
ಅಡಿಕೆ ನಿಮ್ಗೆ ನಂಬಿಕೆ ಬರಲಿಕ್ಕಿಲ್ಲ. ಆದ್ರೆ ಇದು ಸತ್ಯ. ಒಂದೆರಡು ಒಣ ಅಡಿಕೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಅದ್ರ ಡಿಕಾಕ್ಷನ್ ಸೇವಿಸಿ.ನಂತರ ನೀರನ್ನು ತಣಿಸಿ ದಿನಕ್ಕೆ ಎರಡು ಬಾರಿ ಸೇವಿಸಿ. ಇದು ಕೂಡ ರಕ್ತಸ್ರಾವ ಕಡಿಮೆಗೊಳಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಹೀಗೆ ಹೆಚ್ಚಿನ ಔಷಧಿಗಳು ಮನೆಯಲ್ಲೇ ಲಭ್ಯವಿರುತ್ತೆ. ಆದ್ರೆ ನಮಗದು ತಿಳಿದಿರುವುದೇ ಇಲ್ಲ.
ಸಮಸ್ಯೆಯನ್ನು ಸಮಸ್ಯೆಯಾಗಿಯೇ ಪರಿಗಣಿಸಿ ನೋವು ತಿನ್ನುವುದಷ್ಟನ್ನೇ ಕಲಿತಿರುತ್ತೇವೆ. ಆದ್ರೆ ಸುಲಭದಲ್ಲಿ ಸಿಗುವ ಪರಿಹಾರದ ಕಡೆಗೆ ಗಮನ ಹರಿಸುವುದೇ ಇಲ್ಲ. ಒಬ್ಬೊಬ್ಬ ಮಹಿಳೆಯ ದೇಹ ಒಂದೊಂದು ರೀತಿ ಇರುತ್ತೆ.
ಈ ಮೇಲಿನ ಎಲ್ಲಾ ಔಷಧಿಗಳು ಎಲ್ಲರಿಗೂ ಆಗಬೇಕೆಂದೇನೂ ಇಲ್ಲ. ಕೆಲವರಲ್ಲಿ ಚೆನ್ನಾಗಿ ಕೆಲಸ ಮಾಡ್ಬಹುದು. ಇನ್ನು ಕೆಲವರಿಗೆ ಪರಿಣಾಮ ಬೀರದೇ ಇರಬಹುದು. ಸಹಿಸಲು ಅಸಾಧ್ಯವಾದ ನೋವಿದ್ದು ಅತಿಯಾಗಿ ರಕ್ತಸ್ರಾವವಾಗ್ತಾ ಇದ್ದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಒಮ್ಮೆ ಪರಿಶೀಲಿಸಿಕೊಳ್ಳೋದು ಉತ್ತಮ.