್ಲದೇ ಬೇರೇನಲ್ಲ. ಇದಲ್ಲದೆ, ಇದು ಅಂಟಿಬಯೋಟಿಕ್ ಗುಂಪಿಗೆ ಸೇರಿದ್ದು, ದೇಹದಲ್ಲಿ ಅನೇಕ ಸಮಸ್ಯೆಗಳನ್ನು ಉಂಟು ಮಾಡುವುದರಲ್ಲಿ ಇದು ಸಹಕಾರಿಯಾಗುತ್ತದೆ. ಗಾಂಧೀಜಿ ಬಿಳಿವಿಷ ಎಂದು ಕರೆದ ಸಕ್ಕರೆ ಬೇಕರಿಗಳಲ್ಲಿ ಬಳಸುವ ಅಗತ್ಯ ವಸ್ತು.

ಕಬ್ಬಿನ ಹಾಲಿನಲ್ಲಿರುವ ಕ್ಯಾಲ್ಸಿಯಂ, ಫಾಸ್ಫರಸ್ ಮತ್ತು ಇತರ ಮಿನರಲ್‍ಗಳನ್ನು ತೆಗೆದು ಬಿಳಿ ಬಣ್ಣಮಾಡಿ 23 ರಾಸಾಯನಿಕಗಳನ್ನು ಬಳಸಿ ಕ್ರಿಸ್ಟಲ್ ರೂಪದಲ್ಲಿ ಹೊರತರುವುದು ಸಕ್ಕರೆ. ಇದು ನಮ್ಮ ದೇಹದಲ್ಲಿ ಪಚನವಾಗಬೇಕಾದರೆ, ಕ್ಯಾಲ್ಸಿಯಂ, ಫಾಸ್ಪರಸ್ ಮುಂತಾದ ಅಂಶಗಳು ಬೇಕಾಗುತ್ತವೆ.

ಆಗ ನಮ್ಮ ದೇಹದ ಹಲ್ಲು, ಮೂಳೆಯಿಂದ ಅದನ್ನು ಎಳೆದು ಪಚನ ಮಾಡಬೇಕಾಗುತ್ತದೆ. ಇಷ್ಟೆಲ್ಲ ವಿಚಾರಗಳು ಈ ಲೇಖನದಲ್ಲಿ ಜನರನ್ನು ಎಚ್ಚರಿಸುತ್ತದೆ. ಮೈದಾವನ್ನು ತಿರಸ್ಕರಿಸಿ, ಪ್ರತಿಯೊಬ್ಬರೂ ಜನಜಾಗೃತರಾಗಬೇಕು. ನಾವು ಏನು ತಿನ್ನುತ್ತಿದ್ದೇವೆ ಎನ್ನುವುದಕ್ಕಿಂತ ಮುಖ್ಯವಾದದ್ದು ನಾವು ಏನು ತಿನ್ನುತ್ತಿಲ್ಲ ಎನ್ನುವುದಾಗಿದೆ. ಒಬ್ಬ ವ್ಯಕ್ತಿ ಆಹಾರ ತೆಗೆದುಕೊಳ್ಳುವುದು ದೇಹದ ರಕ್ಷಣೆಗಾಗಿಯೇ ಹೊರತು ನಾಲಿಗೆಯ ಆನಂದಕ್ಕಾಗಿ ಅಲ್ಲ. ರುಚಿಯ ಮೇಲಿನ ಸ್ಪಷ್ಟವಾದ ನಿಯಂತ್ರಣದಿಂದ ಮಾತ್ರ ಸರಿಯಾದ ಆರೋಗ್ಯ ಕಾಪಾಡಲು ಸಾಧ್ಯ.

Comments are closed.