UAE

ಇತಿಹಾಸ ಸೃಷ್ಟಿಸಿದ ಕನ್ನಡಿಗರು ದುಬೈನ 67 ನೇ ಕರ್ನಾಟಕ ರಾಜ್ಯೋತ್ಸವ; ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಹಯೋಗ 1ನೇ ‘ವಿಶ್ವ ಕನ್ನಡ ಹಬ್ಬ’

Pinterest LinkedIn Tumblr

ದುಬೈ: ಕನ್ನಡಿಗರು ದುಬೈನ ಸಂಪೂರ್ಣ ಸಹಾಯದ ಅಡಿಯಲ್ಲಿ ಮತ್ತು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ (ಕೆಪಿಸಿಸಿ) ಪ್ರಮುಖ ಬೆಂಬಲದೊಂದಿಗೆ “67 ನೇ ಕರ್ನಾಟಕ ರಾಜ್ಯೋತ್ಸವ” ಆಚರಣೆಯ ಜೊತೆಗೆ 1 ನೇ “ವಿಶ್ವ ಕನ್ನಡ ಹಬ್ಬ”ವನ್ನು ಇಂಡಿಯನ್ ಹೈಸ್ಕೂಲ್‌ನ ಶೇಖ್ ರಶೀದ್, ದುಬೈ ಸಭಾಂಗಣದಲ್ಲಿ ಆಯೋಜಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು.

67 ನೇ ಕರ್ನಾಟಕ ರಾಜ್ಯೋತ್ಸವದ ಅಡಿಯಲ್ಲಿ ಈ ಅತಿದೊಡ್ಡ ಕಾರ್ಯಕ್ರಮವನ್ನು ನಡೆಸಲಾಯಿತು. ದುಬೈನಲ್ಲಿ ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವ ಮತ್ತು ಇತರ ಹಲವು ಗುಣಮಟ್ಟದ ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಪರಂಪರೆಯನ್ನು ಕನ್ನಡಿಗರು ದುಬೈ ಹೊಂದಿದೆ.

