UAE

ದುಬೈನಲ್ಲಿ ಜ.7 ರಂದು ‘ಕಾಟೇರ’ ಪ್ರೀಮಿಯರ್ ಶೋ; ‘ಡಿ ಬಾಸ್’ ಜೊತೆ ಸಿನಿಮಾ ನೋಡಲು ಅಭಿಮಾನಿಗಳ ಕಾತರ..!

Pinterest LinkedIn Tumblr

ದುಬೈ: ಜನವರಿ 7 ರಂದು ದುಬೈನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ಕಾಟೇರ ಚಿತ್ರದ ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಮತ್ತು ಪೊಸ್ಟರ್ ಬಿಡುಗಡೆ ಕಾರ್ಯಕ್ರಮ ಇತ್ತೀಚಿಗೆ ನಗರದ ಫಾರ್ಚೂನ್ ಆಟ್ರಿಯಂ‌ಸಭಾಂಗಣದಲ್ಲಿ ಜರುಗಿತು. ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಚಿತ್ರದ ಟಿಕೆಟ್ ಪೊಸ್ಟರ್ ಗಳನ್ನು ಬಿಡುಗಡೆಗೊಳಿಸಿದರು.

ಅತಿಥಿಗಳಾದ ಒಕ್ಕಲಿಗ ಸಂಘದ ಅಧ್ಯಕ್ಷೆ ಡಾ.ಲಕ್ಷ್ಮಿ ನಂದಕಿಶೋರ್, ಕರ್ನಾಟಕ ಸಂಘ‌ ದುಬೈಯ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ, ಕರ್ನಾಟಕ ಸಂಘ ಶಾರ್ಜಾ ದ ನೋಯಲ್ ಅಲ್ಮೇಡಾ, ದಯಾ ಕಿರೋಡಿಯಾನ್ ಇನ್ನಿತರರು ಮಾತನಾಡಿ ಚಿತ್ರಕ್ಕೆ ಶುಭ ಹಾರೈಸಿದರು. ರಾಜೇಶ್ ಕುತ್ತಾರ್ ಕಾರ್ಯಕ್ರಮ ನಿರೂಪಿಸಿದರು.

ಜ.4 ರಿಂದ ಓ.ಎಂ.ಜಿ ಬ್ಯಾನರ್ ನಲ್ಲಿ ಗಲ್ಫ್ ರಾಷ್ಟ್ರದ ಓಮಾನ್, ಕತ್ತಾರ್,ಬಹ್ರೈನ್ ಹಾಗೂ ಜ.5 ರಿಂದ ಯುಎಇಯ ಎಲ್ಲಾ ರಾಜ್ಯಗಳ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಹಾಗೂ ಹೆಚ್ಚಿನ ವಿವರಕ್ಕಾಗಿ 0503911719,0501296644 ಸಂಪರ್ಕಿಸಬಹುದು.

ಜ.7 ರಂದು ಪ್ರೀಮಿಯರ್ ಪ್ರದರ್ಶನ ದುಬೈಯ ಐಬಿಎನ್ ಬಟುಟಾ ಮಾಲ್ (IBN Batuta Mall) ಚಿತ್ರಮಂದಿರದಲ್ಲಿ ಕಾಟೇರದ ಪ್ರೀಮಿಯರ್ ಪ್ರದರ್ಶನಗೊಳ್ಳಲಿದ್ದು ನಾಯಕ ನಟ ದರ್ಶನ್ ತೂಗುದೀಪ, ನಾಯಕಿ‌ ಆರಾಧನಾ ರಾಮ್, ಹಿರಿಯ ನಟಿ ಮಾಲಾಶ್ರೀ, ನಿರ್ಮಾಪಕರಾಕ್ ಲೈನ್ ವೆಂಕಟೇಶ್, ಚಿತ್ರದ ನಿರ್ದೇಶಕರಾದ ತರುಣ್ ಕಿಶೋರ್ ಹಾಗೂ ಕಾಟೇರ ಚಿತ್ರ ತಂಡ ಯುಎಇಯ ಚಿತ್ರ ಅಭಿಮಾನಿಗಳ ಒಟ್ಟಿಗೆ ಕುಳಿತು ಚಿತ್ರ ವೀಕ್ಷಿಸಲಿದ್ದಾರೆ ಎಂದು ಓ.ಎಂ.ಜಿ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)
ಚಿತ್ರ : ಅಶೋಕ್ ಬೆಳ್ಮಾನ್

Comments are closed.