UAE

ದುಬಾಯಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ವೈಭವ

Pinterest LinkedIn Tumblr

ದುಬೈ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಸನಾತನ ಧರ್ಮಿಯ, ಕರ್ನಾಟಕ ಪರ ವಿವಿಧ ಜಾತಿ ಸಮುದಾಯದ ಸಂಘಟನೆಗಳು ಒಗ್ಗೂಡಿ, ದುಬಾಯಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಆಶ್ರಯದಲ್ಲಿ 2024ನೇ ಜನವರಿ 28ನೇ ತಾರೀಕಿನಂದು ಸಂಜೆ 4.00 ಗಂಟೆಯಿಂದ ಜೆ.ಎಸ್.ಎಸ್. ಪ್ರೆಂವೆಟ್ ಸ್ಕೂಲ್ ದುಬಾಯಿಯಲ್ಲಿ ಶ್ರೀ ರಘು ಭಟ್ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಕಲಶ ಪ್ರತಿಷ್ಠಾಪನೆಯೊಂದಿಗೆ ಪೂಜೆ ಪೂಜಾ ವಿಧಿ ವಿಧಾನಗಳು ನೆರವೇರಿತು.

ಭಕ್ತಾದಿಗಳ ಪರವಾಗಿ ಮಹೇಶ್ ಅಮೀನ್ ಮತ್ತು ಸ್ನೇಹ ಮಹೇಶ್, ಸಮಿತಿಯ ಪರವಾಗಿ ವಾಸು ಶೆಟ್ಟಿ ಹಾಗೂ ಸೀಮ ವಾಸು ಶೆಟ್ಟಿ ಸಮಸ್ಥ ಭಕ್ತಾಧಿಗಳ ಪರವಾಗಿ ಪೂಜೆಯಲ್ಲಿ ಕುಳಿತು ಪೂಜಾ ಕಾರ್ಯದಲ್ಲಿ ಭಾಗಿಯಾದರು.

ಮೊಗವೀರ್ಸ್ ಭಜನಾ ತಂಡ ಯು.ಎ.ಇ. ಮತ್ತು ಶ್ರೀ ರಾಜಾರಾಜೇಶ್ವರಿ ಭಜನಾ ತಂಡ ದುಬಾಯಿ ಇವರು ಭಜನಾ ಸೇವೆಯನ್ನು ನಡೆಸಿಕೊಟ್ಟರು. ವರಮಹಾಲಕ್ಷ್ಮಿ ಸಮಿತಿಯ ಸುಮಂಗಲೆಯರು ದೀಪಾ ಭಜನಾ ನೃತ್ಯ ಸೇವೆಯನು ಸಲ್ಲಿಸಿದರು.

ಸುವರ್ಣ ಸತೀಶ್ ರವರ ನಾಯಕತ್ವದಲ್ಲಿ ಸುಂಗಲೆಯರು ವಿವಿಧ ವಿಭಾಗಗಳಲ್ಲಿ ತಮ್ಮ ಸೇವೆಯನ್ನು ನೀಡಿದರು.
ಮಹಾಮಂಗಳಾರತಿ ಸಮಯದಲ್ಲಿ ಶಂಖನಾದ ತಂಡದ 14 ಮಂದಿ ಸದಸ್ಯರು ಬಾಲಕೃಷ್ಣ ಸಾಲಿಯಾನ್ ನೇತ್ರತ್ವದಲ್ಲಿ ಶಂಖನಾದ ಸೇವೆಯನ್ನು ಸಲ್ಲಿಸಿದರು.

ಸುಮಂಗಲಿ ಪೂಜೆ, ಬ್ರಾಹ್ಮಣ ಅರಾಧನೆ ನಂತರ ಭಕ್ತಾಧಿಗಳು ತೀರ್ಥ ಪ್ರಸಾದ, ಮತ್ತು ಮಹಾ ಪ್ರಸಾದ ಸ್ವೀಕರಿಸಿದವರು ಅರಬ್ ಸಂಯುಕ್ತ ಸಂಸ್ಥಾನದ ವಿವಿಧ ಭಾಗಗಳಿಂದ ಆಗಮಿಸಿದ್ದರು.

ಪೂಜಾ ಕಾರ್ಯಕ್ಕೆ ಸಹಾಯ ಹಸ್ತ ದೇಣಿಗೆಯನ್ನು ನೀಡಿರುವ ದಾನಿಗಳು, ಭಜನಾ ತಂಡದವರನ್ನು, ಹಾಗೂ ಆಕರ್ಷಕ ಪೂಜಾ ಮಂಟಪ ಅಲಂಕಾರವನ್ನು ಮಾಡಿದ ರಾಜೇಶ್ ಕುತ್ತಾರ್ ತಂಡದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪೂಜಾ ಕಾರ್ಯಕ್ಕೆ ಸಹಾಯ ಹಸ್ತ ದೇಣಿಗೆಯನ್ನು ನೀಡಿರುವ ದಾನಿಗಳು, ಭಜನಾ ತಂಡದವರನ್ನು, ಹಾಗೂ ಆಕರ್ಷಕ ಪೂಜಾ ಮಂಟಪ ಅಲಂಕಾರವನ್ನು ಮಾಡಿದ ಶ್ರೀ ರಾಜೇಶ್ ಕುತ್ತಾರ್ ತಂಡದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯಲ್ಲಿ ಪ್ರಮುಖರಾದ ಶಾಂತಾರಾಂ ಆಚಾರ್, ಬಿ. ಕೆ. ಗಣೇಶ್ ರೈ, ಸತೀಶ್ ಪೂಜಾರಿ, ವಿಶ್ವನಾಥ ಶೆಟ್ಟಿ, ಬಾಲ ಕೃಷ್ಣ ಸಾಲಿಯಾನ್, ಜೀವನ್ ಕುಕ್ಯಾನ್, ವಾಸು ಶೆಟ್ಟಿ, ಪದ್ಮರಾಜ್ ಎಕ್ಕಾರ್, ಧನಂಜಯ್ ಶೆಟ್ಟಿಗಾರ್, ಸಂದೇಶ್ ಜೈನ್, ಸುಧರ್ಶನ್ ಹೆಗ್ಡೆ, ದಿನೇಶ್, ಸುಗಂಧರಾಜ್ ಬೇಕಲ್, ರಮೇಶ್, ಶ್ರೀಮತಿ ದೀಪಾ ಜಗನ್ನಾಥ್ ಮತ್ತು ಜಸ್ವಿ ವಿವೇಕ್ ಇವರುಗಳ ಬಹು ದಿನದ ಪೂರ್ವ ತಯಾರಿಯೊಂದಿಗೆ ಪೂಜಾ ಸಭಾಂಗಣ ಭಕ್ತರು ಪೂರ್ತಿಯಾಗಿ ತುಂಬಿ ಅತ್ಯಂತ ಶಿಸ್ತುಬದ್ಧವಾಗಿ ನಡೆಯಿತು.

ದುಬಾಯಿಯಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಧಾರ್ಮಿಕ ಶ್ರದ್ಧೆ ಹಾಗೂ ಭಕ್ತಿ ಭಾವನೆಗಳಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಸಾಕ್ಷಿಯಾಯಿತು.

(ವರದಿ- ಬಿ. ಕೆ. ಗಣೇಶ್ ರೈ ದುಬಾಯಿ)

Comments are closed.