UAE

ಏಪ್ರಿಲ್ 30ರಂದು ಯು.ಎ.ಇ ಬಂಟ್ಸ್’ನ 46ನೇ ಕೂಡು ಕಟ್ಟ್

Pinterest LinkedIn Tumblr

ದುಬೈ: ಯು.ಎ.ಇ.ಬಂಟ್ಸ್ ನ 46 ನೇ ವರ್ಷದ ಕೂಡುಕಟ್ಟ್ ಮತ್ತು ವರ್ಷಂಪ್ರತಿ ಕೊಡಲ್ಪಡುವ 2023 ನೇ ಸಾಲಿನ “ಬಂಟ ವಿಭೂಷಣ ಪ್ರಶಸ್ತಿ” ಪ್ರದಾನ ಕಾರ್ಯಕ್ರಮವು ಎ.30 ಭಾನುವಾರದಂದು ಬೆಳಿಗ್ಗೆಯಿಂದ ಸಂಜೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ನಗರದ ದೇರಾದ ಬ್ರಿಸ್ಟೊಲ್ ಹೋಟೆಲ್ (The Bristol Hotel Deira Dubai) ನಲ್ಲಿ ಜರಗುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯು.ಎ.ಇ ಬಂಟ್ಸ್ ನ ಅಧ್ಯಕ್ಷರಾದ ಶ್ರೀಯುತ ಸರ್ವೋತ್ತಮ ಶೆಟ್ಟಿಯವರು ವಹಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದ ಅತಿಥಿ ಸಮನ್ವಯಕಾರರಾಗಿ ಮುಂಬಯಿಯ ಉದ್ಯಮಿ, ಕಾರ್ಯಕ್ರಮ ಸಂಘಟಕ, ನಿರೂಪಣೆಕಾರ ಶ್ರೀ ಅಶೋಕ ಪಕ್ಕಳರವರು ಭಾಗವಹಿಸಲಿದ್ದಾರೆ.

ಪ್ರತಿ ವರ್ಷ ಕೊಡಲ್ಪಡುವ “ಬಂಟ ವಿಭೂಷಣ ಪ್ರಶಸ್ತಿಯನ್ನು ಈ ವರ್ಷ ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದ್ರೆಯ ಚೇರ್ ಮಾನ್ ಆಗಿರುವ ಡಾ. ಮೋಹನ್ ಆಳ್ವ ಅವರಿಗೆ ಗೌರವ ಪ್ರಧಾನ ಮಾಡಲಿದ್ದಾರೆ.

ಯು.ಎ.ಇ.ಯಲ್ಲಿ ಇರುವ ಬಂಟ ಬಾಂದವರು ಈ ಕಾರ್ಯಕ್ರಮದಲ್ಲಿ ಬಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಎಂದು ಯು.ಎ.ಇ. ಬಂಟ್ಸ್ ನ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ, ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ದೇವೇಶ್ ಆಳ್ವ. ಕೋಶಾಧಿಕಾರಿ ಅನಿತಾ ದಯಾನಂದ ಶೆಟ್ಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ- ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)

Comments are closed.