ದುಬೈ: ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ವತಿಯಿಂದ ಜರುಗುವ ಸಾರ್ವಜನಿಕ ಗಣೇಶೋತ್ಸವ 2023ರ ಪೂರ್ವಭಾವಿ ಸಭೆಯು ಇತ್ತೀಚೆಗೆ ನಡೆಯಿತು.

ಸಭೆಯ ಉದ್ಘಾಟನೆಯನ್ನು ಅಧ್ಯಕ್ಷ ಅಜೀತ್ ಕೊರಕೊಡು ಹಾಗು ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಮಹಿಳಾ ವೃಂದದವರು ದೀಪ ಬೆಳಗಿಸಿ ದುಬೈಯಲ್ಲಿ ಚಾಲನೆ ನೀಡಿದರು.
9ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸಂಚಾಲಕರಾದ ಸುಗಂಧ ರಾಜ್ ಬೇಕಲ್ ರವರು ಬಿಡುಗಡೆಗೊಳಿಸಿದರು.
2023 ಸೆಪ್ಟಂಬರ್ 24 ನೇ ಆದಿತ್ಯವಾರ ಬೆಳಗ್ಗೆ 9 ರಿಂದ ಸಂಜೆ 5 ಗಂಟೆತನಕ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅಜಮಾನ್ ಇಂಡಿಯನ್ ಅಶೋಷಿಯೇಷನ್ ನಲ್ಲಿ ಜರಗಲಿರುವುದು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಸಂದೀಪ್ ರಾವ್, ಕೋಶಾಧಿಕಾರಿ ರಾಜೇಶ್ ರಾವ್ ಹಾಗು ಹಿರಿಯ ಸದಸ್ಯರಾದ ಶ್ರೀನಿವಾಸ್ ಕೃಷ್ಣಾಪುರ, ಪ್ರಭಾಕರ್ ಅಂಬಲತ್ತರೆ ಮತ್ತು ನಾಗೇಶ್ ರಾವ್ ನೇರಂಬಳಿ ಹಾಗು ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಯಾಗಿ ಜರಗಲಿ ಎಂದು ಶುಭ ಸಂದೇಶ ನೀಡಿದರು.
Comments are closed.