UAE

ಉದ್ಯಮಿ, ದಾನಿ ಹರೀಶ್ ಶೇರಿಗಾರ್ ಸಹಿತ ಮೂವರಿಗೆ ಪ್ರತಿಷ್ಠಿತ ‘ಗಡಿನಾಡ ರತ್ನ’ ಪ್ರಶಸ್ತಿ ಪ್ರದಾನ

Pinterest LinkedIn Tumblr

ದುಬೈ: ಅನಿವಾಸಿ ಉದ್ಯಮಿ, ಖ್ಯಾತ ಗಾಯಕ, ‘ಆಕ್ಮೇ’ ಗ್ರೂಪ್ಸ್ ಹಾಗೂ ‘ಕನ್ನಡಿಗವರ್ಲ್ಡ್’ ವೆಬ್‌ಸೈಟ್ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್ ಅವರಿಗೆ ದುಬೈನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯು ಪ್ರತಿಷ್ಠಿತ ‘ಗಡಿನಾಡ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.

ದುಬೈನ ಅಲಸಫಾ ಪ್ರದೇಶದಲ್ಲಿರುವ ಜಗದ್ಗುರು ಸುತ್ತೂರು ಸಂಸ್ಥಾನ ಶಾಲಾ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ನಡೆಯಿತು.

ಇದೇ ವೇಳೆ ಮಾಜಿ ಸಚಿವ ಜೆ. ಕೃಷ್ಣ ಪಾಲೇಮಾರ್ ಹಾಗೂ ಅಬುಧಾಬಿ ಜಾಯೇದ್ ಫೌಂಡೇಶನ್ ಹಿರಿಯ ಆರ್ಥಿಕ ನಿಯಂತ್ರಣ ಅಧಿಕಾರಿ ಅಬ್ದುಲ್ಲಾ ಮಡುಮೂಲೆ ಅವರು ‘ಗಡಿನಾಡ ರತ್ನ’ ಪ್ರಶಸ್ತಿ ನೀಡಲಾಯಿತು.

ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇದರ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಪಮ್ಮಿ ಕೊಡಿಯಾಲ್ ಬೈಲ್ ಅವರಿಗೆ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ದುಬೈಯಲ್ಲಿ ನಡೆಯುತ್ತಿರುವ ಗಡಿನಾಡ ಉತ್ಸವಕ್ಕೆ ಆತ್ಮೀಯ ಸ್ವಾಗತ ನೀಡಲಾಯಿತು.

ಶಾಸಕರಾದ ರಘುನಾಥ ರಾವ್ ಮಲ್ಕಾಪುರೆ, ಪ್ರಕಾಶ್ ರಾಥೋಡ್, ರಾಜ್ಯ ಗಡಿನಾಡು ಅಭಿವೃದ್ಧಿ ನಿಗಮದ ಅಧ್ಯಕ್ಷ, ಮಾಜಿ ಐಎಎಸ್ ಅಧಿಕಾರಿ ಸಿ. ಸೋಮಶೇಖರ್, ಮಂಜೇಶ್ವರದ ಶಾಸಕ ಎ.ಕೆ.ಎಂ. ಅಶ್ರಫ್,ಕ್ವಾಲಿಟಿ ಇಂಡಿಯಾ ಫೌಂಡೇಶನ್ ಅಧ್ಯಕ್ಷ ಡಾ. ವೆಂಕಟೇಶ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

Comments are closed.