UAE

ಗಲ್ಫ್ ನಾಡಿನಲ್ಲಿ ಕನ್ನಡ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾದ ಕನ್ನಡ ಸಂಘ ಅಲ್ ಐನ್ ಸಂಘಟನೆಯ 19ನೇ ವಾರ್ಷಿಕೋತ್ಸವ

Pinterest LinkedIn Tumblr

ದುಬೈ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳ ಸಾಲಿನಲ್ಲಿ ಇರುವ ಕನ್ನಡ ಸಂಘ ಅಲ್ ಐನ್ ತನ್ನ 19ನೇ ವಾರ್ಷಿಕೋತ್ಸವ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

2023 ಮೇ 13ನೇ ತಾರೀಕಿನಂದು ಬ್ಲು ರಾಡಿಸ್ಸನ್ ಹೋಟೆಲ್ ಅಲ್ ಐನ್ ನ ಬಾಲ್ ರೂಂ ನಲ್ಲಿ ಮಧ್ಯಾಹ್ನ ಮೂರು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ನಡೆಯಿತು. ಪೂರ್ಣ ಕುಂಭ ಸ್ವಾಗತದೊಂದಿಗೆ ಮುಖ್ಯ ಅತಿಥಿಗಳನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು. ಡಾ. ಪ್ರದೀಪ್ ಶೆಟ್ಟಿ ಸರ್ವರನ್ನು ಸ್ವಾಗತಿಸಿದರು. ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ.ಯ ಅಧ್ಯಕ್ಷರು ಹಾಗೂ ಫಾರ್ಚೂನ್ ಗ್ರೂಪ್ ಅಫ್ ಹೋಟೆಲ್ ಚೇರ್ಮನ್ ಪ್ರವೀಣ್ ಕುಮಾರ್ ಶೆಟ್ಟಿ ಹಾಗೂ ಎ. ಜೆ. ಗ್ರೂಪ್ ಆಫ್ ಸ್ಕೂಲ್ಸ್ ಚೇರ್ಮನ್ ಅರ್ಶದ್ ಶರೀಫ್ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು. ಕ್ರಿಯಾತ್ಮಕ ಕಲಾ ನಿರ್ದೇಶಕ ಬಿ. ಕೆ ಗಣೇಶ್ ರೈ ಅವರು ಹಾಗೂ ಕರ್ನಾಟಕ ಪರ ಸಂಘಟನೆಗಳ ಮುಖ್ಯಸ್ಥರುಗಳು ಗೌರವ ಅತಿಥಿಗಳಾಗಿ ಆಗಮಿಸಿದ್ದು ಕನ್ನಡ ಸಂಘದ ಮುಖ್ಯಸ್ಥರಾದ ವಿಮಲ್ ಕುಮಾರ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಲಾಯಿತು.

ಸವಿತಾ ನಾಯಕ್ ಮತ್ತು ಉಮ್ಮರ್ ಅವರ ಕಾರ್ಯಕ್ರಮ ನಿರೂಪಣೆಯಲ್ಲಿ ಅರಂಭವಾದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಪ್ರವೀಣ್ ಕುಮಾರ್ ಶೆಟ್ಟಿ , ಅರ್ಶದ್ ಶರೀಪ್ ರವರನ್ನು ಕನ್ನಡ ಸಂಘ ಅಲ್ ಐನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ, ಪೂರ್ವ ಅಧ್ಯಕ್ಷರುಗಳಾದ ನೋವೆಲ್ ಡಿ ಅಲ್ಮೆಡಾ, ಸುಗಂಧರಾಜ್ ಬೇಕಲ್, ಸೆಂಟ್ ಸಂಸ್ಥೆಯ ಅಧ್ಯಕ್ಷರಾದ ಶೋಧನ್ ಪ್ರಸಾದ್ ಹಾಗೂ ಮನೋಹರ್ ಹೆಗ್ಡೆ, ಇಂಡಿಯಾ ಸೊಶಿಯಲ್ ಸೆಂಟರ್ ಅಲ್ ಐನ್, ಮುಸ್ತಾಫಾ ಮುಬಾರಕ್ ಹಾಗೂ ಇಬ್ರಾಹಿಂ ಇವರುಗಳನ್ನು ಗೌರವಿಸಲಾಯಿತು.

