ರಾಷ್ಟ್ರೀಯ

ದಾವೂದ್ ಇಬ್ರಾಹಿಂ ಖಾರು ಖರೀದಿಸಿದ ಹಿಂದೂ ಮಹಾಸಭಾ ನಾಯಕ

Pinterest LinkedIn Tumblr

dawood-ibrahim

ಮುಂಬೈ: 3.2 ಲಕ್ಷ ರುಪಾಯಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕಾರು ಖರೀದಿಸಿರುವ ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಅವರು, ಅದನ್ನು ಸುಟ್ಟು ಹಾಕುವುದಾಗಿ ಬುಧವಾರ ಹೇಳಿದ್ದಾರೆ.

ದಕ್ಷಿಣ ಮುಂಬೈನ ಹೋಟೆಲ್‌ವೊಂದರ ಬಳಿ ಭೂಗತ ಪಾತಕಿಯ ಕಾರನ್ನು ಹರಾಜು ಹಾಕಲಾಗಿತ್ತು. ಹರಾಜಿನಲ್ಲಿ ಭಾಗವಹಿಸಿದ್ದ ಚಕ್ರಪಾಣಿ, ಹುಂಡೈ ಅಸೆಂಟ್(ಎಂಎಚ್ 04-ಎಎಕ್ಸ್- 3676) ಕಾರನ್ನು ಖರೀದಿಸಿದ್ದು, ಅದನ್ನು ಸುಟ್ಟು ಹಾಕುವುದಾಗಿ ಹೇಳಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಘಟಕ್‌ಪರ್ ಸರ್ಕಾರಿ ಸಂಸ್ಥೆಯ ಬಳಿ ನಿಂತಿದ್ದ ಹಸಿರು ಬಣ್ಣದ ಕಾರು ಸಂಪೂರ್ಣ ಹಾಳಾಗಿದ್ದು, ನಾಲ್ಕು ಟೈರ್‌ಗಳು ಬರ್ಸ್ಟ್ ಆಗಿವೆ.

Write A Comment