UAE

ದುಬೈ: ಗಮ್ಮತ್ ಕಲಾವಿದರು ದುಬೈಯ ‘ವಾ ಗಳಿಗೆಡ್ ಪುಟ್ಟುದನಾ’ ನಾಟಕಕ್ಕೆ ಮುಹೂರ್ತ

Pinterest LinkedIn Tumblr

ದುಬೈ: ಗಮ್ಮತ್ ಕಲಾವಿದೆರ್ ದುಬೈ ತಂಡವು ಕಳೆದ ಹತ್ತು ವರ್ಷಗಳಿಂದ ಊರಿನ ವೃತ್ತಿಪರ ತಂಡದ ಸ್ಕ್ರಿಪ್ಟ್ ನಾಟಕಗಳನ್ನು ದುಬೈನಲ್ಲಿ ಪ್ರದರ್ಶಿಸಿ ಯುಎಇಯ ಕಲಾ ಪ್ರೇಮಿಗಳನ್ನು ಮನರಂಜಿಸಿದ್ದು ಈ ವರ್ಷ ಒಂದು ಒಳ್ಳೆಯ ಹೊಸ ನಾಟಕವನ್ನು ಬರೆದು ಪ್ರದರ್ಶನವನ್ನು ಮಾಡುತ್ತಿದ್ದು ಈ ಹೊಸ ಪ್ರಯತ್ನ ಯಶಸ್ವಿ ಆಗಲಿ ಎಂದು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅವರು ಶುಭ ಹಾರೈಸಿದರು.

ಖ್ಯಾತ ನಾಮಾಂಕಿತ ನಾಟಕ ರಚನೆಕಾರರಾದ ವಿಜಯಕುಮಾರ್ ಕೋಡಿಯಲ್ ಬೈಲ್, ಸಂಜೀವ ದಂಡೆಕೇರಿ, ದೇವದಾಸ್ ಕಾಪಿಕಾಡ್, ಕೃಷ್ಣ ಜಿ.ಮಂಜೇಶ್ವರ, ನವೀನ್ ಶೆಟ್ಟಿ ಅಳಕೆಯವರು ರಚಿಸಿದ ನಾಟಕಗಳನ್ನು ಕಳೆದ ಹತ್ತು ವರ್ಷಗಳಿಂದ ಯುಎಇಯ ಕಲಾಭಿಮಾನಿಗಳಿಗೆ ಉಣಬಡಿಸಿದ ಗಮ್ಮತ್ ಕಲಾವಿದರು ಯುಎಇಯ ಹನ್ನೊಂದನೇ ವರ್ಷದ ನೂತನ ಕಲಾಕೃತಿ “ವಾ ಗಳಿಗೆಡ್ ಪುಟ್ಟುದನ” ನಾಟಕದ ಮುಹೂರ್ತ ಕಾರ್ಯಕ್ರಮವು ನಗರದ ಕರಾಮದ ಎಸ್.ಎನ್.ಜಿ.ಸಭಾಂಗಣದಲ್ಲಿ ಡಿ.24 ರಂದು ಸಂಜೆ ನಡೆಯಿತು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಸತೀಶ್ ಪೂಜಾರಿಯವರು ಮಾತನಾಡಿ, ಗಮ್ಮತ್ ಕಲಾವಿದೆರ್ ತಂಡದಲ್ಲಿ ಊರಿನ ವೃತ್ತಿಪರ ತಂಡದ ಕಲಾವಿದರಿಗಿಂತ ಒಳ್ಳೆಯ ಪ್ರತಿಭಾವಂತ ಕಲಾವಿದರು ಇದ್ದರೆ ನಿಮ್ಮ ಈ ಹೊಸ ಪ್ರಯತ್ನಕ್ಕೆ ನಮ್ಮೆಲ್ಲರ ಪೋತ್ಸಹ ಖಂಡಿತವಾಗಿ ಇದೆ ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಕರ್ನಾಟಕ ಸಂಘ ದುಬೈಯ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ, ಡಯನ್ ಡಿ.ಸೋಜಾ, ಉದ್ಯಮಿಗಳಾದ ಜೇಮ್ಸ್ ಮೆಂಡೋನ್ಸ, ಬಿ.ಸಿ.ಎಫ್.ದುಬೈಯ ಅಬ್ದುಲ್ ರಝಕ್, ಮೊಗವೀರ ಸಮಾಜದ ಬಾಲಕೃಷ್ಣ ಸಾಲಿಯಾನ್, ಗಮ್ಮತ್ ಕಲಾವಿದರು ಯುಎಇಯ ಮಾಹ ಪೋಷಕರಾದ ಹರೀಶ್ ಬಂಗೆರ, ಅಧ್ಯಕ್ಷರಾದ ರಾಜೇಶ್ ಕುತ್ತಾರ್ ಉಪಸ್ಥಿತರಿದ್ದು ಫೆಬ್ರವರಿ ತಿಂಗಳಲ್ಲಿ ಪ್ರದರ್ಶನವಾಗುವ ನಾಟಕಕ್ಕೆ ಶುಭವನ್ನು ಹಾರೈಸಿದರು.

