UAE

ದುಬೈಯಲ್ಲಿ ಮಾ.19 ರಂದು ‘ಶಿವದೂತೆ ಗುಳಿಗೆ’ ಪ್ರದರ್ಶನ; ಸಕಲ ಸಿದ್ಧತೆ

Pinterest LinkedIn Tumblr

ದುಬೈ: ದಾಖಲೆ ಸಂಖ್ಯೆಯ ಪ್ರೇಕ್ಷಕರು ನೋಡಿ – ಮೆಚ್ಚಿದ ವಿಜಯ ಕುಮಾರ್ ಕೊಡಿಯಾಲಬೈಲ್ ಅವರ ನಿರ್ದೇಶನದ ಅಪರೂಪದ ತುಳು ನಾಟಕದ ಕ್ಷಣಗಣನೆ ಆರಂಭ-ವ್ಯವಸ್ಥಿತ ತಯಾರಿ ನಡೆಯುತ್ತಿದೆ.

ಮಾರ್ಚ್ 19 ರಂದು ದುಬೈನಲ್ಲಿ ಕಲಾ ಸಂಗಮ ಮಂಗಳೂರು ತಂಡದವರಿಂದ ಪ್ರದರ್ಶನವಾಗಲಿರುವ “ಶಿವದೂತೆ ಗುಳಿಗೆ” ನಾಟಕದ ನಿರ್ದೇಶಕ ವಿಜಯಕುಮಾರ್ ಕೊಡಿಯಲ್ ಬೈಲ್ ಮತ್ತು ಸಂಗೀತ ನಿರ್ದೇಶಕ ಎ.ಕೆ.ವಿಜಯ ಕೋಕಿಲ ಮತ್ತು ಕಲಾಸಂಗಮದ ತಾಂತ್ರಿಕ ತಂಡವನ್ನು ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಟಕ ಸಂಘಟಕರಾದ ಹರೀಶ್ ಬಂಗೇರ,ದಿನೇಶ್ ಶೆಟ್ಟಿ ಕೊಟ್ಟಿಂಜ,ಗಿರೀಶ್ ನಾರಾಯಣ್,ರಾಜೇಶ್ ಕುತ್ತಾರ್, ಶಾನ್ ಪೂಜಾರಿ, ಮತ್ತು ಪ್ರಕಾಶ್ ಪಕ್ಕಳರವರು ಹೂಗುಚ್ಚ ನೀಡಿ ದುಬೈ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ಮಾರ್ಚ್ 19 ರಂದು ನಗರದ ಉದ್ ಮೇತದ ಅಲ್ ನಸರ್ ಲ್ಯಾಂಡ್ ನ ಐಸ್ ಲಿಂಕ್ ನಲ್ಲಿ ಮಧ್ಯಾಹ್ನ 2.30 ಮತ್ತು ಸಂಜೆ 6. 30 ಗಂಟೆಗೆ “ಶಿವದೂತೆ ಗುಳಿಗೆ” ನಾಟಕದ ಯಶಸ್ವಿ ಪ್ರದರ್ಶನವಾಗಲಿದೆ. ಈಗಾಗಲೇ ತುಳುನಾಡು, ಕರುನಾಡು ಹಾಗೂ ಗಡಿನಾಡಿನಲ್ಲಿ 420 ಕ್ಕೂ ಮಿಕ್ಕಿ ಪ್ರದರ್ಶನಗೊಂಡಿದೆ.

2,500 ಆಸನಗಳಿರುವ ಈ ಸಭಾಂಗಣದಲ್ಲಿ ಎರಡು ಪ್ರದರ್ಶನದಲ್ಲಿ 5,000 ಮಂದಿ ತುಳು – ಕನ್ನಡಿಗರು ಈ ನಾಟಕವನ್ನು ವೀಕ್ಷಿಸಲಿದ್ದು ಈಗಾಗಲೇ ನಾಟಕದ ಕೆಲವೇ ಕೆಲವು ಟಿಕೆಟ್ ಗಳು ಬಾಕಿ ಉಳಿದಿದ್ದು ಇನ್ನೂ ಟಿಕೆಟ್ ತೆಗೆಯಲು ಬಾಕಿ ಇದ್ದ ಯುಎಇಯ ತುಳುವರು ಸಂಘಟಕರನ್ನು ಸಂಪರ್ಕಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.

Comments are closed.