UAE

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಯು.ಎ.ಇ. ಘಟಕ ದುಬಾಯಿಯಲ್ಲಿ ಉದ್ಘಾಟನೆ

Pinterest LinkedIn Tumblr

ದುಬಾಯಿ: ಕರ್ನಾಟಕ ಕಡಲ ತೀರದ ತುಳುನಾಡಿನ ಕಾಪುವಿನಲ್ಲಿ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನೂತನ ಶಿಲಾಮಯ ದೇಗುಲ ನಿರ್ಮಾಣವಾಗುತ್ತಿದೆ. ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಆಶ್ರಯದಲ್ಲಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೂತನ ಯು.ಎ.ಇ. ಘಟಕ ದುಬಾಯಿಯಲ್ಲಿ ಉದ್ಘಾಟನೆಯಾಯಿತು.

2023ಜನವರಿ 22ನೇ ತಾರೀಕು ಸಂಜೆ ದುಬಾಯಿ ಫಾರ್ಚೂನ್ ಪ್ಲಾಝಾ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕಾಪು ವಾಸುದೇವ ಶೆಟ್ಟಿ ಹಾಗೂ ಹಣಕಾಸು ಸಮಿತಿಯ ಮುಖ್ಯಸ್ಥರಾದ ಉದಯಕುಮಾರ್ ಶೆಟ್ಟಿ ಮತ್ತು ಮುಂಬೈ ಘಟಕದ ಅಧ್ಯಕ್ಷರಾದ ಸುಧಾಕರ್ ಹೆಗ್ಡೆ ತಮ್ಮ ತಮ್ಮ ಪತ್ನಿಯರೊಂದಿಗೆ ಮತ್ತು ರತ್ನಾಕರ್ ಶೆಟ್ಟಿ ಊರಿನಿಂದ ಅತಿಥಿಗಳಾಗಿ ಆಗಮಿಸಿದ್ದರು.

ಕಾರ್ಯಕ್ರಮದ ಪ್ರಾರಂಭ ಬಿ. ಕೆ. ಗಣೇಶ್ ರೈಯವರ ಸ್ವಾಗತ, ಕು. ಸನ್ನಿಧಿ ವಿಶ್ವನಾಥ್ ಶೆಟ್ಟಿ ಪ್ರಾರ್ಥನೆ ನಂತರ ಕಾಪು ಮಾರಿಗುಡಿ ದೇವಸ್ಥಾನದ ಸಾಕ್ಷ್ಯಚಿತ್ರ ಪ್ರದರ್ಶನವಾಯಿತು.

ಸರ್ವೋತ್ತಮ ಶೆಟ್ಟಿಯವರು ತಮ್ಮ ಪ್ರಾಸ್ತಾವಿಕದೊಂದಿಗೆ ಅತಿಥಿಗಳನ್ನು ಬರಮಾಡಿಕೊಂಡು ಯು.ಎ.ಇ. ನೂತನ ಘಟಕದ ಒಂಬತ್ತು ಸದಸ್ಯರ ಹೆಸರುಗಳನ್ನು ಘೋಷಣೆ ಮಾಡಿದರು. ನೂತನ ಅಧ್ಯಕ್ಷರಾಗಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ತಮ್ಮ ನೂತನ ಸಮಿತಿಯ ತಂಡದೊಂದಿಗೆ ಶ್ರೀ ಮಾರಿಗುಡಿ ದೇವಿಯ ಚಿತ್ರಪಟ ಫಲಕವನ್ನು ಅನಾವರಣಗೊಳಿಸಿ ಯು. ಎ. ಇ. ಘಟಕವನ್ನು ಅಧಿಕೃತವಾಗಿ ಉಧ್ಘಾಟಿಸಿದರು.