ಗಣ್ಯರು ದೀಪವನ್ನು ಬೆಳಗಿಸುವ ಮೂಲಕ ಸಭಾ ಕಾರ್ಯಕ್ರಮ ಆರಂಭಗೊಂಡಿತು. ನಂತರ ನಾಟಕದ ಹೆಸರನ್ನು ಬಿಡುಗಡೆಗೊಳಿಸಲಾಯಿತು.

ತಂಡದ ನಿರ್ದೇಶಕರಾದ ವಿಶ್ವನಾಥ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕಳೆದ ಹತ್ತು ವರ್ಷಗಳಿಂದ ಊರಿನ ವೃತ್ತಿಪರ ನಾಟಕ ತಂಡದವರು ಆಡಿದ ನಾಟಕದ ಸ್ಕ್ರಿಪ್ಟ್ ನ್ನು ತಂದು ನಮ್ಮ ಕಲಾವಿದರು ನಾಟಕ ಆಡುತ್ತಿದ್ದಿವಿ. ನಮ್ಮ ಗಮ್ಮತ್ ಕಲಾವಿದರು ತಂಡದಲ್ಲಿ ಒಳ್ಳೆಯ ಒಳ್ಳೆಯ ಪ್ರತಿಭಾವಂತ ಕಲಾವಿದರು ಇದ್ದರೆ.ಯುಎಇಯ ಕಲಾಭಿಮಾನಿಗಳ ಒತ್ತಾಯದ ಮೇರೆಗೆ ಈ ವರ್ಷ ನಮ್ಮ ತಂಡದ ಕಲಾವಿದರಿಗಾಗಿಯೇ ರಚಿಸಿದ “ವಾ ಗಳಿಗೆಡ್ ಪುಟ್ಟುದನ” ಎಂಬ ನೂತನ ನಾಟಕವನ್ನು ಯುಎಇಯ ಕಲಾಭಿಮಾನಿಗಳಿಗೆ ನೀಡಲಿದ್ದೆವೆ. ಈ ನಾಟಕವನ್ನು ಸಂದೀಪ್ ಶೆಟ್ಟಿ ರಾಯಿ ರಚಿಸಿದ್ದು ಮುಂಬಯಿಯ ಖ್ಯಾತ ನಾಟಕ ನಿರ್ದೇಶಕ ಜಗದೀಶ್ ಶೆಟ್ಟಿ ಕೆಂಚನಕೆರೆ ಮತ್ತು ಖ್ಯಾತ ರಂಗ ಕಲಾವಿದ ದಿನೇಶ್ ಅತ್ತವರ ನಾಟಕಕ್ಕೆ ಸಂಭಾಷಣೆ ಬರೆದಿದ್ದಾರೆ. ವಿಜಯಕುಮಾರ್ ಕೋಡಿಯಲ್ ಬೈಲ್ ನಾಟಕದ ಹಾಡಿಗೆ ಸಾಹಿತ್ಯ ರಚಿಸಿದ್ದು ದೇವದಾಸ್ ಕಾಪಿಕಾಡ್ ಹಾಡಲಿದ್ದರೆ‌ ನಾಟಕಕ್ಕೆ ಸಂಗೀತವನ್ನು ಗುರು ಬಾಯರ್ ಮತ್ತು ಶುಭಕರ ಬೆಳಪು ಮಾಡಲಿದ್ದರೆ ಹಾಗೂ ಫೆಬ್ರವರಿ ತಿಂಗಳಲ್ಲಿ ಈ ನಾಟಕವನ್ನು ಪ್ರದರ್ಶಿಸಲಿದ್ದೇವೆ ದಿನಾಂಕವನ್ನು ಸದ್ಯದಲ್ಲೇ ತಿಳಿಸಲಾಗುವುದು ಎಂದು ತಿಳಿಸಿದರು.

