Saudi Arabia

ಕುಂದಾಪುರದ ಆಲ್ವಿನ್ ಡಿಸೋಜಾ ಸೌದಿಯಲ್ಲಿ ಅಕಸ್ಮಿಕ ಮರಣ

Pinterest LinkedIn Tumblr

ಕುಂದಾಪುರ: ಇಲ್ಲಿನ ಚಿಕ್ಕನ್ ಸಾಲ್ ರಸ್ತೆಯ ನಿವಾಸಿ ಆಲ್ವಿನ್ ಡಿಸೋಜಾ (48) ಸೌದಿ‌ಅರೇಬಿಯಾದ ರಿಯಾದ್‌ನಲ್ಲಿ ಅವರು ಕೆಲಸ ಮಾಡುವ ಕಂಪೆನಿಯ ಕಛೇರಿಯಲ್ಲಿ ತಲೆ ತಿರುಗಿದಂತಾಗಿ ಬಿದ್ದು ಸಾವನ್ನಪ್ಪಿದ್ದಾರೆ. ಅವರು ಹಾಗೆ ಬೀಳುವಾಗ ಹಿಂಬದಿಯಾಗಿ ಸಮೀಪದಲ್ಲಿದ್ದ ಕಾಂಕ್ರೀಟ್ ರ್‍ಯಾಕ್ಸ್‌ಗೆ ಅವರ ತಲೆಗೆ ಬಡಿದು, ತಲೆಯ ಹಿಂಬಾಗಕ್ಕೆ ಮಾರಣಾಂತಿಕ ಪೆಟ್ಟಾಗಿದೆ. ತಕ್ಷಣ ಆಸ್ಪತ್ರೆ ದಾಖಲಿಸಿ ಶಸ್ತ್ರ ಚಿಕಿತ್ಸೆ ನೀಡಿದ್ದಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಭಾನುವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

alwyn

ಮೃತ ಆಲ್ವಿನ್ ಅವರು ಸೈಪ್ರಸ್ ದೇಶದ ಹೆಸರಾಂತ ಜೆ ಆಂಡ್ ಪಿ ಕನ್ಸಟ್ರಕ್ಷನ್ (ಏರ್ ಪೊರ್ಟ್ ಮತ್ತು ಸೇತುವೆಗಳ ನಿರ್ಮಾಣದ) ಹೆಸಾರಾಂತ ಕಂಪೆನಿಯ ಸಾರಿಗೆ ವಿಭಾಗದಲ್ಲಿ ಸುಮಾರು 24 ವರ್ಷಗಳಷ್ಟು ಸೇವೆ ಸಲ್ಲಿಸಿದ್ದರು.

ಅಲ್ವಿನ್ ಎರಡು ತಿಂಗಳ ರಜೆ ಮುಗಿಸಿ ಅ.2 ರಂದು ಸೌದಿ‌ಅರೇಬಿಯಾಕ್ಕೆ ತೆರಳಿ ಕಂಪೆನಿಯ ಕಛೇರಿಯಲ್ಲಿ ಕೆಲಸ ಆರಂಭಿಸಿದ್ದಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ಅಲ್ವಿನ್ ಮೂಲತ: ಬ್ರಹ್ಮಾವರದ ಉಪ್ಪಿನ ಕೋಟೆಯ ಪೀಟರ್ ಡಿಸೋಜಾ ಇವರ ಪುತ್ರರಾಗಿದ್ದು ಇವರು ಬಹಳ ವರ್ಷಗಳ ಹಿಂದೆಯೇ ಕುಂದಾಪುರದಲ್ಲಿ ವಾಸ್ತವ್ಯ ಹೊಂದಿದ್ದರು. ಅವರು ಕುಂದಾಪುರದ ಕೆ.ಬಾವ್ತಿಸ್ ಡಿಸೋಜಾ ಆಳಿಯರಾಗಿದ್ದು, ಪತ್ನಿ ಪ್ರಮೀಳ ಮತ್ತು ಓರ್ವ ಪುತ್ರಿ, ಸಹೋಧರಿ ಮತ್ತು ಆಪಾರ ಬಂಧು ಬಳಗವನ್ನು ಅಗಲಿದ್ದಾರೆ.

Write A Comment