ಈ ಬಾರಿ ಕನ್ನಡಿಗರು ದುಬೈಗೆ ಕೆಪಿಸಿಯೊಂದಿಗೆ “ವಿಶ್ವ ಕನ್ನಡ ಹಬ್ಬ”ವನ್ನು ಒಂದೇ ವೇದಿಕೆಯಲ್ಲಿ ಆಯೋಜಿಸುವ ಅವಕಾಶ ಸಿಕ್ಕಿತು. ಮಾತೃಭಾಷೆ ಕನ್ನಡವನ್ನು ಜಾಗತಿಕ ಮಟ್ಟಕ್ಕೆ ಏರಿಸುವುದು ಮತ್ತು ಕರ್ನಾಟಕದ ಅನೇಕ ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಭೆಯನ್ನು ಇಡೀ ಜಗತ್ತಿಗೆ ತೋರಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಈ ಕಾರ್ಯಕ್ರಮದಲ್ಲಿ ಮೈಸೂರಿನ ರಾಜವಂಶಸ್ಥರಾದ ಯದುವೀರ್ ಚಾಮರಾಜ ಒಡೆಯರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉಮ್ ಅಲ್ ಕುವೈನ್‌ನ ರಾಜಮನೆತನದಿಂದ ಹಿಸ್ ಹೈನೆಸ್ ಶೇಖ್ ರಶೀದ್ ಬಿನ್ ಮಜಿದ್ ಅಲ್ ಮುಲ್ಲಾ, ಮಹರ್ಷಿ ಆನಂದ ಗುರೂಜಿ; ಶ್ರೀ ಬಸವ ರಮಾನಂದ ಸ್ವಾಮಿ; ಸಿ ಸೋಮಶೇಖರ್, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಅಧ್ಯಕ್ಷ ಡಾ. ಚಿತ್ರನಟ ವಿಜಯ ರಾಘವೇಂದ್ರ, ಪ್ರೇಮಾ, ಭವ್ಯ, ವಸಿಷ್ಠ ಸಿಂಹ, ಪ್ರಥಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೆಪಿಸಿಸಿಯ ಪ್ರಮುಖ ಸಂಘಟಕರು, ಅಧ್ಯಕ್ಷರು ಶಿವಕುಮಾರ್ ನಾಗರನವಿಲೆ ನೇತೃತ್ವದಲ್ಲಿ ಕರ್ನಾಟಕದಿಂದ ಬೃಹತ್ ತಂಡವನ್ನು ಹೊಂದಿದ್ದರು ಮತ್ತು ರವಿ ಸಂತು, ಪ್ರಸಾದ್ ಶೆಟ್ಟಿ, ಸುಧಾ, ಪಲ್ಲವಿ, ಪಾರ್ಥ, ಹೇಮಲತಾ ಅವರ ತಂಡವಾಗಿತ್ತು. ದುಬೈನಿಂದ ಗಲ್ಫ್ ಕೆಪಿಸಿಸಿ ಅಧ್ಯಕ್ಷ ಹಾಗು ಕನ್ನಡಿಗರು ದುಬೈ ತಂಡದ ಅಧ್ಯಕ್ಷ ಸಾದನ್ ದಾಸ್; ಗಲ್ಫ್ ಕೆಪಿಸಿಸಿ ಉಪಾಧ್ಯಕ್ಷ ಹಾಗು ಗಲ್ಫ್ ಮೂವೀಸ್ ಸಂಸ್ಥಾಪಕ ದೀಪಕ್ ಸೋಮಶೇಖರ್, ಮತ್ತು ಅರುಣ್ ಕುಮಾರ್ ಎಂಕೆ ಯುಎಇ ಕೆಪಿಸಿಸಿ ಅಧ್ಯಕ್ಷ ಹಾಗು ಕನ್ನಡಿಗರು ದುಬೈ ಉಪಾಧ್ಯಕ್ಷರು ಈ ಕಾರ್ಯಕ್ರಮವನ್ನು ಕೆಪಿಸಿಸಿಯೊಂದಿಗೆ ಸಂಯೋಜಿಸುವ ನೇತೃತ್ವ ವಹಿಸಿದ್ದರು. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕನ್ನಡಿಗರು ದುಬೈನ 30 ಸ್ವಯಂಸೇವಕರ ಬೃಹತ್ ತಂಡವನ್ನು ಹೊಂದಿದ್ದರು. ಆನಂದ ಗುರೂಜಿ ಮತ್ತು ಶ್ರೀ ಬಸವ ರಮಾನಂದ ಸ್ವಾಮಿಗಳ ಆಶೀರ್ವಾದದೊಂದಿಗೆ ಕಾರ್ಯಕ್ರಮವು ರಂಗಭೂಮಿಯ ಪ್ರವೇಶದ್ವಾರದಲ್ಲಿ ಬಣ್ಣ ಬಣ್ಣದ ಹೂವುಗಳಿಂದ ಅಲಂಕರಿಸಲ್ಪಟ್ಟ ದೀಪವನ್ನು ಬೆಳಗಿಸುವ ಮೂಲಕ ಪ್ರಾರಂಭವಾಯಿತು. ಕರ್ನಾಟಕ ಸಂಸ್ಕೃತಿ ಬಿಂಬಿಸುವ ಬೃಹತ್ ಮೆರವಣಿಗೆ, ಹುಲಿವೇಷ, ಡೊಳ್ಳು, ಮಕ್ಕಳಿಂದ ಖ್ಯಾತ ವೀರ ಚಾರಿತ್ರಿಕ ವ್ಯಕ್ತಿಗಳ ಪ್ರಾತಿನಿಧ್ಯ, ಬೃಹತ್ ವಾದ್ಯ ತಂಡದಿಂದ ಕೆಂಪು ರತ್ನಗಂಬಳಿಯ ಮೂಲಕ ಭವ್ಯ ಸ್ವಾಗತ ಕೋರಲಾಯಿತು. ಶೇಖ್ ರಶೀದ್ ಸಭಾಂಗಣದಲ್ಲಿ ಭಾರತೀಯ ಸಂಪ್ರದಾಯದಂತೆ ಮಹಿಳೆಯರು ಮಹಾರಾಜರಿಗೆ ಆರತಿ ಹಾಗೂ ಚಿಕ್ಕ ಮಕ್ಕಳಿಂದ ಹೂವಿನ ಹಾರ ಹಾಕಿ ನಂತರ ಗಣ್ಯರನ್ನು ಹೂವಿನ ದಳಗಳ ಸುರಿಮಳೆಗೈದು ಸಭಾಂಗಣಕ್ಕೆ ಕರೆದೊಯ್ದರು.
ವೇದಿಕೆ ಕಾರ್ಯಕ್ರಮವು ಯುಎಇ ರಾಷ್ಟ್ರಗೀತೆ, ಭಾರತೀಯ ರಾಷ್ಟ್ರಗೀತೆ, ಕರ್ನಾಟಕ ನಾಡಗೀತೆಯೊಂದಿಗೆ ಪ್ರಾರಂಭವಾಯಿತು ಮತ್ತು ನಂತರ ಎಲ್ಲಾ ಗಣ್ಯರಿಂದ ದೀಪ ಬೆಳಗಿಸಲಾಯಿತು. ಅಲ್ಲದೆ, ಭಾರತೀಯ ಧ್ವಜದ ನಂತರ ಕರ್ನಾಟಕ ಧ್ವಜವನ್ನು ಕನ್ನಡಿಗರು ದುಬೈ ಮತ್ತು ಕೆಪಿಸಿಸಿ ಸ್ವಯಂಸೇವಕರು ವೇದಿಕೆಗೆ ಕೊಂಡೊಯ್ಯುವ ದೃಶ್ಯ ಸ್ಮರಣೀಯ ಕ್ಷಣವಾಗಿತ್ತು. ಕಾರ್ಯಕ್ರಮದ ನಿರೂಪಣೆಯನ್ನು ಚಲನಚಿತ್ರ ನಟ ಮತ್ತು ಖ್ಯಾತರಾದ ವಿಜಯ್ ರಾಘವೇಂದ್ರ ನಿರ್ವಹಿಸಿದರು.

