UAE

ದುಬೈನಲ್ಲಿ ಮೊಹಮ್ಮದ್ ಆಸೀಫ್ ಕುಂದಾಪುರ ಅವರಿಗೆ ವಿಶ್ವ ಮಾನ್ಯ ಪ್ರಶಸ್ತಿ-2024 ಪ್ರದಾನ

Pinterest LinkedIn Tumblr

ಕುಂದಾಪುರ: ಸೆಂಟ್ ಸಾಂಸ್ಕೃತಿಕ ಸಂಸ್ಥೆ ದುಬೈ ಮತ್ತು ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ (ಇಂಡಿ) ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 17 ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮದಲ್ಲಿ ಸಮಾಜ ಸೇವೆ,ಶಿಕ್ಷಣ,ಬಡ ಹೆಣ್ಣು ಮಕ್ಕಳ ಉಚಿತ ಮದುವೆ ಮುಂತಾದ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಕುಂದಾಪುರದ ಮೊಹಮ್ಮದ್ ಆಸೀಫ್ ಅವರಿಗೆ ಇದೇ ಫೆಬ್ರುವರಿ 18 ರಂದು ಭಾನುವಾರ ಸಂಜೆ ದುಬೈನ ಅಲ್ ಕುಸಿಸ್‌ನಲ್ಲಿರುವ ಫಾರ್ಚೂನ್ ಪ್ಲಾಝಾ ಸಭಾಂಗಣದಲ್ಲಿ 2024 ನೇ ಸಾಲಿನ ವಿಶ್ವ ಮಾನ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಲೆಫ್ಟಿನೆಂಟ್ ಜನರಲ್ ಅಂಬ್ಯಾಸಿಡರ್ ಡಾ. ಡೇವಿಡ್ ಫ್ರ್ಯಾಂಕ್ ಫೆನಾಂಡೀಸ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೊತ್ತಮ ಶೆಟ್ಟಿ, ಸೆಂಟ್ ಸಾಂಸ್ಕೃತಿಕ ಸಂಘ ಯು.ಎ.ಇ ಯ ಅಧ್ಯಕ್ಷ‌ ಶೋಧನ್ ಪ್ರಸಾದ್ ಅತ್ತಾವರ, ಡಬ್ಲ್ಯು.ಕೆ.ಸಿ.ಸಿ ಅಧ್ಯಕ್ಷ ಕೆ.ಪಿ.ಮಂಜುನಾಥ ಸಾಗರ್, ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಮೊದಲ ದಿನದ ಕಾರ್ಯಕ್ರಮ ಸೌದಿ ಅರೇಬಿಯಾದ ದಮಾಮ್ ನಲ್ಲಿ ಫೆಬ್ರುವರಿ 8 ರಂದು ಅತ್ಯಂತ ಸಂಭ್ರಮದಿಂದ ಯಶಸ್ವಿಯಾಗಿ ನಡೆದಿತ್ತು. ಕರ್ನಾಟಕದ ಕಲೆ,ಸಾಹಿತ್ಯ, ಸಂಸ್ಕೃತಿ,ಬಾಷೆಯನ್ನು ಅನಿವಾಸಿ ಕನ್ನಡಿಗರಲ್ಲಿ ಉಳಿಸಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಬಂದ ಸಾಹಿತಿಗಳು ಕಲಾವಿದರಿಂದ ಮತ್ತು ದುಬೈನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮೀತಿಯು
ಕಳೆದ 20 ವರ್ಷಗಳಿಂದ ಹಲವು ದೇಶಗಳಲ್ಲಿ ಯಶಸ್ವಿಯಾಗಿ ಕನ್ನಡಿಗರನ್ನ ಜೋಡಿಸುವ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿಕೊಂಡು
ಬರುತ್ತಿದೆ.

Comments are closed.