ನೂತನ ಸಮಿತಿಯ ಜ್ಯೋತಿ ಬೆಳಗುವುದರ ಜೊತೆಗೆ 9 ಸುಮಂಗಲೆಯವರು 9 ನಂದಾ ದೀಪವನ್ನು ಬೆಳಗಿಸಿಸ್ದರು. ಕಾಪು ವಾಸುದೇವ ಶೆಟ್ಟಿಯವರು ನೂತನ ಶಿಲಾ ದೇಗುಲ ನಿರ್ಮಾಣ ಯೋಜನೆಯ ಸಂಕ್ಷಿಪ್ತ ಸಿಂಹಾವಲೋಕನ ಮಾಡಿ ನೂತನ ಶಿಲಾ ದೇಗುಲಕ್ಕೆ 9 ರ ಸಂಖ್ಯೆಯಲ್ಲಿ ದೇಗುಲ ನಿರ್ಮಾಣದ ಶಿಲೆಯನ್ನು ಪ್ರತಿಯೊಬ್ಬ ಭಕ್ತಾಧಿಗಳು ನೀಡಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಹಾಗೂ ಮುಂಬರುವ ನೂತನ ಶಿಲಾ ದೇಗುಲದ ಪ್ರತಿಷ್ಠಾಪನಾ ಮಹೋತ್ಸಕ್ಕೆ ಸರ್ವ ರೀತಿಯಲ್ಲಿ ಸಜ್ಜಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವಂತೆ ಮನವಿಯನ್ನು ಮಾಡಿದರು.

ಮುಖ್ಯ ಅತಿಥಿಗಳಾದ ಮುಂಬೈ ಘಟಕದ ಅಧ್ಯಕ್ಷ ಸುಧಾಕರ್ ಹೆಗ್ಡೆ, ಹಣಕಾಸು ಸಮಿತಿಯ ಮುಖ್ಯಸ್ಥ ಉದಯ ಸುಂದರ್ ಶೆಟ್ಟಿ, ಮನೋಹರ್ ಶೆಟ್ಟಿಯವರು ಸರ್ವರ ಭಕ್ತಾಧಿ ಬಂಧುಗಳು ಸಂಪೂರ್ಣ ಸಹಕಾರ ಬೆಂಬಲ ನೀಡಿ ಕಾರ್ಯ ಯೋಜನೆಯನ್ನು ಸಂಪೂರ್ಣ ಫಲಪ್ರದವಾಗಿಸಲು ಮನವಿಯನ್ನು ಮಾಡಿ ನೂತನ ಘಟಕದ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿ ಶುಭವನ್ನು ಹಾರೈಸಿದರು.

ಯು.ಎ.ಇ. ಘಟಕದ ನೂತನ ಸಮಿತಿಯ ಸದಸ್ಯರು ವಿವಿಧ ಸಮಾಜಗಳನ್ನು ಪ್ರತಿನಿಧಿಸಿದ್ದು ಹರೀಶ್ ಶೇರಿಗಾರ್, ಸತೀಶ್ ಪೂಜಾರಿ, ರಾಮಚಂದ್ರ ಹೆಗ್ಡೆ, ಹರೀಶ್ ಬಂಗೇರಾ, ಸುಧಾಕರ್ ರಾವ್ ಪೇಜಾವರ, ರಘುರಾಮ್ ಪದ್ಮಶಾಲಿ, ದಿನೇಶ್ ಶೆಟ್ಟಿ ಕೊಟ್ಟಿಂಜ, ಬಾಲಕೃಷ್ಣ ಸಾಲಿಯಾನ್, ಹಾಗೂ ಯು.ಎ.ಇ. ಘಟಕದ ಅಧ್ಯಕ್ಷರಾಗಿ ಜವಬ್ಧಾರಿಯನ್ನು ವಹಿಸಿಕೊಂಡ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ತಮ್ಮ ತಮ್ಮ ಜವಬ್ಧಾರಿಯಲ್ಲಿ ಹೆಚ್ಚಿನ ಸೇವೆಯನ್ನು ಸಲ್ಲಿಸುವ ಭರವಸೆಯನ್ನು ನೀಡಿದರು.

ವಂದಾನರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಹಿತು. ಕೊನೆಯಲ್ಲಿ ಸರ್ವರಿಗೂ ಮಹಾಪ್ರಸಾದ ಭೋಜನ ವ್ಯವಸ್ಥೆಯಿತ್ತು.

ವರದಿ- ಬಿ.ಕೆ. ಗಣೇಶ್ ರೈ, ದುಬಾಯಿ
ಛಾಯಚಿತ್ರ ಕೃಪೆ : ಅಶೋಕ್ ಕುಮಾರ್, ಶಿವ ಗೌಡ

Comments are closed.