ನೆರೆದಿದ್ದ ಅಪಾರ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರಾದ ಶಿವಕುಮಾರ್, ದುಬೈ, ಯುಎಇಯಲ್ಲಿ ಮೊಟ್ಟ ಮೊದಲ 1ನೇ ವಿಶ್ವ ಕನ್ನಡ ಹಬ್ಬವನ್ನು ಆರಂಭಿಸಲು ಕನ್ನಡಿಗರು ದುಬೈಯೊಂದಿಗೆ ಕೈಜೋಡಿಸಿರುವುದು ಕೆಪಿಸಿಸಿಯ ಸೌಭಾಗ್ಯ ಎಂದು ತಿಳಿಸಿದರು. ಸಾದನ್ ದಾಸ್ ಅವರು, ಇಡೀ ಜಗತ್ತಿಗೆ ಬಲವಾದ ಸಂದೇಶವನ್ನು ಹೊಂದಿರುವ ಭಾರತೀಯ, ಕರ್ನಾಟಕ ಪರಂಪರೆ. ಶ್ರೀ ಯದುವೀರ್ ಚಾಮರಾಜ ಒಡೆಯರ್ ಅವರ ಉಪಸ್ಥಿತಿಯು ವಾತಾವರಣವನ್ನು ಬೆಳಗಿಸಿದೆ ಮತ್ತು ಮೈಸೂರು ಮಹಾರಾಜರು ಮುಖ್ಯ ಅತಿಥಿಗಳಾಗಿ, ಆನಂದ ಗುರೂಜಿ ಮತ್ತು ಶ್ರೀ ಬಸವ ರಮಾನಂದ ಸ್ವಾಮಿಗಳ ಆಶೀರ್ವಾದವನ್ನು ಹೊಂದಿರುವುದು ಎಲ್ಲಾ ಕನ್ನಡಿಗರ ಭಾಗ್ಯವಾಗಿದೆ ಎಂದು ಹೇಳಿದರು. ಕೆಪಿಸಿಸಿಯೊಂದಿಗೆ ಒಡನಾಡುವ ಪ್ರಯೋಗಾತ್ಮಕ ಪ್ರಯತ್ನ ಇದಾಗಿದೆ ಎಂದು ತಿಳಿಸಿದ ಅವರು, ಕರ್ನಾಟಕದ ಹೆಸರನ್ನು ಗಗನಕ್ಕೇರಿಸಲು ಕನ್ನಡಿಗರು ದುಬೈ ಕಳೆದ 17 ವರ್ಷಗಳಿಂದ ನೀಡುತ್ತಿರುವ ಗುಣಮಟ್ಟದ ಕಾರ್ಯಕ್ರಮಗಳನ್ನು ನೀಡುವುದಾಗಿ ಯುಎಇಯಲ್ಲಿರುವ ಎಲ್ಲಾ ಕನ್ನಡಿಗರಿಗೆ ಭರವಸೆ ನೀಡಿದರು.