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಳೆದ ಎರಡುವರೆ ದಶಕಗಳಿಂದ ಕ್ರಿಯಾತ್ಮಕ ಕಲಾ ನಿರ್ದೇಶಕರಾಗಿ ಸೇವೆ ಸಲ್ಲಿಸಿ, ಸಮಾಜ ಸಮಾಜ ಸಮಾಜ ಸೇವೆ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಬಿ. ಕೆ. ಗಣೇಶ್ ರೈ ಯವರ ಶಿಲ್ಪ ಕಲೆ, ಚಿತ್ರ ಕಲೆ, ಲೇಖಕ ಬರಹಗಾರರಾಗಿ, ಕಾರ್ಯಕ್ರಮ ನಿರೂಪಕರಾಗಿ, ರಕ್ತದಾನ ಶಿಬಿರಗಳ ಆಯೋಜಕರಾಗಿ, ಸಮಾಜ ಸೇವಕರಾಗಿ ಇವರ ಬಹುಮುಖ ಪ್ರತಿಭೆಯನ್ನು ದುಬಾಯಿ ಸರ್ಕಾರದ ಕಲ್ಚರಲ್ ಮಿನಿಸ್ಟ್ರೀಯಿಂದ ಕಲ್ಚರಲ್ ಗೋಲ್ಡನ್ ವೀಸಾ ನೀಡಿ ಗೌರವಿಸಿದೆ. ಕನ್ನಡ ಸಂಘ ಅಲ್ ಐನ್, ಶ್ರೀ ಗಣೇಶ್ ರೈಯವರನ್ನು “ವಿಶ್ವ ಮಾನ್ಯ ಶಿಲ್ಪಕಲಾರತ್ನ ಅಂತರಾಷ್ಟ್ರೀಯ ಪ್ರಶಸ್ತಿ” ಪ್ರದಾನಿಸಿ ಗೌರವಿಸಿದರು.

ಕನ್ನಡ ಸಂಘ ಅಲ್ ಐನ್ ನ ಕಾರ್ಯಕಾರಿ ಸಮಿತಿಯಲ್ಲಿ ಸೇವೆ ಸಲ್ಲಿಸುತ್ತಿವ ಸದಸ್ಯರನ್ನು ಆಯ್ಕೆ ಮಾಡಿ ಪ್ರತಿವರ್ಷ ನೀಡಲಾಗುತ್ತಿರುವ ಸನ್ಮಾನ ಗೌರವವನ್ನು ಡಾ. ಹರ್ಷ, ಶ್ರೀಮತಿ ಡಿಂಪಲ್ ಆಳ್ವ, ಜಯಪ್ರಕಾಶ್ ದಾಸ್ ರವರವರನ್ನು ಸನ್ಮಾನಿಸಲಾಯಿತು.
ಅದರ್ಶ ವಿದ್ಯಾರ್ಥಿ ಪುರಸ್ಕಾರವನ್ನು ವಿಧ್ಯಾರ್ಥಿಗಳಾದ ಶರಧಿ, ಅನಗ, ಇಫಾಜ್ ಇವರುಗಳಿಗೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಬೆಂಬಲ ಪ್ರೋತ್ಸಾಹ ನೀಡಿರುವ ಎಲ್ಲಾ ಪ್ರಾಯೋಜಕರುಗಳನ್ನು ವೇದಿಕೆಗೆ ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡ ಸಾಂಸೃತಿಕ ವೈಭವದ ಅನಾವರಣ
ಕನ್ನಡ ಸಂಘ ಅಲ್ ಐನ್ ಸಂಘಟನೆಯ ಸದಸ್ಯರುಗಳು ಹಾಗೂ ಮಕ್ಕಳ ಪ್ರತಿಭೆಯ ಅನಾವರಣವಾಯಿತು. ಸ್ವಾಗತ ನೃತ್ಯ, ಪುಟ್ಟ ಕಂದಮ್ಮಗಳ ಜೊತೆಯಲ್ಲಿ ಮಾತೆಯರು ಸೇರಿ ತೊಂಡೆಕಾಯಿ ಬೆಂಡೆಕಾಯಿ ನೃತ್ಯ, ಪುಟಾಣಿಗಳ ಪಟ ಪಟ ಗಾಳಿಪಟ ನೃತ್ಯ, ಕೋಲಾಟ, ವರಾಹ ರೂಪಂ ನೃತ್ಯ, ಸಮೂಹ ಗೀತೆ, ಸಮೂಹ ನೃತ್ಯ, ಕೊಡವ ನೃತ್ಯ ಬೈಲಾ ಗೀತಾ ನೃತ್ಯ ಸರ್ವರ ಮೆಚ್ಚುಗೆಗೆ ಪಾತ್ರವಾಯಿತು. ರಸಪ್ರಶ್ನೆಗಳಲ್ಲಿ ಹಲವಾರು ಮಂದಿ ಭಾಗವಹಿಸಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡರು.

ಎನ್. ಎಂ. ಸಿ. ಆಸ್ಪತ್ರೆಯ ವತಿಯಿಂದ ಉಚಿತ ವೈಧ್ಯಕೀಯ ತಪಾಸಣೆ ವ್ಯವಸ್ಥೆಯಾಗಿತ್ತು.
ಕೊನೆಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ವಿಮಲ್ ಕುಮಾರ್, ರಮೇಶ್ ಕೆ. ಬಿ. ಹರೀಶ್ ಯು.ಪಿ. ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರುಗಳ ಪೂರ್ವಭಾವಿ ತಯಾರಿಯೊಂದಿಗೆ ಆಯೋಜಿಸಿದ 19ನೇ ವಾರ್ಷಿಕೋತ್ಸವ ಯಶಸ್ವಿಯಾಗಿ ನಡೆಯಿತು.

Comments are closed.