UAE

ಯುಎಇ ಬಂಟ್ಸ್ ನ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರಿಗೆ ಯುಎಇ ಬಂಟರ ವತಿಯಿಂದ ಅದ್ದೂರಿ ಸನ್ಮಾನ

Pinterest LinkedIn Tumblr

ದುಬೈ: ಮರಳು ಭೂಮಿಯಲ್ಲಿ ಕಳೆದ 47 ವರ್ಷದಿಂದ ಯುಎಇ ಬಂಟ್ಸ್ ನ ನಾಯಕನಾಗಿ ನಡೆಸಿಕೊಂಡು ಬರುತ್ತಿರುವ ಸರ್ವೋತ್ತಮ ಶೆಟ್ಟಿಯವರನ್ನು ಗಲ್ಫ್ ಬಂಟೋತ್ಸವ-2024 ಕಾರ್ಯಕ್ರಮದಲ್ಲಿ ವಿನೂತನ ರೀತಿಯಲ್ಲಿ ಸನ್ಮಾನಿಸಲಾಯಿತು.

ಸರ್ವೋತ್ತಮ ಶೆಟ್ಟಿ ದಂಪತಿಗಳನ್ನು ಬಂಟ್ಸ್ ನ ಸಂಘಟನ ಸಮಿತಿ ಹಾಗೂ ಸಲಹಾ ಸಮಿತಿ ಮತ್ತು ಕಾರ್ಯಕರ್ತರು ಸೇರಿ ಮಾಡಿದ ಅದ್ದೂರಿಯ ಸನ್ಮಾನದಲ್ಲಿ ಸಮಿತಿಯ ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು.

ವಿನೂತನ ಶೈಲಿಯಲ್ಲಿ ಸನ್ಮಾನ: ಸರ್ವೋತ್ತಮ ಶೆಟ್ಟಿಯವರ ಸನ್ಮಾನದ ಪೇಟ,ಶಾಲು,ಸ್ಮರಣಿಕೆ,ಗೆಂದಳೆ ಸೀಯಳ,ಅಡಕೆ,ಬಾಳೆ ಗೊಣೆ,ತರಕಾರಿ ಬುಟ್ಟಿ,ಹಣ್ಣು ಹಂಪಲು,ಅಕ್ಕಿ ಮುಡಿ,ಭತ್ತ ಮುಡಿ,ಹಿಂಗಾರ,ಮಲ್ಲಿಗೆ ಹಾರ, ಬಣ್ಣದ ಕೊಡೆ,ಚೆಂಡೆ ವಾಲಗದೊಂದಿಗೆ ವೇದಿಕೆಗೆ ಮೆರವಣಿಗೆಯ ಮೂಲಕ ತರಲಾಯಿತು.

ವೇದಿಕೆಯಲ್ಲಿದ್ದ ಯುಎಇ ಬಂಟ್ಸ್ ನ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ,ಕಾರ್ಯದರ್ಶಿ ರವಿರಾಜ್ ಶೆಟ್ಟಿ, ಸಮಿತಿಯ ಪೋಷಕರು,ಸಂಘಟನ ಸಮಿತಿಯ ಪದಾಧಿಕಾರಿಗಳು ವ್ಯವಸ್ಥಿತವಾಗಿ ಒಂದೊಂದು ವಸ್ತುಗಳನ್ನು ಸರ್ವೋತ್ತಮ ಶೆಟ್ಟಿ ಮತ್ತು ಶ್ರೀಮತಿ ಉಷ ಶೆಟ್ಟಿಯವರಿಗೆ ಅರ್ಪಿಸಿ ಗೌರವ ಸಲ್ಲಿಸಿ ಸನ್ಮಾನಿಸಲಾಯಿತು.ಶ್ರೀಮತಿ ಶಶಿ ರವಿರಾಜ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು,ನಿತೇಶ್ ಶೆಟ್ಟಿ ಎಕ್ಕಾರ್ ಮತ್ತು ನಮ್ಮ ಕುಡ್ಲ ಚಾನೆಲ್ ನ ವಾರ್ತಾ ವಾಚಕಿ ಪ್ರೀಯ ಹರೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು ಕಾರ್ಯಕ್ರಮ ನಿರೂಪಿಸಿದರು.

ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)
ಚಿತ್ರ: ಅಶೋಕ್ ಬೆಳ್ಮಣ್

Comments are closed.