ಯದುವೀರ್ ಚಾಮರಾಜ ಒಡೆಯರ್ ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತ ಕನ್ನಡದ ಮೌಲ್ಯಗಳು ಮತ್ತು ಸಮಸ್ತ ಕನ್ನಡಿಗರಿಂದ ರಾಜ್ಯೋತ್ಸವದ ಪ್ರಾತ್ಯಕ್ಷಿಕೆ ಕುರಿತು ಪ್ರಸ್ತಾಪಿಸಿದ ಅವರು, ನಮ್ಮ ಮಾತೃಭೂಮಿಯ ಹೆಸರು ಮತ್ತು ಕೀರ್ತಿಯನ್ನು ಸದಾ ಬೆಳಗಲು ಇಂತಹ ಮಹತ್ತರವಾದ ಹೆಜ್ಜೆಯನ್ನು ಇಟ್ಟಿರುವ ಎಲ್ಲಾ ಸಂಘಟಕರನ್ನು ಶ್ಲಾಘಿಸಿದರು. ಹಿಸ್ ಹೈನೆಸ್ ಶೇಖ್ ಮಜೀದ್ ರಶೀದ್ ಅಲ್ ಮುಲ್ಲಾ ಅವರು ತನಾಡುತ್ತ ದಶಕಗಳಿಂದ ತಮ್ಮ ಅಗಾಧ ಸೇವೆಗಾಗಿ ಭಾರತೀಯರು / ಕನ್ನಡಿಗರನ್ನು ಶ್ಲಾಘಿಸಿದರು ಮತ್ತು ಭಾರತ ಮತ್ತು ಯುಎಇ ನಡುವೆ ಬಲವಾದ ಸೇತುವೆಗಳನ್ನು ನಿರ್ಮಿಸಿದ್ದಾರೆ ಎಂದು ಪ್ರಸ್ತಾಪಿಸಿದರು. ಶ್ರೀ. ಆನಂದ ಗುರೂಜಿಯವರು ಶಾಂತಿ ಸಂದೇಶವನ್ನು ಬೋಧಿಸಿದರು ಮತ್ತು ಇಂತಹ ಕಾರ್ಯಕ್ರಮಗಳಿಂದ ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಭದ್ರಪಡಿಸುವ ಸಂದೇಶವನ್ನು ನೀಡಿದರು. ಶ್ರೀ. ಬಸವ ರಮಾನಂದ ಸ್ವಾಮಿಗಳು ಕೂಡ ಬಸವ ವಚನದ ಕೆಲವು ಸಾಲುಗಳನ್ನು ಪಠಿಸಿ ಮಾನವ ಕುಲಕ್ಕೆ ಸತ್ಕಾರ್ಯದಿಂದ ಇಡೀ ಜಗತ್ತಿಗೆ ದೀಪ ಬೆಳಗಿಸುವ ಸಂದೇಶ ನೀಡಿದರು.

