UAE

ವಿಜೃಂಭಣೆಯಿಂದ ಜರುಗಿದ ಮಾರ್ಗದೀಪ ಸಾರ್ವಜನಿಕ ಗಣೇಶ ಉತ್ಸವ 2022

Pinterest LinkedIn Tumblr

ಮಾರ್ಗದೀಪ ಸಾರ್ವಜನಿಕ ಗಣೇಶ ಉತ್ಸವ 2022 ವಿಜ್ರಂಭಣೆಯಿಂದ ಸಮಿತಿಯ ಅಧ್ಯಕ್ಷರ ನೇತೃತ್ವದಲ್ಲಿ ಅಜ್ಮನ್ ಇಂಡಿಯನ್ ಸಭಾಂಗಣದಲ್ಲಿ ನೆರವೇರಿತು.

ಬೆಳಿಗ್ಗೆ ಗಣಹೋಮದೊಂದಿಗೆ ಆರಂಭಗೊಂಡು ಪುರೋಹಿತರಾದ ಸುಬ್ರಹ್ಮಣ್ಯ ಅಂಗಡಿಗ ಬೆಂಗಳೂರು ಮತ್ತು ತಂಡದಿಂದ ವೇದಮಂತ್ರ , ಪುರೋಹಿತರ ಶ್ರೀ ರಘು ಭಟ್, ರಾಜೇಶ್ಧ್ಯಾ ಅಡಿಗ ಹಾಗೂ ಶ್ರೀ ಭಟ್ ಇವರ ನೇತೃತ್ವದಲ್ಲಿ ನಂತರ ಮಧ್ಯಾಹ್ನ ಮಹಾ ಪೂಜೆ ನಂತರ ಅನ್ನಸಂತರ್ಪಣೆ ನಡೆಯಿತು.

ವಿವಿಧ ಕಲಾ ತಂಡಗಳು ನೃತ್ಯ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮ, ಹುಲಿ ವೇಷ, ಚೆಂಡೆ ಮೇಳ ನಡೆಸಿಕೊಟ್ಟರು, ಸಭೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಕೃಷ್ಣ ಜೆ. ಪಾಲಿಮರ್ ಉಮನಾಥ ಕೋಟಿಯನ್ ಆಗಮಿಸಿದ್ದರು ,ಶ್ರೀ ಉಮನಾಥ ಕೋಟ್ಯಾನ್ ಸಭೆ ಯನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲ ಸಮುದಾಯದ ಜನರನ್ನು ಒಟ್ಟು ಸೇರಿಸುವ ಮೂಲಕ ನಾವೆಲ್ಲರೂ ಒಂದೇ ದೇಶದ ಜನರು ಎಂಬುದು ಈ ಕಾರ್ಯಕ್ರಮದಲ್ಲಿ ತಿಳಿದು ಬಂದಿದೆ ಎಂದರು.

ಕೃಷ್ಣ ಪಾಲಿಮರ್ ಮಾತನಾಡಿ, ಪ್ರತಿ ವರ್ಷ ಗಣೇಶ ಉತ್ಸವ ಕ್ಕೆ ಬರುತ್ತಿದೆನೆ ಆದರೆ ಈ ಬಾರಿ ತುಂಬಾ ತುಂಬಾ ಚೆನ್ನಾಗಿದೆ, ತುಂಬಾ ಸಂಖ್ಯೆಯಲ್ಲಿ ಜನ ಸೇರಿ, ಪ್ರತಿ ಕನ್ನಡ ಪರ ಸಂಘಟನೆಯನ್ನು ಒಟ್ಟುಗೂಡಿಸಿ ಜಾತಿ ಮತ ಭೇದ ಭಾವ ಇಲ್ಲದೆ ಕಾರ್ಯಕ್ರಮ ನೆಡೆಸಿದಕ್ಕೆ ಸಂತೋಷ ವ್ಯಕ್ತಪಡಿಸಿದರು, ಸಮಿತಿ ಅಧ್ಯಕ್ಷರಾದ ಸುಗಂಧ ರಾಜ್ ಬೇಕಲ್ ಎಲ್ಲರನ್ನೂ ಸ್ವಾಗತಿಸಿ ಎಲ್ಲ ಕಾರ್ಯಕ್ರಮ ನಡೆಸಲು ಸಹ ಮಾಡಿದ ಪ್ರಯೋಜಕರು,ವ್ಯಕ್ತಿಗಳು, ಸಂಘಟನೆಗಳು ಮಾಧ್ಯಮದವರು ಎಲ್ಲರನ್ನೂ ಸ್ವಾಗತಿಸಿದರು ಮಾರ್ಗದೀಪ ಸಮಿತಿಯ ಸದಸ್ಯರಾದ ಮಹೇಶ್ ಹವಲ್ದಾರ್ ದಂಪತಿಯವರನ್ನು ಸನ್ಮಾನಿಸಲಾಯಿತು.
ಪ್ರಭಾಕರ ಅಂಬಾಲತರೆ ಸಮಿತಿ ನೆಡಸಿದ ಗಣೇಶ ಉತ್ಸವಬಗ್ಗೆ ಮಾತನಾಡಿದರು.

ಉಪಾಧ್ಯಕ್ಷ ಅಜಿತ್ ಕೊರಕೊಡು ಧನ್ಯವಾದ ಹೇಳಿದರು, ಮೆರವಣಿಗೆ ಮೂಲಕ ಮೂರ್ತಿಯ ವಿಸರ್ಜನೆ ನಡೆಯಿತು.

Comments are closed.