ದುಬೈ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಸ್ವರ ಮಾಂತ್ರಿಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮರಣಾರ್ಥ ವಿಜಯ್ ಪ್ರಕಾಶ್ ಸಂಗೀತ ಸಂಜೆ ಕಾರ್ಯಕ್ರಮ ‘ನೀನೇ ರಾಜಕುಮಾರ’ ದುಬೈನಲ್ಲಿ 2022 ಫೆಬ್ರವರಿ 19 ರಂದು ಅಲ್ ನಸರ್ ಲೀಸರ್ ಲ್ಯಾಂಡ್ ನಲ್ಲಿ ನಡೆಯಿತು.
ರೊನಾಲ್ಡೊ ಮಾರ್ಟಿಸ್,ಉದ್ಯಮಿ ಗುಣಶೀಲ್ ಶೆಟ್ಟಿ, ಉದ್ಯಮಿ ಗಾಯಕ ಹರೀಶ್ ಶೆರಿಗಾರ್, ಗಣೇಶ್ ರೈ ದುಬೈ,ಸಂಘಟಕರಾದ ಅಶೋಕ್ ಬೈಲೂರು,ಇಮ್ರಾನ್ ಖಾನ್ ಎರ್ಮಾಲ್,ದಯಾ ಕಿರೋಡಿಯನ್, ಉದ್ಯಮಿ ಹಿದಯತ್ ಅಡ್ಡೂರು,ಕಾರ್ಯಕ್ರಮ ಸಂಘಟಕರಾದ ಸೆಂತಿಲ್ ಬೆಂಗಳೂರು ಹಾಗೂ ಮಮತ ಮೊದಲಾದವರಿದ್ದರು. ಆರ್.ಜೆ , ಅನುಪಮ ಭಟ್ ನಿರೂಪಿಸಿದರು.
ಕೋವಿಡ್ ಸಂಕಷ್ಟಗಳ ನಂತರ ನಡೆಯುತ್ತಿರುವ ಪ್ರಥಮ ಕನ್ನಡ ಸಂಗೀತ ಕಾರ್ಯಕ್ರಮ ಇದಾಗಿತ್ತು. ದುಬೈನ ಪುನೀತ್ ರಾಜಕುಮಾರ್ ಅಭಿಮಾನಿಗಳು ಆಯೋಜಿಸಿದ್ದರು. ಇದೇ ವೇಳೆ ವಿಜಯ ಪ್ರಕಾಶ್ ಹಾಗೂ ಹರೀಶ್ ಶೇರಿಗಾರ್ ‘ಮೋಕೆದ ಸಿಂಗಾರಿ’ ಹಾಡು ಎಲ್ಲರ ಮನಸೆಳೆಯಿತು.
Comments are closed.