ಮೊದಲಿಗೆ ಸಂತೋಷ್ ಭಟ್ ಪೌರೋಹಿತ್ಯದಲ್ಲಿ ನಾಟಕದ ಸ್ಕ್ರಿಪ್ಟ್ ಗೆ ಪೂಜೆಯನ್ನು ಮಾಡಲಾಯಿತು. ನಂತರ ಗಣ್ಯರು ಸ್ಕ್ರಿಪ್ಟ್ ನ್ನು ನಿರ್ದೇಶಕರಾದ ವಿಶ್ವನಾಥ ಶೆಟ್ಟಿಯವರಿಗೆ ಹಸ್ತಾಂತರಿಸಲಾಯಿತು. ಆರತಿ ಅಡಿಗ, ತಂಡದ ಸದಸ್ಯೆ ಆಶಾ ಕೊರೆಯಾ, ಕರ್ನಾಟಕ ಸಂಘ ದುಬೈಯ ಮಲ್ಲಿಕಾರ್ಜುನ ಗೌಡ, ಯಕ್ಷಗಾನ ಅಭ್ಯಾಸ ಕೇಂದ್ರದ ಶೇಖರ್ ಡಿ.ಶೆಟ್ಟಿಗಾರ್, ಹಿರಿಯ ರಂಗ ಕಲಾವಿದ ಅಲ್ವಿನ್ ಫಿಂಟೋರವರು ಸಭಿಕರ ಪರವಾಗಿ ಮಾತನಾಡಿ ನಾಟಕಕ್ಕೆ ಶುಭ ಹಾರೈಸಿದರು.

ಗಮ್ಮತ್ ಕಲಾವಿದರು ದುಬೈ ಮಾಜಿ ಅಧ್ಯಕ್ಷರದ ವಾಸು ಶೆಟ್ಟಿ , ಶ್ರೀಮತಿ ಸುವರ್ಣ ಸತೀಶ್ ಪೂಜಾರಿ ಹಾಗೂ ಯುಎಇಯ ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕು.ಸನ್ನಿಧಿ ವಿಶ್ವನಾಥ ಶೆಟ್ಟಿ ಪ್ರಾರ್ಥಿಸಿದರು. ತಂಡದ ಕಲಾವಿದರಾದ ಡೊನಿ ಕೊರೆಯಾ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷರಾದ ರಾಜೇಶ್ ಕುತ್ತಾರ್ ಸ್ವಾಗತಿಸಿ ಕಾರ್ಯದರ್ಶಿ ಗಿರೀಶ್ ನಾರಾಯಣ್ ವಂದಿಸಿದರು.

ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)
ಚಿತ್ರ : ವಿವೇಕ್ ಆನಂದ್ ದುಬೈ

Comments are closed.