ಯಾರಿಗೆ ತಾನೆ ಕಾಯಿಲೆ ಬೀಳಲು ಇಷ್ಟ. ಕಾಯಿಲೆ ಎಂಬ ಪದವೂ ಹತ್ತಿರ ಸುಳಿಯಬಾರದು ಎಂಬುದು ಎಲ್ಲರ ಬಯಕೆ. ಕಾಯಿಲೆಯಿಂದ ಆಗುವ ಅನಾನುಕೂಲ ನೂರಾರು.ಕಾಯಿಲೆ ಬಂದು ಚಿಕಿತ್ಸೆ ತೆಗೆದುಕೊಳ್ಳುವುದಕ್ಕಿಂತ ಕಾಯಿಲೆ ಬರದಂತೆ ತಡೆಯುವುದೇ ಸರಿಯಾದ ತೀರ್ಮಾನ. ಕಾಯಿಲೆ ಬರದಂತೆ ನೋಡಿಕೊಳ್ಳಬೇಕಾದರೆ ದೇಹದ ಮತ್ತು ಹಲ್ಲಿನ ಶುದ್ಧತೆ ಕಾಪಾಡಿಕೊಳ್ಳಬೇಕು.
ಕಾಯಿಲೆ ಬರದಂತೆ ತಡೆಯಲು ಇನ್ನೊಬ್ಬರಿಗೆ ಹರಡಬಾರದು ಎನ್ನುವುದಾದರೆ ಕೈಗಳನ್ನು ಚೆನ್ನಾಗಿ ತೊಳೆಯಬೇಕು. ಸಾಮಾನ್ಯವಾಗಿ ಕೈಗಳಲ್ಲಿ ರೋಗಾಣುಗಳಿರುತ್ತವೆ. ಇದು ಕಣ್ಣಿಗೆ ಕಾಣುವುದಿಲ್ಲ, ಹಾಗಾಗಿ ಕೈತೊಳೆಯಿರಿ. ಮೂಗು ಅಥವಾ ಕಣ್ಣುಗಳನ್ನು ಮುಟ್ಟುವುದಾದರೆ ಸುಲಭವಾಗಿ ಶೀತ, ನೆಗಡಿ, ಜ್ವರ ಬರುತ್ತದೆ. ಹಾಗಾಗಿ ಹೊರಗೆ ಹೋಗಿ ಬಂದ ನಂತರ ಆಗಾಗ್ಗೆ ಕೈ ಕಾಲು ತೊಳೆಯುವುದು ಒಳ್ಳೆಯದು.
ಕುಡಿಯುವ ಶುದ್ಧ ನೀರು ಬಳಸುವುದು ಒಳ್ಳೆಯದು. ಶುದ್ಧ ನೀರು ಕುಡಿಯುವುದರಿಂದ ಬಹಳಷ್ಟು ರೋಗಗಳನ್ನು ತಡೆಯಬಹುದು. ಪೌಷ್ಠಿಕ ಆಹಾರ ಸೇವನೆಯಿಂದ ಸಹ ರೋಗ ಬಾರದಂತೆ ತಡೆಯಬಹುದು. ಹಣ್ಣು, ತರಕಾರಿ ಸೇರಿದಂತೆ ಉತ್ತಮ ಪೌಷ್ಠಿಕಾಂಶವುಳ್ಳ ಆಹಾರ ಸೇವನೆ ದೇಹದ ಆರೋಗ್ಯ ಕಾಪಾಡಲು ನೆರವಾಗುತ್ತದೆ.
ಸಕ್ಕರೆ ಹಾಗೂ ಕೊಬ್ಬು ಹೆಚ್ಚಾಗಿರುವ ಆಹಾರ ಸೇವನೆಯಿಂದ ಆದಷ್ಟು ದೂರ ಇರುವುದು ಒಳ್ಳೆಯದು. ಉಪ್ಪಿನಾಂಶ ಹೆಚ್ಚಿರುವ ಆಹಾರ ಪದಾರ್ಥದ ಸೇವನೆ ಕಡಿಮೆ ಸಹ ಆರೋಗ್ಯಕ್ಕೆ ಒಳ್ಳೆಯದು. ಆದಷ್ಟು ದೇಹಕ್ಕೆ ಎಷ್ಟು ಬೇಕೋ ಅಷ್ಟು ಆಹಾರ ತಿನ್ನಬೇಕು ಅತಿಯಾಗಿ ಆಹಾರ ತಿನ್ನುವುದು ಒಳ್ಳೆಯದಲ್ಲ. ನಿತ್ಯ ಲಘು ವ್ಯಾಯಾಮ ಆರೋಗ್ಯಕ್ಕೆ ಒಳ್ಳೆಯದು. ನಡಿಗೆ ಮತ್ತಿತರ ಲಘು ವ್ಯಾಯಾಮದಿಂದ ದೇಹ ಚುರುಕಾಗುತ್ತದೆ. ಮೂಳೆ ಮತ್ತು ಮಾಂಸಖಂಡಗಳು ಗಟ್ಟಿಯಾಗುತ್ತದೆ.
ನಿತ್ಯ ವ್ಯಾಯಾಮ, ಇತಿ-ಮಿತಿಯ ಆಹಾರ ಸೇವನೆ ಜತೆಗೆ ದೇಹಕ್ಕೆ ಬೇಕಾಗುವಷ್ಟು ನಿದ್ರೆ ಮಾಡುವ ಮೂಲಕ ದೇಹದ ಆರೋಗ್ಯ ಕಾಪಾಡಬಹುದು.