ಕನ್ನಡಿಗರು ದುಬೈಯು ಯದುವೀರ್ ಚಾಮರಾಜ ಓಡೆಯರ್ ಅವರಿಗೆ ” ಸಾಂಸ್ಕೃತಿಕ ರಾಯಭಾರಿ” ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಕೆಪಿಸಿಸಿ ಕೂಡ ಮಹಾರಾಜರಿಗೆ ಗೌರವ ಸಲ್ಲಿಸಿದರು. ಕನ್ನಡಿಗರು ದುಬೈ ಈ ವರ್ಷದಿಂದ ಆರಂಭಿಸಿರುವ ಸನ್ಮಾನ ” ಡಾ.ಪುನೀತ್ ರಾಜಕುಮಾರ್ ಕನ್ನಡ ರತ್ನ” ಪ್ರಶಸ್ತಿಯನ್ನು ಬಹರೇನ್ ಕರ್ನಾಟಕ ಸಂಘಕ್ಕೆ ಕೊಡಲಾಯಿತು. ಇದು ಅವರ ಗಲ್ಫ್ ರಾಷ್ಟ್ರದಲ್ಲೇ ಮೊದಲ ಕನ್ನಡ ಭವನವನ್ನು ಕಟ್ಟಿಸಿರುವದ್ದಕ್ಕಾಗಿ ಗುರುತಿಸಿ ಸನ್ಮಾನಿಸಲಾಯಿತು. ಪ್ರದೀಪ್ ಶೆಟ್ಟಿ, ಬಹರೇನ್ ಕರ್ನಾಟಕ ಸಂಘದ ಅಧ್ಯಕ್ಷರು ಈ ಪ್ರಶಸ್ತಿಯನ್ನು ಮಹಾರಾಜರಿಂದ ಸ್ವೀಕರಿಸಿದರು. ಕಾರ್ಯಕ್ರಮದ ಮುಖ್ಯ ಕಾರ್ಯಸೂಚಿಗಳಲ್ಲಿ ಪ್ರಕಾರ ವೇದಿಕೆಯು ಕರ್ನಾಟಕ ಹಾಗು ಯುಎಇಯ ವಿವಿಧ ಉದ್ಯಮಗಳ ಹಲವಾರು ಗಣ್ಯರು, ಸಮಾಜ ಸೇವಕರು, ಪತ್ರಿಕಾ ಲೋಕದ ಸಾಧಕರು, ಶಿಕ್ಷಣ, ವೈದ್ಯಕೀಯ, ಕವಿಗಳು, ಬರಹಗಾರರು, ಕನ್ನಡ ಚಲನಚಿತ್ರೋದ್ಯಮದ ಶ್ರೇಷ್ಠ ತಾರೆಗಳು ಮತ್ತು ಕಲಾವಿದರನ್ನು ಗೌರವಿಸಿದೆ. ಈ ಕಾರ್ಯಕ್ರಮದ ಇನ್ನೊಂದು ಆಕರ್ಷಣೆಯಾಗಿ ಕಿಶೋರ್ ಕುಮಾರ್ ಮತ್ತು ಫಣೀಂದ್ರ ಕುಮಾರ್ ತಯಾರಿಸಿರುವ ರೋಬೋಟ್ ನ್ನು ಪ್ರಶಸ್ತಿ ಕೊಡಲು ಬಳಸಲಾಯಿತು.
ಕಾರ್ಯಕ್ರಮದಲ್ಲಿ ಭರತನಾಟ್ಯ, ಜನಪದ ಹಾಡುಗಳು, ಹಲವು ಕಲಾವಿದರಿಂದ ಸಮೂಹ ನೃತ್ಯಗಳು, ರವಿ ಸಂತು ಮತ್ತು ತಂಡದವರಿಂದ ಅದ್ಭುತವಾದ ಗಾನ ಸಂಗಮ, ಸಾಯಿ ರಮೇಶ್ (ನೃತ್ಯ ನಿರ್ದೇಶಕ), ಪ್ರಸನ್ನ, ಲಾಜುವತಿ, ಮಂಜು ಪಾವಗಡ, ಶ್ರೀಕಾಂತ, ರಾಮದಾಸ್ ತಂಡದಿಂದ ಅಮೋಘ ನೃತ್ಯ ಕಾರ್ಯಕ್ರಮಗಳು ನಡೆದವು. ಮಣಿವೆಂಕಟಪ್ಪ ಅವರು ಹೆಚ್ಚು ರೋಮಾಂಚನಕಾರಿ ಪ್ರದರ್ಶನ ನೀಡಿ ಕಾರ್ಯಕ್ರಮಕ್ಕೆ ನೆರೆದಿದ್ದ ಪ್ರೇಕ್ಷಕರನ್ನು ಹುರಿದುಂಬಿಸಿದರು.

