Bahrain

ದ.ಕ. ಮುಸ್ಲಿಂ ವೆಲ್ಪೇರ್ ಅಸೋಸಿಯೇಷನ್ ಬಹರೈನ್ ವತಿಯಿಂದ ಅಶಕ್ತರಿಗೆ ಕಿಟ್, ವಾರಿಯರ್ಸ್’ಗೆ ಸನ್ಮಾನ

Pinterest LinkedIn Tumblr

ಕುಂದಾಪುರ: ಉದ್ಯಮಿಗಳು ತಾವು ದುಡಿದ ಹಣದಲ್ಲಿ ಸ್ವಲ್ಪ ಭಾಗವನ್ನು ಸಮಾಜದ ಸತ್ಕಾರ್ಯಕ್ಕೆ ಬಳಸಿದಾಗ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಬಹರೈನ್ ಅಧ್ಯಕ್ಷ ಲೀಲಾಧರ್ ಬೈಕಂಪಾಡಿ ಹೇಳಿದರು.

ಸೋಮವಾರದಂದು ಬಡಾಕೆರೆ ಸರಕಾರಿ ಶಾಲೆಯ ಆವರಣದಲ್ಲಿ ದಕ್ಷಿಣ ಕನ್ನಡ ಮುಸ್ಲಿಂ ವೆಲ್ಪೇರ್ ಅಸೋಸಿಯೇಷನ್ ಬಹರೈನ್ ಇವರ ವತಿಯಿಂದ ಹಮ್ಮಿಕೊಳ್ಳಲಾದ ಅಶಕ್ತರಿಗೆ ಕಿಟ್ ವಿತರಣೆ ಹಾಗೂ ಕೊರೋನಾ ವಾರಿಯರ್ಸ್ ಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಹಮ್ಮದೀಯ ಜುಮ್ಮ ಮಸೀದಿ ಆಕಳಬೈಲು ಕಿರಿಮಂಜೇಶ್ವರ ಇಸ್ಮಾಯಿಲ್ ಹಜಾರ್ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಪರೋಪಕಾರದ ಮ‌ೂಲಕ ಎಲ್ಲರೂ ಸರ್ವಧರ್ಮ ಸಮನ್ವಯತೆಯಿಂದ ಬಾಳುವ ಸಮಾಜ ನಿರ್ಮಾಣವಾಗಬೇಕು ಎಂದು ಹೇಳಿದರು.

ದಕ್ಷಿಣ ಕನ್ನಡ ಮುಸ್ಲಿಂ ವೆಲ್ಪೇರ್ ಅಸೋಸಿಯೇಷನ್ ಬಹರೈನ್ ಉಪಾಧ್ಯಕ್ಷ ಉಮರ್ ಸಾಹೇಬ್, ಮಾಜಿ ಗ್ರಾ.ಪಂ.ಸದಸ್ಯ ದಿನೇಶ್ ಶೆಟ್ಟಿ, ಶ್ರೀಧರ ದೇವಾಡಿಗ,
ಕಾರ್ಯಕ್ರಮದ ಸಂಯೋಜಕ ಮುಭಾರಕ್ ಬಾರ್ಕೂರು, ಹಸನ್ ಮೆವಾಡ ಬೈಂದೂರು, ಅಬ್ದುಲ್ ರಜಾಕ್ ಕಾರ್ಯಕ್ರಮದಲ್ಲಿ ‌ಉಪಸ್ಥಿತರಿದ್ದರು.

ಬಿ.ಅಬ್ದುಲ್ ಹಮೀದ್ ಸ್ವಾಗತಿಸಿ, ಕಾರ್ಯಕ್ರಮ ‌ನಿರೂಪಿಸಿದರು.

Comments are closed.