ಕೃತಜ್ಞತೆ ಸಲ್ಲಿಸುವ ಸಂದರ್ಭದಲ್ಲಿ ಶಿವಕುಮಾರ್ ಮತ್ತು ಸದನ್ ದಾಸ್ ಅವರು ಕೆಪಿಸಿಸಿ ಮತ್ತು ಕನ್ನಡಿಗರು ದುಬೈನ ಇಡೀ ತಂಡವನ್ನು ವೇದಿಕೆಗೆ ಕರೆದು ಕಾರ್ಯಕ್ರಮವನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸಲು ಶ್ರಮಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು ಹಾಗು ವರ್ಷಗಳಿಂದ ಹಲವು ದಾಖಲೆ ಕಾರ್ಯಕ್ರಮಗಳನ್ನು ನಿರ್ಮಿಸಿರುವ ಕನ್ನಡಿಗರು ದುಬೈನ ಪಟ್ಟಿಗೆ ಮತ್ತೊಂದು ಮೈಲಿಗಲ್ಲು/ಗರಿಯನ್ನು ಸೃಷ್ಟಿಸಿದೆ ಎಂದು ಹೇಳಿದರು. ಅಲ್ಲದೆ, ಈ ಕಾರ್ಯಕ್ರಮವನ್ನು ಸಾಧ್ಯವಾಗಿಸಿದ ಎಲ್ಲಾ ಪ್ರಾಯೋಜಕರು ಮತ್ತು ಎಲ್ಲಾ ಬೆಂಬಲಿಗರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಶಿವಕುಮಾರ್ ಅವರು ಜರ್ಮನಿಯ ಕೆಪಿಸಿಸಿ ಅಧ್ಯಕ್ಷರಾದ ವಿಧುಷಿ.ಶ್ರೀಮತಿ ನಂದಿನಿ ನಾರಾಯಣ್ ಅವರಿಗೆ ಮುಂದಿನ ವಿಶ್ವ ಕನ್ನಡ ಹಬ್ಬ -2023 ಅನ್ನು ಜರ್ಮನಿಯಲ್ಲಿ ನಡೆಸಲಾಗುವುದು ಎಂದು ಘೋಷಿಸಿದರು.

ವರದಿ: ಅರುಣ್ ಕುಮಾರ್ ಎಂ.ಕೆ, ದುಬೈ

Comments are closed.